ಕಡೂರಲ್ಲಿ ಶೇ. 74ರಷ್ಟು ಮತದಾನ

| Published : Apr 27 2024, 01:26 AM IST / Updated: Apr 27 2024, 09:15 AM IST

ಸಾರಾಂಶ

ಕಡೂರು, ಮೊದಲ ಹಂತದಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರಕ್ಕೆ ಒಳಪಡುವ ಕಡೂರು ಕ್ಷೇತ್ರದಾದ್ಯಂತ ಮತದಾನದ ಶಾಂತಿಯತವಾಗಿದ್ದು, ಶೇ 74.00 ಮತದಾನ ನಡೆದಿದೆ.

 ಕಡೂರು :  ಮೊದಲ ಹಂತದಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರಕ್ಕೆ ಒಳಪಡುವ ಕಡೂರು ಕ್ಷೇತ್ರದಾದ್ಯಂತ ಮತದಾನದ ಶಾಂತಿಯತವಾಗಿದ್ದು, ಶೇ 74.00 ಮತದಾನ ನಡೆದಿದೆ.

ಶುಕ್ರವಾರ ಬೆಳಿಗ್ಗೆ 11.40 ರ ಸುಮಾರಿಗೆ ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ತಮ್ಮ ಬೆಂಬಲಿಗರೊಂದಿಗೆ ತಾಲೂಕಿನ ಚಿಕ್ಕಂಗಳದ ಸರಕಾರಿ ಶಾಲೆ ಮತಗಟ್ಟೆ 70 ರಲ್ಲಿ ಮತದಾರರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗು ಬಿಜೆಪಿ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಪತ್ನಿ ಕವಿತಾ ಮತ್ತು ಮಕ್ಕಳಾದ ಪ್ರಿಯಾಂಕ ಮತ್ತು ಇಂದು ಜೊತೆ ಕುಂದೂರು ಮತಗಟ್ಟೆಯಲ್ಲಿ ಮತದಾನ ಮಾಡಿದರು. ಜೆಡಿಎಸ್ ನ ಮಾಜಿ ಶಾಸಕ ವೈಎಸ್.ವಿ. ದತ್ತರವರು ಕ್ಷೇತ್ರದ ಯಗಟಿ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಚಿತ್ರ ನಟರಾದ ಕಡೂರು ಧರ್ಮಣ್ಣ ಕಡೂರಿನ ಹಳೇಪೇಟೆ ಶಾಲೆ ಮತ್ತು ನಟರಾಜ್ ಅಂಬೇಡ್ಕರ್ ನಗರದ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಬೀರೂರಿನ ಹಳೇಪೇಟೆ ಮತ್ತು ಚೆನ್ನಾಪುರದ ಮತಗಟ್ಟೆ ಸೇರಿದಂತೆ ಐದು ಕಡೆ ಮತದಾನ ಆರಂಭಕ್ಕೆ ಮುನ್ನ ಮತಯಂತ್ರ ದಲ್ಲಿ ದೋಷ ಕಂಡು ಬಂದ ಕಾರಣ ಕೂಡಲೇ ಬದಲಿ ಮತಯಂತ್ರ ಅಳವಡಿಸಲಾಯಿತು. ಕಡೂರು ಸೇರಿದಂತೆ ಬಿರುಬಿಸಿಲಿ ನ ಕಾರಣ ಬೆಳಗ್ಗೆ 10.30ರ ಸುಮಾರಿಗೆ ಶೇ 35ರಷ್ಟು ಮತದಾನ ಚುರುಕಿನಿಂದ ನಡೆದರೆ, 12.30ರಿಂದ 430 ರತನಕ ಶೇ 39 ಡಿಗ್ರಿ ಉಷ್ಣತೆಯ ಬಿಸಿಲಿನಿಂದ ನೀರಸ ಮತದಾನ ನಡೆಯಿತು. ಇಳಿಹೊತ್ತಿಗೆ ಮತದಾನ ಚುರುಕಾಗುವ ಮೂಲಕ ಶಾಂತಿಯಿಂದ ನಡೆದ ಲೋಕಸಭಾ ಚುನಾವಣೆಗೆ ತೆರೆ ಬಿದ್ದಿತು.

26ಕೆಕೆಡಿಯು1.ಕಡೂರು ಕ್ಷೇತ್ರದ ಚಿಕ್ಕಂಗಳ ಗ್ರಾಮದಲ್ಲಿ ಶಾಸಕ ಕೆ ಎಸ್ ಆನಂದ್ ಮತ ಚಲಾಯಿಸಿದರು. 26ಕೆಕೆಡಿಯು1ಎ. ಕುಂದೂರು ಗ್ರಾಮದಲ್ಲಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಕುಟುಂಬದೊಂದಿಗೆ ಮತದಾನ ಮಾಡಿದರು. 26ಕೆಕೆಡಿಯು1ಬಿ.ಯಗಟಿ ಗ್ರಾಮದಲ್ಲಿ ಮಾಜಿ ಶಾಸಕ ವೈ.ಎಸ್ ವಿ ದತ್ತ ಮತದಾನ ಮಾಡಿದರು. .

 -ಮದುಮಕ್ಕಳ ಮತದಾನ

ತಾಲೂಕಿನ ಹನುಮಂತಾಪುರದ ಎಚ್.ಜೆ.ದಿಲೀಪ್ ಮತ್ತು ಎಸ್.ಬಸವನಹಳ್ಳಿ ಬಿ.ಎಂ.ಸೌಭಾಗ್ಯ ಅವರ ಮದುವೆ ಸಿಂಗಟಗೆರೆಯಲ್ಲಿ ನಡೆಯುವ ಮುನ್ನ ಮಧುಮಕ್ಕಳ ಸಿಂಗಾರದಲ್ಲೆ ಮತಗಟ್ಟೆಗಳಿಗೆ ತೆರಳಿ ಇಬ್ಬರೂ ಮತದಾನ ಮಾಡಿ ನಂತರ ಹಸೆಮಣೆ ಏರಿದರು. 

--ಇದೇ ಮೊದಲ ಭಾರಿ ಮತದಾನದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ. ಎಲ್ಲ ದೇಶವಾಸಿಗಳೂ ಮತದಾನದಲ್ಲಿ ಪಾಲ್ಗೊಂಡು ದೇಶಕ್ಕೆ ಸಮರ್ಥ ನಾಯಕನನ್ನು ಆರಿಸುವ ಅವಕಾಶವಿದು.-ಅಂಕಿತಾ ಸೋಮಪ್ರಸಾದ್.

ಇಂಜಿನಿಯರಿಂಗ್ ವಿದ್ಯಾರ್ಥಿನಿ.ಕಡೂರು.