ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಪೋಕ್ಸೊ ಕೇಸು ದಾಖಲಿಸಲು ಆಗ್ರಹ

| Published : May 02 2024, 12:23 AM IST / Updated: May 02 2024, 12:54 PM IST

ಸಾರಾಂಶ

ಪತ್ರಿಕಾಗೋಷ್ಠಿಯಲ್ಲಿ ವಕೀಲ ಎಂ.ಸಿ. ನರಹರಿ ಮಾತನಾಡಿ ಸಂಸದ ಪ್ರಜ್ವಲ್‌ ರೇವಣ್ಣ ರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

 ಚಿತ್ರದುರ್ಗ :  ಅಪ್ರಾಪ್ತ ಬಾಲಕಿಯರು ಸಹ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದರಿಂದ ಪೋಕ್ಸೋ, ಸುಮೊಟೋ ಕೇಸು ದಾಖಲಿಸುವಂತೆ ಹಿರಿಯ ವಕೀಲ ಡಾ.ಎಂ.ಸಿ.ನರಹರಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜ್ಜ ಪ್ರಧಾನಿ, ಅಪ್ಪ ಸಚಿವ, ಚಿಕ್ಕಪ್ಪ ಮುಖ್ಯಮಂತ್ರಿ, ಆಂಟಿ ಶಾಸಕಿ, ಅಮ್ಮ ಜಿಪಂ ಸದಸ್ಯೆ, ತಮ್ಮ ಎಂಎಲ್‌ಸಿ ಆಗಿದ್ರು ಇವರು ಎಂಪಿ. ಭಾರತ ಕಂಡ ಲಂಪಟ ಸಂಸದ. ಇದು ಭಾರತ ಮಾತೆ ಹೆಸರು ಹೇಳುವ ಬಿಜೆಪಿ ಗೆ ಅತ್ಯಂತ ಮುಜುಗರ. ಇದು ಕಮಲದ ಕರ್ಮವಾಗಿದೆ. ಜೆಡಿಎಸ್ ತೆನೆಹೊತ್ತ ಮಹಿಳಾ ಗುರುತಿಗೆ ನಿಜಕ್ಕೂ ಅವಮಾನವಾಗಿದೆ ಎಂದರು.

ಸಂತ್ರಸ್ತೆಯೊಬ್ಬರು ತನ್ನ ಮಗಳ ಜೊತೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ಆರೋಪಿ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಬಳಸಿಕೊಂಡಿರುವ ಬಗ್ಗೆ ಮೇಲ್ನೋಟಕ್ಕೆ ಅನುಮಾನ ಇದೆ. ಪ್ರಕರಣದಲ್ಲಿ ಆರೋಪಿಯಿಂದ ಅಪ್ರಾಪ್ತ ಹೆಣ್ಣು ಮಕ್ಕಳ ಬಳಕೆ ಪತ್ತೆಯಾದಲ್ಲಿ ಈ ಬಗ್ಗೆ ವರದಿ ನೀಡುವಂತೆ ಎಸ್‍ಐಟಿಗೆ ಪತ್ರ ಬರೆದಿದ್ದಾರೆ.

ಅಂಬೇಡ್ಕರ್ ಬರೆದ ಸಂವಿಧಾನದ ಮಾನಹರಣವಾಗಿದೆ. ಸಂಸತ್‍ನಲ್ಲಿ ಧ್ವನಿಯಾಗಬೇಕಾಗಿದ್ದವನೇ ಕಾಮುಕನಾಗಿದ್ದಾನೆ. ಲೈಂಗಿಕ ಕೃತ್ಯಕ್ಕೆ ಬಳಸಿಕೊಂಡಿರುವರಲ್ಲಿ ಅವಿವಾಹಿತ ಯುವತಿಯರಿದ್ದು ಅವರನ್ನು ಪ್ರಜ್ವಲ್ ವಿವಾಹವಾಗಲಿ ಎಂದರು. ಜೂನಿಯರ್ ದೇವೇಗೌಡರನ್ನು ಕೂಡಲೇ ಜರ್ಮನ್‍ ನಲ್ಲೇ ಬಂಧಿಸಬೇಕು. ಒಂದು ವೇಳೆ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಆಯೋಗ ಪೋಕ್ಸೋ ಪ್ರಕರಣದಡಿ ದೂರು ದಾಖಲಿಸಲು ವಕೀಲ ಎಂ.ಸಿ.ನರಹರಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಓಬಳೇಶ್ ಮತ್ತು ಶಶಿಕುಮಾರ್ ಇದ್ದರು.