ಹಂಪಿಯಲ್ಲಿ ವಿಜೃಂಭಣೆಯ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ತೆಪ್ಪೋತ್ಸವ

| Published : Apr 27 2024, 01:26 AM IST / Updated: Apr 27 2024, 09:11 AM IST

ಹಂಪಿಯಲ್ಲಿ ವಿಜೃಂಭಣೆಯ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ತೆಪ್ಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣಕಾಶಿ ಹಂಪಿಯಲ್ಲಿ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ತೆಪ್ಪೋತ್ಸವ ಗುರುವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

 ಹೊಸಪೇಟೆ :  ದಕ್ಷಿಣಕಾಶಿ ಹಂಪಿಯಲ್ಲಿ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ತೆಪ್ಪೋತ್ಸವ ಗುರುವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಶ್ರೀ ವಿದ್ಯಾರಣ್ಯ ಭಾರತಿ ಶ್ರೀಗಳ ಸಮ್ಮುಖದಲ್ಲಿ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಪಕ್ಕದಲ್ಲಿರುವ ಮನ್ಮುಖ ತೀರ್ಥ(ಪುಷ್ಕರಣಿ)ದಲ್ಲಿ ವಿದ್ಯುತ್ ಅಲಂಕೃತ ತೆಪ್ಪದಲ್ಲಿ ಪಂಪಾ ಶ್ರೀವಿರೂಪಾಕ್ಷೇಶ್ವರನ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಐದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಮಂಗಳವಾದ್ಯದೊಂದಿಗೆ ತೆಪ್ಪೋತ್ಸವ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಭಕ್ತರ ಜಯಘೋಷ ಮೊಳಗಿತು.

ವಿಜಯನಗರ, ಬಳ್ಳಾರಿ, ಕೊಪ್ಪಳ ಸೇರಿದಂತೆ ಇತರೆ ಜಿಲ್ಲೆಗಳ ಭಕ್ತರು ತೆಪ್ಪೋತ್ಸವದಲ್ಲಿ ಭಾಗವಹಿಸಿದ್ದರು. ಬೆಳಗ್ಗೆ ತುಂಗಭದ್ರಾ ನದಿ ತೀರದಲ್ಲಿರುವ ಶ್ರೀ ಚಕ್ರ ತೀರ್ಥ ಕೋದಂಡರಾಮ ಸ್ವಾಮಿ ಕಲ್ಯಾಣೋತ್ಸವ ಹಾಗೂ ರಥೋತ್ಸವ ನಡೆಯಿತು. ಸಾವಿರಾರರು ಭಕ್ತರು ಭಾಗಿಯಾಗಿದ್ದರು. ಏ. 23ರಂದು ಶ್ರೀವಿರೂಪಾಕ್ಷೇಶ್ವರ ಹಾಗೂ ಶ್ರೀ ಚಂದ್ರಮೌಳೇಶ್ವರ ಬ್ರಹ್ಮರಥೋತ್ಸವ ನಡೆದು ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದರು. ಹಂಪಿ ಜಾತ್ರೆಯಾಗಿ ಎರಡು ದಿನಕ್ಕೆ ತೆಪ್ಪೋತ್ಸವ ನಡೆದಿದೆ.