ಮುರಿದು ಬಿದ್ದ ಮದುವೆ: ವರದಕ್ಷಿಣೆ, ಮಾನಹಾನಿ ಪ್ರಕರಣ ದಾಖಲುಸೋಮವಾರಪೇಟೆಯಯಲ್ಲಿ ಮೇ 5ರಂದು ನಿಗದಿಯಾಗಿದ್ದ ಮದುವೆಯೊಂದು ಕ್ಷುಲ್ಲಕ ಕಾರಣಕ್ಕೆ ರದ್ದುಗೊಂಡಿದ್ದಿಂದ ಆಕ್ರೋಶಗೊಂಡ ವಧುವಿನ ಕಡೆಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಸೋಮವಾರಪೇಟೆಯ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಮಾನಹಾನಿ, ವಂಚನೆ ಇನ್ನಿತರ ಪ್ರಕರಣಗಳು ದಾಖಲಾಗಿವೆ.