ರಾಜ್ಯಪಾಲರ ಹುದ್ದೆಗೆ ಗೌರವ ಹಾಗೂ ರಕ್ಷಣೆ ನೀಡೋದು ಆಯಾ ರಾಜ್ಯಗಳ ಕರ್ತವ್ಯ

| Published : Apr 21 2024, 07:38 AM IST

modi
ರಾಜ್ಯಪಾಲರ ಹುದ್ದೆಗೆ ಗೌರವ ಹಾಗೂ ರಕ್ಷಣೆ ನೀಡೋದು ಆಯಾ ರಾಜ್ಯಗಳ ಕರ್ತವ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸಂದರ್ಶನ

ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರು ಹೆಚ್ಚು ಅಧಿಕಾರ ಚಲಾಯಿಸ್ತಿದ್ದಾರೆ ಎಂಬ ಚರ್ಚೆ ಇದೆ? ಇದರ ಬಗ್ಗೆ ಏನು ಹೇಳ್ತೀರಾ? ಯಾಕೆ ಈ ರೀತಿ ಆಗ್ತಿದೆ?

ರಾಜ್ಯಪಾಲರ ವಿಚಾರದಲ್ಲಿ ನಾನು ನಿಮಗೆ ಮೊದಲು ಒಂದು ಮಾತು ಹೇಳಬೇಕು. ಅವರಿಗೆ ಕೇಳಿ 5-6 ದಶಕಗಳ ಕಾಲ ಆಡಳಿತ ಮಾಡಿದ್ರಲ್ಲ. ಜಗತ್ತಿನ ಶತ್ರು ರಾಷ್ಟ್ರದಲ್ಲೂ ನಮ್ಮದು ರಾಯಭಾರ ಇರುತ್ತೆ ಅಲ್ವಾ. ಆ ರಾಯಭಾರಿಗಳ ಸಂಪೂರ್ಣ ಜವಾಬ್ದಾರಿ ಆ ರಾಷ್ಟ್ರದ್ದಾಗಿರುತ್ತೆ. ಅವರ ಸುರಕ್ಷತೆ ಹಾಗೂ ಸಂಪೂರ್ಣ ಜವಾಬ್ದಾರಿ. ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತೆ.

ಶತ್ರುರಾಷ್ಟ್ರದಲ್ಲೂ ಕೂಡ ನಮ್ಮ ರಾಯಭಾರಿಗಳಿಗೆ, ನಮ್ಮ ತಂಡಕ್ಕೆ ಸುರಕ್ಷತೆ ಹಾಗೂ ಗೌರವ ಕೊಡ್ತಾರೆ.ಆದರೆ ನಮ್ಮದೇ ದೇಶದಲ್ಲಿ ನಮ್ಮದೇ ರಾಜ್ಯದಲ್ಲಿ ಸಂವಿಧಾನತ್ಮಾಕವಾಗಿ ರಚನೆಯಾಗಿರುವ ರಾಜ್ಯಪಾಲರ ಹುದ್ದೆಗೆ ಗೌರವ ಹಾಗೂ ರಕ್ಷಣೆ ನೀಡೋದು ಆಯಾ ರಾಜ್ಯಗಳ ಕರ್ತವ್ಯ ಅಲ್ಲವೇ..? ಇದು ಹೇಗೆ ನಡೆಯುತ್ತೆ..? ನೀವೇ ಕಲ್ಪನೆ ಮಾಡಿಕೊಳ್ಳಿ, ಕೇರಳದ ರಾಜ್ಯಪಾಲರು ಏರ್‌ಪೋರ್ಟ್‌ಗೆ ಹೋಗ್ತಿದ್ದಾಗ ಎಡಪಂಥೀಯರು ಸೇರಿ ಗಲಾಟೆ ಮಾಡಿದ್ರೆ, ಅದು ಆ ರಾಜ್ಯ ಸರ್ಕಾರಕ್ಕೆ ಶೋಭೆ ಬರುತ್ತಾ? ನಾನು ಹಲವು ಬಾರಿ ಅಲ್ಲಿಗೆ ಹೋದಾಗ, ನಮ್ಮ ರಾಜ್ಯಪಾಲರು ತಮ್ಮ ಸಮಸ್ಯೆ ಬಗ್ಗೆ ಹೆಚ್ಚು ಹೇಳಲಿಲ್ಲ. ಆರಿಫ್ ಸಾಬ್ ಅವರಿಗೆ ಬಜೆಟ್ ಫಂಡ್ ಕೂಡ ಸಿಕ್ಕಿಲ್ಲ. ಕೇರಳದಲ್ಲಿ ರಾಜ್ಯಪಾಲರಿಗೆ ಊಟವನ್ನು ಕೂಡ ನಿಲ್ಲಿಸಿದ್ದಾರೆ. ಅವರ ಮೇಲಿನ ರಾಜಕೀಯ ಸಿಟ್ಟಿನ ಕಾರಣಕ್ಕೆ ಅವರ ವಿದ್ಯುತ್‌ ಬಂದ್ ಮಾಡಿದರೆ ಏನಾಗುತ್ತೆ? ಮಹಾರಾಷ್ಟ್ರದಲ್ಲಿ ಒಮ್ಮೆ ರಾಜ್ಯಪಾಲರಿಗೆ ವಿಮಾನ, ಹೆಲಿಕಾಪ್ಟರ್ ಯಾವುದೂ ಕೊಡಲಿಲ್ಲ. ಮೊದಲೇ ನಿರ್ಧರಿತ ಕಾರ್ಯಕ್ರಮಗಳನ್ನು ಕೊನೇ ಹಂತದಲ್ಲಿ ರದ್ದು ಮಾಡುತ್ತಿದ್ದರು. ತಮಿಳುನಾಡಿನಲ್ಲಿ ರಾಜ್ಯಪಾಲರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರುತ್ತಾ? ಯಾರೇ ಆಗಲಿ ಸಂವಿಧಾನದ ನಿಯಮದಂತೆ ನಡೆದುಕೊಳ್ಳಬೇಕಲ್ವಾ?

ನಾನು ಗುಜರಾತ್‌ನಲ್ಲಿದ್ದಾಗ ನನಗೆ ಎಲ್ಲಾ ಕಾಂಗ್ರೆಸ್‌ನ ರಾಜ್ಯಪಾಲರೇ ಇದ್ದರು. ನನಗೆ ಯಾವುದೇ ಸಮಸ್ಯೆ ಆಗಲಿಲ್ಲ. ಅವರು ನನಗೆ ಗೌರವ ಕೊಡ್ತಿದ್ರು. ನಾನು ಅವರಿಗೆ ಗೌರವ ಕೊಡ್ತಿದ್ದೆ. ಇದು ವರ್ಷಗಳ ಕಾಲ ನಡೆದುಬಂತು. ಏನಾದರೂ ತಪ್ಪು ನಡೆದರೆ ಸಂವಿಧಾನಿಕವಾಗಿ ಅವರಿಗೆ ಅಧಿಕಾರವಿದೆ ಕೇಳಲಿ.ವಸತಿ ಯೋಜನೆಯಲ್ಲಿ ನಿಮ್ಮ ಫೋಟೋವನ್ನು ಮನೆ ಮುಂದೆ ಹಾಕೋದು ಕಡ್ಡಾಯವಾ? ಇದು ಫೋಟೋ ಪ್ರಶ್ನೆಯಲ್ಲ. ಇಲ್ಲಿ ಪ್ರಶ್ನೆ ಏನೆಂದರೆ ಯೋಜನೆಯ ಹೆಸರು. ಪಿಎಂ ಆವಾಸ್ ಯೋಜನಾ. ಅದರ ಒಂದು ಲೋಗೋ ಇದೆ. ಅದರ ಗುರುತಿಗಾಗಿ. ಇದರ ಬಜೆಟ್ ಕೇಂದ್ರ ಸರ್ಕಾರ ಮಾಡುತ್ತೆ. ಅದು ಸಂಸತ್ ಮುಖಾಂತರ ಹೋಗುತ್ತೆ. ಯೋಜನೆ ಹಾಗೂ ವೆಚ್ಚ ಅದರ ಹೆಸರಲ್ಲೇ ಮಾಡಲಾಗುತ್ತೆ.

ನಾವು ಏನಾದರೂ ಬೇರೆ ಹೆಸರು ಇಟ್ಟರೆ, ಆಗ ಆಡಿಟ್ ರಿಪೋರ್ಟ್ ಬರುತ್ತೆ. ಪಿಎಂ ಆವಾಸ್ ಯೋಜನೆಯೇ ಇಲ್ಲ, ನೀವು ದುಡ್ಡು ಹೇಗೆ ಕೊಟ್ರಿ ಅಂತ ಕೇಳ್ತಾರೆ. ನಾನು ಸಿಎಜಿಗೆ ಏನಂತಾ ರಿಪೋರ್ಟ್ ಕೊಡಲಿ. ಅದು ನನ್ನ ಜವಾಬ್ದಾರಿ ಇದೆ. ನನಗೆ ಸಂಸತ್ ಖರ್ಚು ಮಾಡೋಕೆ ಅವಕಾಶ ಕೊಟ್ಟಿದೆ. ನಾನು ಏನೇ ಖರ್ಚು ಮಾಡಿದ್ರು ಸಿಎಜಿ ಲೆಕ್ಕ ಹಾಕುತ್ತೆ. ಯೋಜನೆಗಳನ್ನ ನನ್ನ ಹೆಸರಲ್ಲಿ ಕರೆಯೋದಿಲ್ಲ. ಅದೇನು ವ್ಯಕ್ತಿಯ ಹೆಸರಲ್ಲ. ಪಿಎಂ ಯಾರು ಬೇಕಾದ್ರೂ ಆಗಬಹುದು.ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನೇ ತೆಗೆದುಕೊಳ್ಳಿ. ಅಟಲ್ ಜೀ ಸರ್ಕಾರ ಇದ್ದಾಗ ಮಾಡಿದ್ದು. ಬಳಿಕ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ರು. ಅವರಿದ್ದಾಗಲೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ. ಬದಲಾವಣೆ ಮಾಡುವ ಅವಶ್ಯಕತೆ ಬರಲಿಲ್ಲ. ಪಿಎಂ ಅನ್ನೋದು ಓರ್ವ ವ್ಯಕ್ತಿಯಲ್ಲ. ಇದನ್ನ ವಿರೋಧ ಮಾಡ್ತಾರೆ ಅಂದ್ರೆ, ಅವರಲ್ಲಿ ನಿರಾಸೆ ಹಾಗೂ ದ್ವೇಷ ಎಷ್ಟಿದೆ ಅನ್ನೋದು ತಿಳಿಯುತ್ತೆ. ಸ್ಟಿಕ್ಕರ್ ಹಾಕೋದ್ರಿಂದ ಏನು ಲಾಭವಾಗುತ್ತೆ?