ಸುಂಟಿಕೊಪ್ಪ ಹೋಬಳಿಯ ಪ್ರೌಢಶಾಲೆ ಉತ್ತಮ ಸಾಧನೆ

| Published : May 10 2024, 01:30 AM IST / Updated: May 10 2024, 01:31 AM IST

ಸುಂಟಿಕೊಪ್ಪ ಹೋಬಳಿಯ ಪ್ರೌಢಶಾಲೆ ಉತ್ತಮ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತನೇ ತರಗತಿಯ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಹೋಬಳಿಯ ಶಾಲೆಗಳು ಉತ್ತಮ ಸಾಧನೆ ಮಾಡಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಹತ್ತನೇ ತರಗತಿಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಸುಂಟಿಕೊಪ್ಪ ಹೋಬಳಿಯ ಪ್ರೌಢಶಾಲೆಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಮಕ್ಕಳು ಪೋಷಕರು ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ. ಕೊಡಗರಹಳ್ಳಿಯ ಶಾಂತಿನೀಕೇತನ ಪ್ರೌಢಶಾಲೆ ಮತ್ತು ಸುಂಟಿಕೊಪ್ಪದ ಸಂತಮೇರಿ ಪ್ರೌಢಶಾಲೆ ಶೇ100 ಫಲಿತಾಂಶ ಪಡೆದಿವೆ. ಶಾಂತಿನಿಕೇತನ ಶಾಲೆಯ 84 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 21 ಮಕ್ಕಳು ಮತ್ತು ಪ್ರಥಮದರ್ಜೆಯಲ್ಲಿ 57 ಹಾಗೂ ದ್ವಿತೀಯ ಶ್ರೇಣಿಯಲ್ಲಿ 06 ಮಕ್ಕಳು ಉತ್ತೀರ್ಣರಾಗಿದ್ದು ಈ ಪೈಕಿ ಡಿಲಿಶಾ ಮುತ್ತಮ್ಮ ಪಿ.ಡಿ. 608 ಅಂಕಗಳಿಸಿ ಶೇ. 97.28 ಅಂಕಗಳನ್ನು ಗಳಿಸಿದ್ದು ದ್ವಿತೀಯ ಸ್ಥಾನದಲ್ಲಿ ನಿಶ್ಮಿತಾ 597 ಅಂಕಗಳಿಸಿ ಶೇ. 95.52 ಅಂಕಗಳನ್ನು ಗಳಿಸಿದ್ದಾರೆ, ಆಯುಶ್ ಗೌಡ ಶೇ.93.28 ಅಂಕಗಳೊಂದಿಗೆ 3ನೇ ಸ್ಥಾನ ಹಂಚಿಕೊಂಡಿದ್ದಾರೆ.

ಸಂತಮೇರಿ 92 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಅತ್ಯುನ್ನತ್ತ ಶ್ರೇಣಿಯಲ್ಲಿ ಓರ್ವ ಬಾಲಕ 5 ಮಂದಿ ಬಾಲಕಿಯರು ಒಟ್ಟು 06 ಮಂದಿ ತೇರ್ಗಡೆಗೊಂಡರೇ, ಪ್ರಥಮ ಶ್ರೇಣಿಯಲ್ಲಿ 27 ಮಂದಿ ಬಾಲಕರು, 25 ಮಂದಿ ಬಾಲಕಿಯರು ಸೇರಿ ಒಟ್ಟು 52 ತೇರ್ಗಡೆಗೊಂಡರೆ, ದ್ವಿತೀಯ ಶ್ರೇಣಿಯಲ್ಲಿ 19 ಮಂದಿ ಬಾಲಕರು 5 ಮಂದಿ ಬಾಲಕಿಯರು ತೇರ್ಗಡೆಗೊಂಡಿದ್ದು ತೃತೀಯ ಶ್ರೇಣಿಯಲ್ಲಿ 9 ಮಂದಿ ಬಾಲಕರು, ಓರ್ವ ಬಾಲಕಿ ತೇರ್ಗಡೆಗೊಂಡಿದ್ದಾರೆ. ಈ ಪೈಕಿ ಲೋಹಿತ್ ಆರ್. 577 ಶೇ. 92.32, ಶಿಫಾ.ಎಸ್. 560 89.60, ಜಿ.ಪೂಜಿತ ಪೂಜಾರಿ ಶೇ. 88.80 ಅಂಕಗಳೊಂದಿಗೆ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆ ಹತ್ತನೇ ತರಗತಿಯಲ್ಲಿ 40 ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಉನ್ನತ ಶ್ರೇಣಿಯಲ್ಲಿ 07 ಮಂದಿ ಉತ್ತೀರ್ಣರಾಗಿದ್ದು, ಪ್ರಥಮ ಶ್ರೇಣಿಯಲ್ಲಿ 13 ಮಂದಿ, ದ್ವಿತೀಯ ಶ್ರೇಣಿಯಲ್ಲಿ 15 ಮಂದಿ, ತೃತೀಯ ಶ್ರೇಣಿಯಲ್ಲಿ 04 ಉತ್ತೀರ್ಣರಾಗಿದ್ದು ಒಟ್ಟು 39 ಮಕ್ಕಳು ಉತ್ತೀರ್ಣರಾಗುವುದರೊಂದಿಗೆ ಶೇ. 98 ಪಡೆದುಕೊಂಡಿತು.

ಸುಂಟಿಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ 28 ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಪ್ರಥಮ ಶ್ರೇಣಿಯಲ್ಲಿ 15 ಮಂದಿ, ದ್ವಿತೀಯ ಶ್ರೇಣಿಯಲ್ಲಿ 8 ಮಂದಿ, ತೃತೀಯ ಶ್ರೇಣಿಯಲ್ಲಿ 06 ಮಂದಿ ಉತ್ತೀರ್ಣಗೊಂಡಿದ್ದಾರೆ. ಅತ್ಯುನ್ನತ್ತ ಶ್ರೇಣಿಯನ್ನು ಪಡೆದಿಕೊಂಡರೆ 1 ಮಂದಿ ಮಕ್ಕಳು ಉತ್ತೀರ್ಣರಾಗಿದ್ದಾರೆ.

7ನೇ ಹೊಸಕೋಟೆ ಸರ್ಕಾರಿ ಪ್ರಾಢಶಾಲೆ ಹತ್ತನೇ ತರಗತಿಯಲ್ಲಿ 21 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 20 ಉತ್ತೀರ್ಣಗೊಂಡಿದ್ದು, ಶೇ. 95.23 ಫಲಿತಾಂಶ ಪಡೆದುಕೊಂಡಿದೆ.

ಕಾನ್‌ಬೈಲ್ ಸರ್ಕಾರಿ ಪ್ರಾಢಶಾಲೆ ಹತ್ತನೇ ತರಗತಿಯಲ್ಲಿ 12 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ.