ಮೋದಿ ಪ್ರಧಾನಿಯಾದರೆ ದೇಶಕ್ಕೆ ಭದ್ರತೆ ಗ್ಯಾರಂಟಿ : ಬಸನಗೌಡ ಪಾಟೀಲ ಯತ್ನಾಳ

| Published : Apr 19 2024, 01:13 AM IST / Updated: Apr 19 2024, 10:18 AM IST

ಮೋದಿ ಪ್ರಧಾನಿಯಾದರೆ ದೇಶಕ್ಕೆ ಭದ್ರತೆ ಗ್ಯಾರಂಟಿ : ಬಸನಗೌಡ ಪಾಟೀಲ ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮೆಲ್ಲರ ಕೈ, ಕಾಲು ಮುಗಿದು ಕೇಳುತ್ತೇನೆ. ಎಲ್ಲರೂ ಈ ಸಾರಿ ಸಂಸದ ಪಿ.ಸಿ.ಗದ್ದಿಗೌಡರನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು.

 ಬಾಗಲಕೋಟೆ : ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ತುಟಿ ಪಿಟಿಕ್ ಎನ್ನಲಿಲ್ಲ. ಎಲ್ಲವೂ ಸೋನಿಯಾ ಗಾಂಧಿ ಹಿಡಿತದಲ್ಲಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ ದೇಶಕ್ಕೆ ಭದ್ರತೆ, ಶಕ್ತಿ ಬಂದಿದೆ. ಮೋದಿ ಮೂರನೇ ಬಾರಿ ಪ್ರಧಾನಿಯಾದರೆ ದೇಶಕ್ಕೆ ಭದ್ರತೆ ಗ್ಯಾರಂಟಿ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಗುರುವಾರ ಬಿಜೆಪಿ ಬೃಹತ್ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ತಮ್ಮೆಲ್ಲರ ಕೈ, ಕಾಲು ಮುಗಿದು ಕೇಳುತ್ತೇನೆ. ಎಲ್ಲರೂ ಈ ಸಾರಿ ಸಂಸದ ಪಿ.ಸಿ.ಗದ್ದಿಗೌಡರನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಮುಂದಿನ ಸಾರಿ ಗದ್ದಿಗೌಡರು ಮಂತ್ರಿಯಾಗುವ ಯೋಗವಿದೆ. ಜಗದೀಶ ಶೆಟ್ಟರ ಏನಾದರು ಮಂತ್ರಿಸ್ಥಾನಕ್ಕೆ ಲಾಬಿ ಮಾಡಿದರೆ ನಾನು ಅವರ ಮನೆ ಮುಂದೆ ಉಪವಾಸ ಶುರು ಮಾಡುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು.

ತಾವು ವೋಟು ಹಾಕುತ್ತಿರುವುದು ಮೋದಿಗೆ ಮಾಡುತ್ತಿರುವ ಉಪಕಾರವಲ್ಲ. ಭಾರತದ ಅಭಿವೃದ್ಧಿ, ಭದ್ರತೆಗೆ ತಮ್ಮ ಮತ ಹಾಕಬೇಕು. ಕಾಂಗ್ರೆಸ್‌ನವರು ಮೋದಿ ಬಟ್ಟೆ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರೊಬ್ಬ ಪ್ರಧಾನಿ ಎನ್ನುವುದು ಮರೆಯಬಾರದು ಎಂದರು.

ಪ್ರಧಾನ ಮಂತ್ರಿ 14 ವರ್ಷ ಗುಜರಾತ್ ಸಿಎಂ ಇದ್ದರು. 10 ವರ್ಷ ದೇಶದ ಪ್ರಧಾನಿಯಾದರು ಅವರ ಆಸ್ತಿ ಎರಡು ಕೋಟಿ ಇಲ್ಲ. ಬೆಂಗಳೂರಿನ ಗೂಂಡಾಗಳಿಗೆ ಚಹಾ, ಸಿಗರೇಟ್ ಕೊಟ್ಟು ಸೇವೆ ಮಾಡುತ್ತಿದ್ದ ಡಿಸಿಎಂ ಡಿಕೆ ಬದ್ರರ್ಸ್ ಆಸ್ತಿ ₹2 ಸಾವಿರ ಕೋಟಿ ಇದೆ. ವಿಜಯಪುರದಿಂದ ಇಲ್ಲಿಗೆ ಬಂದ ಡಿ.ಕೆ.ಶಿವಕುಮಾರ ಅಭ್ಯರ್ಥಿ ಫಿಕ್ಸ್ ಮಾಡಿದ್ದಾರೆ. ಸಂಯುಕ್ತ ಪಾಟೀಲ ಗೆದ್ದರೇ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸುತ್ತಾರೆ. ಆದ್ದರಿಂದ ಹಾಲುಮತದವರು ನೋಡಿಕೊಂಡು ಮತ ಹಾಕಿ ಅಂತ ಮನವಿ ಮಾಡಿದರು.

ಅಂಗಡಿಯಲ್ಲಿ ಹನುಮಾನ ಚಾಲೀಸ್ ಹಚ್ಚಿದರೆ, ಜೈ ಶ್ರೀರಾಮ ಕೂಗಿದವರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಹೋಟೆಲ್‌ಗೆ ರಾಮೇಶ್ವರ ಹೆಸರಿಟ್ಟರೆ ಬಾಂಬ್ ಇಡುತ್ತಾರೆ. ಇದನ್ನು ಯೋಚಿಸಬೇಕು. ಕಾಂಗ್ರೆಸ್‌ಗೆ ವೋಟ್ ಹಾಕಿದರೇ ದೇಶದ ಪರಿಸ್ಥಿತಿ ಗಂಭೀರವಾಗುತ್ತದೆ. ನಾನು ಗೃಹ ಮಂತ್ರಿಯಾದರೆ, ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿಯಾದರೆ ಪೊಲೀಸರಿಗೆ ಪುಲ್ ಪವರ್ ಕೊಟ್ಟು, ಪಾಕಿಸ್ತಾನ ಜಿಂದಾಬಾದ್‌ ಅಂತ ಹೇಳುವುದಕ್ಕಿಂತ ಮೊದಲೇ ಡಮ್ ಎನಿಸುತ್ತೇನೆ ಎಂದು ಹೇಳಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಉತ್ತಮ ವಾತಾವರಣ ಇದೆ. ಇದು ರ್‍ಯಾಲಿಯಲ್ಲ, ಗೆಲುವಿನ ವಿಜಯೋತ್ಸವ. ರಾಮ ಮಂದಿರ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಸಿಎಎ ಜಾರಿಗೆ ಬರಲಿದೆ. ಪಿ.ಸಿ.ಗದ್ದಿಗೌಡರ ಅತ್ತುತ್ತಮ ಸಂಸದ ರತ್ನ ಪ್ರಶಸ್ತಿ ಪಡೆದಿದ್ದಾರೆ. ಅವರಿಗೆ ಮತ ನೀಡಬೇಕು. ಪಾಕಿಸ್ತಾನದವರು ಮೋದಿ ಬೇಕು ಅಂತ ಹೇಳುತ್ತಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳಬೇಕು.

-ಜಗದೀಶ ಶೆಟ್ಟರ, ಮಾಜಿ ಸಿಎಂ

 10 ವರ್ಷ ಪ್ರಧಾನಿಯಾದರೂ ಮನಮೋಹನ ಸಿಂಗ್ ಮಾತನಾಡಲಿಲ್ಲ. ಮೋದಿ ಪ್ರಧಾನಿಯಾದ ಬಳಿಕ ವಿಶ್ವದಲ್ಲಿ ಭಾರತ ಹೆಸರು ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ. ನನ್ನ ಬಗ್ಗೆ ಕೆಲವರು ಟಿಂಗಲ್ ಮಾಡುತ್ತಿದ್ದಾರೆ. ಬೀಳಗಿ ಮತಕ್ಷೇತ್ರದಲ್ಲಿ 20 ಸಾವಿರ ಲೀಡ್ ಕೊಡಿಸುತ್ತೇನೆ. ಬಿಜೆಪಿ ಗೆಲ್ಲಿಸಿ ದೇಶ ಉಳಿಸಿ.

-ಮುರಗೇಶ ನಿರಾಣಿ, ಮಾಜಿ ಸಚಿವ

-ಪ್ರಧಾನಿ ಮೋದಿ ನಾಯಕತ್ವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೆಚ್ಚಿದ್ದಾರೆ. 70 ದಶಕದಲ್ಲಿ ಇಂತಹ ಪ್ರಧಾನಿ ನೋಡಿಲ್ಲ ಅಂತ ಹೇಳಿದರು. ಬಾದಾಮಿ ಮತಕ್ಷೇತ್ರದಲ್ಲಿ 30 ಸಾವಿರ ಲೀಡ್ ಕೊಡಿಸುತ್ತೇನೆ. ಈ ಸಾರಿ ಗದ್ದಿಗೌಡರ ಗೆಲವು ನಿಶ್ಚಿತ.

-ಹನುಮಂತ ನಿರಾಣಿ. ಜೆಡಿಎಸ್ ಜಿಲ್ಲಾಧ್ಯಕ್ಷ

ದೇಶಕ್ಕೆ ಪ್ರಧಾನಿ ಮೋದಿ ಕೊಡುಗೆ ಅಪಾರವಾಗಿದೆ. ಅಭಿವೃದ್ಧಿ ಪಥ ಸಂಪೂರ್ಣ ಬದಲಾಗಿದೆ. ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡಲು ಎಲ್ಲರು ಬೆಂಬಲಿಸಬೇಕು.

-ವೀರಣ್ಣ ಚರಂತಿಮಠ ಮಾಜಿ ಶಾಸಕ