ಕೈ ಮಗ್ಗದ ರೇಷ್ಮೆ ಸೀರೆಯುಟ್ಟು ಮತದಾನ ಜಾಗೃತಿ

| Published : Apr 27 2024, 01:18 AM IST

ಸಾರಾಂಶ

ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ ಹಾಗೂ ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾ ಚಾಮರಾಜನಗರದ ಪಿಡಬ್ಲ್ಯೂಡಿ ಸಖಿಸೌರಭ ಮತಗಟ್ಟೆಯಲ್ಲಿ ಕೈ ಮಗ್ಗದಿಂದ ನೇದಿರುವ ಚುನಾವಣಾ ಪರ್ವ- ದೇಶದ ಗರ್ವ ಎಂಬ ಘೋಷವಾಕ್ಯವುಳ್ಳ ರೇಷ್ಮೆ ಸೀರೆಯನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ ಹಾಗೂ ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾ ಚಾಮರಾಜನಗರದ ಪಿಡಬ್ಲ್ಯೂಡಿ ಸಖಿಸೌರಭ ಮತಗಟ್ಟೆಯಲ್ಲಿ ಕೈ ಮಗ್ಗದಿಂದ ನೇದಿರುವ ಚುನಾವಣಾ ಪರ್ವ- ದೇಶದ ಗರ್ವ ಎಂಬ ಘೋಷವಾಕ್ಯವುಳ್ಳ ರೇಷ್ಮೆ ಸೀರೆಯನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ಹಾಡಿನಿಂದ ಮತದಾರರಿಗೆ ಸ್ವಾಗತ:ಚಾಮರಾಜನಗರದ ರಾಮಸಮುದ್ರದಲ್ಲಿ ತೆರೆದಿರುವ ಸಾಂಸ್ಕೃತಿಕ ಮತಗಟ್ಟೆಯಲ್ಲಿ ಜಾನಪದ ಕಲಾವಿದರು ಮತದಾರರು ಸ್ವಾಗತಿಸಿ ಮತಗಟ್ಟೆಗೆ ಕರೆದೊಯ್ದರು. ತಂಬೂರಿ ಪದ, ಡಮರುಗ, ತಮಟೆ ವಾದ್ಯಗಳ ಮೂಲಕ ಮತದಾರರನ್ನು ಅದ್ಧೂರಿಯಾಗಿ ಸ್ವಾಗತಿಸಿ ಹಬ್ಬದಂತೆ ಸಂಭ್ರಮಿಸಲಾಯಿತು. ಇನ್ನು, ಮತಗಟ್ಟೆ ಮುಂಭಾಗ ನಿರ್ಮಿಸಿದ್ದ ಸೆಲ್ಫಿ ಪಾಯಿಂಟ್ ಮುಂದೆ ಅನೇಕರು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಮತಗಟ್ಟೆಗೆ ಬಂದ ನವಿಲು: ಚಾಮರಾಜನಗರ ತಾಲೂಕಿನ ಸಣ್ಣೇಗಾಲ ಗ್ರಾಮದಲ್ಲಿ ಮತದಾನ ಆರಂಭಗೊಳ್ಳುತ್ತಿದ್ದಂತೆ ಎಲ್ಲಿಂದಲೋ ಬಂದ ರಾಷ್ಟ್ರಪಕ್ಷಿ ನವಿಲು ಮತಗಟ್ಟೆಗೆ ಎಂಟ್ರಿ ಕೊಟ್ಟಿದೆ. ಬಳಿಕ, ಮತದಾರರನ್ನು ಕಂಡು ಸ್ವಲ್ಪ ಹೊತ್ತಿನ ಬಳಿಕ ಹಾರಿ ಹೋಯಿತು.