ಪ್ರಿಯಾಂಕಾ ಜಾರಕಿಹೊಳಿ ₹ 9.11 ಕೋಟಿ ಒಡತಿ

| Published : Apr 19 2024, 09:03 AM IST

Priyanka

ಸಾರಾಂಶ

ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ ಗುರುವಾರ ಉಮೇದುವಾರಿಕೆ ಸಲ್ಲಿಕೆ ಮಾಡಿರುವ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಥಿರಾಸ್ತಿ, ಚರಾಸ್ತಿ ಸೇರಿದಂತೆ ಒಟ್ಟು ₹ 9.11 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ.

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ ಗುರುವಾರ ಉಮೇದುವಾರಿಕೆ ಸಲ್ಲಿಕೆ ಮಾಡಿರುವ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಥಿರಾಸ್ತಿ, ಚರಾಸ್ತಿ ಸೇರಿದಂತೆ ಒಟ್ಟು ₹ 9.11 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ.

ಎಂಬಿಎ ಪದವಿಧರೆಯಾಗಿರುವ ಪ್ರಿಯಾಂಕಾ ಉದ್ಯಮಿಯಾಗಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಅವರ ಬಳಿ ₹ 4,87,965 ಲಕ್ಷ ನಗದು ಇದೆ. ಶಿಂಧಿ ಕುರಬೆಟ್ಟ ಗ್ರಾಮದಲ್ಲಿ 12 ಎಕರೆ ಕೃಷಿ ಜಮೀನು, ಅದೇ ಗ್ರಾಮದಲ್ಲಿ 3,50,658 ಚ.ಅಡಿ ಕೃಷಿಯೇತರ ಜಮೀನು ಹೊಂದಿದ್ದಾರೆ. ಪ್ರಿಯಾಂಕಾ ಅವರು 100 ಗ್ರಾಂ ಚಿನ್ನಾಭರಣ ಹೊಂದಿದ್ದು, ಅವರ ಹೆಸರಿನಲ್ಲಿ ಯಾವುದೇ ವಾಹನ ಇಲ್ಲ.

 ₹7,29,13,956 ಚರಾಸ್ತಿ, ₹ 1,82,43,688 ಸ್ಥಿರಾಸ್ತಿ ಸೇರಿದಂತೆ ಒಟ್ಟು ₹ 9,11,57,644 ಆಸ್ತಿ ಹೊಂದಿದ್ದಾರೆ. ಕೋಟಿ ಒಡತಿಯಾಗಿರುವ ಪ್ರಿಯಾಂಕಾ ತಂದೆ, ಸಚಿವ ಸತೀಶ ಜಾರಕಿಹೊಳಿ ಅವರ ಬಳಿ ₹ 1,47,18,768, ತಾಯಿ ಎಸ್‌.ಎಸ್‌. ಜಾರಕಿಹೊಳಿ ಬಳಿ ₹ 10,25,000 ಒಟ್ಟು ₹1,57,43,768 ಕೈಗಡ ಸಾಲ ಪಡೆದಿದ್ದಾರೆ.