ಬಿಜೆಪಿ-ಜೆಡಿಎಸ್ ಮೈತ್ರಿ ಮುಂದೇನು..?

| Published : May 02 2024, 12:20 AM IST / Updated: May 02 2024, 01:55 PM IST

ಸಾರಾಂಶ

ಸಮೀಪದ ಸೂಗೂರಿನಲ್ಲಿ ಬುಧವಾರ ಹೊಳಲೂರು ಮಹಾಶಕ್ತಿ ಕೇಂದ್ರ ವತಿಯಿಂದ ಬಹಿರಂಗ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿತ್ತು.

 ಹೊಳೆಹೊನ್ನೂರು :  ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಮೀಪದ ಸೂಗೂರಿನಲ್ಲಿ ಬುಧವಾರ ಹೊಳಲೂರು ಮಹಾಶಕ್ತಿ ಕೇಂದ್ರ ವತಿಯಿಂದ ಹಮ್ಮಿಕೊಂಡದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧೆ ಬಿಜೆಪಿ ವಿರುದ್ಧ ಸ್ಪರ್ಧಿಸುವವರು ನೂರು ಬಾರಿ ಯೋಚಿಸಬೇಕು. ಆ ರೀತಿಯ ಬಹುಮತಗಳೊಂದಿಗೆ ಬಿ.ವೈ.ರಾಘವೇಂದ್ರ ಗೆದ್ದು ಬರುವಂತೆ ಜನರು ಆಶಿರ್ವಾದ ಮಾಡಬೇಕು ಎಂದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯಿಂದ ದಿವಾಳಿ ಹಂತ ತಲುಪಿದೆ. ಜನ ಹಿತ ಮರೆತು ತುಘಲಕ್ ಆಡಳಿತ ನೆನಪಿಸುವಂತೆ ವರ್ತಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಯಾವೊಬ್ಬ ಮತದಾರರನು ಒಲವು ತೋರುತ್ತಿಲ್ಲ. ಕಾಂಗ್ರೆಸ್‍ಗೆ ದಿಕ್ಕು ದೆಸೆ ಇಲ್ಲ. ನಾಯಕನಿಲ್ಲದ ಹಡಗಿನ ಕಡೆ ತಿರುಗಿ ನೋಡದಂತೆ ಈ ಬಾರಿ ಬಿಜೆಪಿಗೆ ಮತ ನೀಡಬೇಕು ಎಂದರಲ್ಲದೆ, ಮಹಿಳಾ ಮತದಾರರು ಪಕ್ಷ ಬೆಂಬಲಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮಹಿಳಾ ಸಬಲೀಕರಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.

ಮತದಾರರು ಜಾಗೃತರಾಗಿದ್ದಾರೆ, ಚುನಾವಣೆಗಳಲ್ಲಿ ಹಣದ ಬಲ ಬಳಸಿ ಜಾತಿಯ ವಿಷ ಬೀಜ ಬಿತ್ತಿ ಗೆಲುವು ಸಾಧಿಸುವುದು ಸುಲಭವಲ್ಲ. ಪ್ರಧಾನಿ ನರೇಂದ್ರ ಮೊದಿ 10 ವರ್ಷ ದಲ್ಲಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ವಿಶ್ವವೇ ದೇಶದ ಕಡೆ ತಿರುಗಿ ನೋಡುವಂತಾಗಿದೆ. ನಾನು ಜಾರಿ ಮಾಡಿದ ಭಾಗ್ಯಲಕ್ಷ್ಮಿ, ಸುವರ್ಣ ಗ್ರಾಮ, ಸುವರ್ಣ ಭೂಮಿ ಯೋಜನೆಗಳು ನಿಂತು ಹೋಗಿವೆ. ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಘವೇಂದ್ರ ಬಗ್ಗೆ ಕೆಲವರು ಹಗುರವಾಗಿ ಮಾತನಾಡ್ತಿದ್ದಾರೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ. ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ 28 ಸ್ಥಾನವನ್ನೂ ಬಿಜೆಪಿ ಗೆಲ್ಲಲಿದೆ ಎಂದರು.ಶಾಸಕಿ ಶಾರದ ಪೂರ್ಯಾನಾಯ್ಕ್ , ಮಾಜಿ ಶಾಸಕ ಅಶೋಕ್‍ ನಾಯ್ಕ್, ಮಹಿಳಾಧ್ಯಕ್ಷೆ ನಾಗರತ್ನ, ವೈದ್ಯ ಡಾ. ಧನಂಜಯ್ ಸರ್ಜಿ, ದಿನೇಶ್, ಷಣುಖಪ್ಪ, ರವೀಶ್, ನವೀಲಯ್ಯ, ಷಡಕ್ಷರಪ್ಪ, ಬಸವರಾಜಪ್ಪ, ಸಂತೋಷ್, ಕಾಂತರಾಜ್, ಶ್ರೀನಿವಾಸ್ ಇತರರಿದ್ದರು.

ಮರಾಠ ಸಮಾಜ ಹಿಂದಿನಿಂದಲೂ ಬಿಜೆಪಿ ಬೆಂಬಲಿಸಿದೆ: ಯಡಿಯೂರಪ್ಪಹೊಳೆಹೊನ್ನೂರು: ಮರಾಠ ಸಮಾಜ ಯಾವಾಗಲೂ ಬಿಜೆಪಿ ಪಕ್ಷದೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಶಿವಮೊಗ್ಗದ ಗೃಹ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ ಶಿವಮೊಗ್ಗ ಗ್ರಾಮಾಂತರದ ಮರಾಠ ಸಮಾಜ ಮುಖಂಡರ ಸಭೆಯಲ್ಲಿ ಮಾತನಾಡಿ, ಶೌರ್ಯ ಪರಾಕ್ರಮಕ್ಕೆ ಹೆಸರಾದವರು ಶಿವಾಜಿ ಮಹಾರಾಜರು. ಅದೇ ಕುಲಕ್ಕೆ ಸೇರಿದ ಮರಾಠಿಗರು ಕೊಟ್ಟ ಮಾತು ತಪ್ಪುವರಲ್ಲ ಎಂಬುದು ಅಷ್ಟೇ ಸತ್ಯ. 2020ರಲ್ಲಿ ಮರಾಠ ನಿಗಮ ಸ್ಥಾಪಿಸಿ 50 ಕೋಟಿ ಮೀಸಲಿಟ್ಟು, ಸಮಾಜದ ಅಭಿವೃದ್ಧಿಗೆ ಮುನ್ನಡಿ ಬರೆದಿದನ್ನು ಸಮಾಜ ಎಂದಿಗೂ ಮರೆಯುವುದಿಲ್ಲ. ಕ್ಷೇತ್ರದಲ್ಲಿ ರಾಘವೇಂದ್ರ ಪರ ಒಲವು ವ್ಯಕ್ತವಾಗುತ್ತಿದೆ. ಮರಾಠ ಸಮಾಜದವರ ಪ್ರೀತಿ ಅಭಿಮಾನವನ್ನು ನಮ್ಮ ಕುಟುಂಬ ಎಂದಿಗೂ ಮರೆಯುವುದಿಲ್ಲ. ಸಮಾಜದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದರು.

ಜಿಡಿಎಸ್ ಮಹಿಳಾಧ್ಯಕ್ಷೆ ಗೀತಾ ಸತೀಶ್ ಮಾತನಾಡಿ, ಗ್ರಾಮಾಂತರದಲ್ಲಿ ಮರಾಠಿಗರು ಹೆಚ್ಚು ಒಡನಾಟ ಹೊಂದಿರುವುದು ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಮಾತ್ರ. ಗ್ರಾಮಾಂ ತರದ ಪ್ರತಿಯೊಂದು ಗ್ರಾಮದಿಂದಲೂ ಮರಾಠ ಮುಖಂಡರು ಪೂರ್ಣ ಮನಸಿನಿಂದ ಬಿಜೆಪಿ ಸಹಕಾರ ನೀಡುತ್ತಿದ್ದಾರೆ ಎಂದರು.ಶಾಸಕಿ ಶಾರದ ಪೂರ್ಯ ನಾಯ್ಕ್ ಮಾತನಾಡಿ, ಗ್ರಾಮೀಣದಲ್ಲಿ ಮರಾಠ ಸಮುದಾಯದವರ ಮತಗಳು ಸಂಖ್ಯೆ ಹೆಚ್ಚಿದೆ. ಕ್ಷೇತ್ರದಲ್ಲಿ ಮರಾಠ ಸಮಾಜ ಜೆಡಿಎಸ್ ಹೊರತು ಪಡಿಸಿದರೆ ಮೈತ್ರಿಯಿಂದಾಗಿ ಈ ಬಾರಿ ಬಿಜೆಪಿಗೆ ಸಹಕಾರ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಶಾಸಕ ಚನ್ನಬಸಪ್ಪ, ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಮರಾಠ ಸಂಘದ ಅಧ್ಯಕ್ಷ ಪೈಲ್ವಾನ್ ಚಂದ್ರಪ್ಪ, ಮಾಜಿ ಎಪಿಎಂಸಿ ಅಧ್ಯಕ್ಷ ಸತೀಶ್, ಬಾಳೋಜಿ ಬಸವರಾಜ್, ದೇವರಾಜ್ ಸಿಂದೆ, ರಂಗೋಜಿ ರಾವ್, ಬಸವರಾಜ್, ಈಶ್ವರ ರಾವ್, ರೇಖಾ ಬೊಸ್ಲೆ, ರುದ್ರೋಜಿ ರಾವ್, ಮಲ್ಲಾರಿ ರಾವ್, ಭೀಮ್‍ ರಾವ್, ಹಾಲೋಜಿ ರಾವ್, ರಘು, ಕಲ್ಲಜ್ಜನಾಳ್ ರಾಮು, ವಿಜಯ್‍ ರಾವ್ ಇತರರಿದ್ದರು.01ಎಚ್‍ಎಚ್‍ಆರ್ ಪಿ 05: ಶಿವಮೊಗ್ಗ ಗ್ರಾಮಾಂತರದ ಮರಾಠ ಸಮಾಜ ಮುಖಂಡರ ಸಭೆಯಲ್ಲಿ ಲೋಕಸಭಾ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿದರು. ಬಿ.ಎಸ್.ಯಡಿಯೂರಪ್ಪ, ಶಾಸಕಿ ಶಾರದಪೂರ್ಯಾ ನಾಯ್ಕ್, ಪೈಲ್ವಾನ್ ಚಂದ್ರಪ್ಪ ಇತರರಿದ್ದರು.