ಎಸ್ಎಸ್ಎಲ್ ಸಿ ಪರೀಕ್ಷೆ: ಸಿರಿಗೆ 622 ಅಂಕ

| Published : May 10 2024, 01:31 AM IST

ಸಾರಾಂಶ

ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಸಿರಿ ಹಿಂದಿಯಲ್ಲಿ 100 ಗಣಿತದಲ್ಲಿ 100, ವಿಜ್ಞಾನದಲ್ಲಿ 100 ಅಂಕ ಗಳಿಸಿದ್ದಾರೆ. ಮಲ್ಲೇಶ ಮತ್ತು ಶಾಂಭವಾನಿ ದಂಪತಿಗಳ ಪುತ್ರಿ ಸಿರಿ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ಫಾತಿಮಾ ಕಾನ್ವೆಂಟ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಜಿಲ್ಲೆಗೆ ಪ್ರಥಮ ಹಾಗೂ ದ್ವಿತೀಯ ಮತ್ತು ನಾಲ್ಕನೇಯ ಸ್ಥಾನವನ್ನು ಪಡೆದಿದ್ದಾರೆ. ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಸಿರಿ ಹಿಂದಿಯಲ್ಲಿ 100 ಗಣಿತದಲ್ಲಿ 100 ವಿಜ್ಞಾನದಲ್ಲಿ 100 ಅಂಕ ಗಳಿಸಿದ್ದಾರೆ.ನಾಗೇಗೌಡ ಬಡಾವಣೆಯ ಮಲ್ಲೇಶ ಮತ್ತು ಶಾಂಭವಾನಿ ದಂಪತಿಗಳ ಪುತ್ರಿ ಸಿರಿ .ಎಂ. 625 ರಲ್ಲಿ 622 ಅಂಕ ಪಡೆದು ಶೇ.99.52 ರಲ್ಲಿ ತೇರ್ಗಡೆಯಾಗಿದ್ದಾರೆ. ಹಾಗೂ ಕುಶಾಲನಗರದ ಚೌಡೇಗೌಡ ಬಡಾವಣೆಯ ಎನ್ ಬಿ ಚಂದ್ರಶೇಖರ್ ಮತ್ತು ಸಜನಿ ದಂಪತಿಗಳ ಪುತ್ರಿ ತೇಜಸ್ವಿನಿ ಎನ್‌ ಸಿ 620 ಅಂಕ ಪಡೆದು ಶೇ.99.2 ರಲ್ಲಿ ತೇರ್ಗಡೆಯಾಗಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದ್ದಾರೆ. ತೇಜಸ್ವಿನಿ ಕನ್ನಡ, ಹಿಂದಿ ಮತ್ತು ವಿಜ್ಞಾನ ಪರೀಕ್ಷೆಯಲ್ಲಿ ತಲಾ 100 ಅಂಕ ಪಡೆದಿದ್ದಾರೆ. ಇದೇ ಶಾಲೆಯ ಸಿಂಧು ಅವರು 618 ಅಂಕ ಪಡೆದು ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಸಿಂಧು ಪ್ರಥಮ ಸ್ಥಾನಗಳಿಸಿದ ಸಿರಿ ಅವರು ಅವಳಿ ಜವಳಿ ಮಕ್ಕಳಾಗಿದ್ದು ಇದೊಂದು ವಿಶೇಷ ಸಾಧನೆಯಾಗಿದೆ. ಸಿಂಧು ಅವರಿಗೆ ಹಿಂದಿ ಗಣಿತ ವಿಜ್ಞಾನದಲ್ಲಿ ತಲಾ 100 ಅಂಕ ಲಭಿಸಿದೆ.