ಇಲ್ಲಿ ರಾಷ್ಟ್ರಮಟ್ಟದ ಬಸವ ಜಯಂತಿ ಆಚರಣೆಯಾಗಲಿ

| Published : May 10 2024, 01:47 AM IST / Updated: May 10 2024, 01:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಮಹಾತ್ಮ ಬಸವೇಶ್ವರ ಜನಿಸಿದ ಪುಣ್ಯನೆಲ ಬಸವನಬಾಗೇವಾಡಿಯಲ್ಲಿ ರಾಷ್ಟ್ರ ಮಟ್ಟದ ಜಯಂತಿ ಆಚರಣೆಯಾಗುವ ಮೂಲಕ ರಾಷ್ಟ್ರದ ನಾಯಕರು ಈ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಬೇಕು ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅನಿಸಿಕೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಮಹಾತ್ಮ ಬಸವೇಶ್ವರ ಜನಿಸಿದ ಪುಣ್ಯನೆಲ ಬಸವನಬಾಗೇವಾಡಿಯಲ್ಲಿ ರಾಷ್ಟ್ರ ಮಟ್ಟದ ಜಯಂತಿ ಆಚರಣೆಯಾಗುವ ಮೂಲಕ ರಾಷ್ಟ್ರದ ನಾಯಕರು ಈ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಬೇಕು ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅನಿಸಿಕೆ ವ್ಯಕ್ತಪಡಿಸಿದರು.ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಸಂಜೆ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಬಸವಣ್ಣನವರು ಎಂಟನೇ ವಯಸ್ಸಿನವರಿಗೂ ಇದೇ ನೆಲದಲ್ಲಿದ್ದರು. ಇದು ಪುಣ್ಯ ಭೂಮಿ. ಅವರ ತತ್ವಗಳು ಇಲ್ಲಿ ನಿತ್ಯ ಅನುಷ್ಠಾನ ಆಗಬೇಕಿದೆ. ಮೂರು ದಿನಗಳ ಕಾಲ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವ ಭಕ್ತರು ಹೆಚ್ಚು ಭಾಗವಹಿಸಬೇಕು. ಬಸವೇಶ್ವರ ತತ್ವ ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದ್ದು, ತತ್ವ ಹೇಳದೆ ಅದು ಆಚರಣೆಗೆ ಬರಬೇಕು ಎಂದರು.

ಮೇ10 ಇಂದು ನಡೆಯುವ ಬಸವ ತೊಟ್ಟಿಲೋತ್ಸವ, ಬಸವ ಚಿಂತನ ಸಮಾವೇಶ ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೆ ಬರಬೇಕು ಎಂದು ಸ್ವಾಗತಿಸಿದರು.ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ತಹಸೀಲ್ದಾರ್‌ ಜಿ.ಎಸ್.ಚಿನಿವಾಲರ ಮಾತನಾಡಿ, ಲೋಕಸಭಾ ನೀತಿಸಂಹಿತೆ ಯಿಂದಾಗಿ ಇರುವದರಿಂದ ಸಾಂಪ್ರದಾಯಿಕ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದೆ. ಬಸವ ಜಯಂತಿ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯತ್ತಿವೆ ಎಂದರು. ಗೀತಾ ಘೋರ್ಪಡೆ ಪ್ರಾರ್ಥಿಸಿದರು. ಪಿ.ಎ.ಗಡೆನ್ನವರ ಸ್ವಾಗತಿಸಿ, ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಸವೇಶ್ವರ ದೇವಸ್ಥಾನದ ಕನ್ನಡ, ಆಂಗ್ಲ ಮಾಧ್ಯಮ ಶಾಲೆ, ಜ್ಞಾನ ಭಾರತಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.