ಅಭಿವೃದ್ಧಿ ಗುರುತಿಸಿ 3ನೇ ಬಾರಿಗೆ ಅವಕಾಶ: ಭಗವಂತ ಖೂಬಾ

| Published : Apr 26 2024, 12:54 AM IST

ಸಾರಾಂಶ

ಉಮಾಕಾಂತ್ ನಾಗಮಾರಪಳ್ಳಿ ಮಾತನಾಡಿ, ಮೋದಿಯಂತಹ ಪ್ರಧಾನಿ ಈ ದೇಶಕ್ಕೆ ಸಿಕ್ಕಿದ್ದು ನಮ್ಮ ಪುಣ್ಯ, ಅವರ ಜೊತೆ ಇರಲು ನಾವೆಲ್ಲರೂ ಬಯಸಬೇಕು ಎಂದರು

ಔರಾದ್‌: ನಿಮ್ಮೇಲ್ಲರ ಆಶೀರ್ವಾದದಿಂದ 2 ಬಾರಿ ಲೋಕಸಭೆ ಸದಸ್ಯನಾಗಿ ಬೀದರ್‌ ಕ್ಷೇತ್ರದ ಜನರ ಹಿತಕ್ಕಾಗಿ ಬಹಳಷ್ಟು ಯೋಜನೆ ಜಾರಿಗೆ ತಂದು ಅಭಿವೃದ್ಧಿ ಮಾಡಿದ್ದೇನೆ. ಈ ಸೇವೆ ಗುರುತಿಸಿ ಮೋದಿ 3ನೇ ಬಾರಿ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ನುಡಿದರು.

ಔರಾದ್‌ ವಿಧಾನಸಭಾ ಕ್ಷೇತ್ರದ ಕೌಠಾ(ಬಿ), ಲಾಧಾ, ಧುಪತಮಾಹಾಗಾಂವ, ಶೆಂಬೆಳ್ಳಿ, ಜೊಜನಾ, ಗುಡಪಳ್ಳಿ, ಚಿಂತಾಕಿ, ವಡಗಾಂವ, ಚಿಕ್ಲಿ(ಜೆ), ಹಾಗೂ ಜಂಬಗಿ ಗ್ರಾಮಗಳಲ್ಲಿ ಸಚಿವ ಖೂಬಾ ಪಾದಯಾತ್ರೆ ನಡೆಸಿ ಮತದಾರರಿಗೆ ಮತ್ತೊಮ್ಮೆ ಅಶೀರ್ವಾದಿಸಬೇಕೆಂದು ಮನವಿ ಮಾಡಿಕೊಂಡರು.

ಉಮಾಕಾಂತ್ ನಾಗಮಾರಪಳ್ಳಿ ಮಾತನಾಡಿ, ಮೋದಿಯಂತಹ ಪ್ರಧಾನಿ ಈ ದೇಶಕ್ಕೆ ಸಿಕ್ಕಿದ್ದು ನಮ್ಮ ಪುಣ್ಯ, ಅವರ ಜೊತೆ ಇರಲು ನಾವೆಲ್ಲರೂ ಬಯಸಬೇಕು. ಖಂಡ್ರೆ ಪರಿವಾರ ಗುರುಪಾದಪ್ಪ ನಾಗಮಾರಪಳ್ಳಿಯವರು ಡಿಸಿಸಿ ಬ್ಯಾಂಕ್ ಕಟ್ಟಲು ಪಟ್ಟ ಶ್ರಮಕ್ಕೆ ಗೌರವಿಸಿಲ್ಲ. ಭಗವಂತ ಖೂಬಾ ಸಂಸದರಾದ ಮೇಲೆ ಬೀದರ್- ಔರಾದ್ ರಾಷ್ಟ್ರೀಯ ಹೆದ್ದಾರಿ, ಕೌಠಾ ಬ್ರಿಡ್ಜ್ ಮಾಡಿಸಿರುವುದು ನಮ್ಮೆಲ್ಲರಿಗೂ ಗೊತ್ತಿದೆ. ಮೂರನೆ ಬಾರಿಗೆ ಭಗವಂತ ಖೂಬಾ ಅವರನ್ನು ಗೆಲ್ಲಿಸಿ, ಅಹಂಕಾರಿಗಳನ್ನ, ಅಪಪ್ರಚಾರ ಮಾಡುತ್ತಿರುವವರನ್ನು ಬುದ್ಧಿ ಕಲಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು.

ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ರೌಫೋದ್ಧಿನ ಕಚೇರಿವಾಲೆ, ಬಸವರಾಜ ಪವಾರ, ಪ್ರಕಾಶ ಅಲ್ಮಾಜೆ, ಶರಣಪ್ಪ ಪಂಚಾಕ್ಷರೆ, ಜಗನ್ನಾಥ ಜಮಾದಾರ, ರವಿಂದ್ರ ರೆಡ್ಡಿ ಉಜನಿ, ಪ್ರಕಾಶ ಮೇತ್ರೆ, ಶಿವಕಾಂತ ಬಿರಾದಾರ, ಸಚಿನ ಬಿರಾದರ, ಸಂಜೀವ ಮುರ್ಕೆ, ಸುನೀಲ ಸುಶಲಾಬೆ, ಯಾದು ಮೆತ್ರೆ, ಸಂಜು ವಡೆಯರ್, ಜಗನ್ನಾಥ ಚಿಟಮೆ ಮುಂತಾದವರಿದ್ದರು.