‘ಕೃಷ್ಣರಾಜಪೇಟೆ ತಾಲೂಕು ಮಹಾದರ್ಶನ’ ಕೃತಿ ಲೋಕಾರ್ಪಣೆ

| Published : May 09 2024, 12:45 AM IST / Updated: May 09 2024, 05:32 AM IST

‘ಕೃಷ್ಣರಾಜಪೇಟೆ ತಾಲೂಕು ಮಹಾದರ್ಶನ’ ಕೃತಿ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣರಾಜಪೇಟೆ ತಾಲೂಕು ಮಹಾದರ್ಶನ ಕೃತಿಯಲ್ಲಿ 15 ಅಧ್ಯಾಯಗಳಿವೆ. ಭೌಗೋಳಿಕ ಹಿನ್ನಲೆಯೊಂದಿಗೆ ಇತಿಹಾಸ, ಜನಸಂಖ್ಯೆ, ಆಡಳಿತಶಾಸನಗಳನ್ನು ಉಲ್ಲೇಖಿಸಲಾಗಿದೆ.

 ಮೈಸೂರು :  ತೆಂಡೆಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಲ್ಲೇನಹಳ್ಳಿ ಮಂಜುನಾಥ್ ಅವರ ಕೃಷ್ಣರಾಜಪೇಟೆ ತಾಲೂಕು ಮಹಾದರ್ಶನ ಕೃತಿಯಲ್ಲಿ ಭೌಗೋಳಿಕ, ರಾಜಕೀಯ, ಸಾಂಸ್ಕೃತಿಕ, ಕೃಷಿ, ಶಿಕ್ಷಣ ಸೇರಿದಂತೆ ಸಮಗ್ರ ವಿವರ ದಾಖಲಾಗಿದೆ.

ಈ ಕೃತಿಯಲ್ಲಿ 15 ಅಧ್ಯಾಯಗಳಿವೆ. ಭೌಗೋಳಿಕ ಹಿನ್ನಲೆಯೊಂದಿಗೆ ಇತಿಹಾಸ, ಜನಸಂಖ್ಯೆ, ಆಡಳಿತ, ಗ್ರಾಪಂಗಳು, ಮೇಲ್ಮೈ ಲಕ್ಷಣ, ಹವಾಗುಣ, ಮಳೆ, ಉಷ್ಣತೆ, ಅರಣ್ಯ, ಹೊಸಪಟ್ಟಣ ಪಕ್ಷಿಧಾಮ ದ್ವೀಪ, ಸ್ನಾರಕಗಳು, ಕೋಟೆ, ಕೊತ್ತಲ, ಬೆಟ್ಟಗಳು, ಪೌರಾಣಿಕ ಹಿನ್ನೆಲೆ, ಗಂಗರು, ಚೋಳರು, ರಾಷ್ಟ್ರಕೂಟರು, ಹೊಯ್ಲಳರು, ವಿಜಯನಗರ ಅರಸರು, ಮೈಸೂರಿನ ಒಡೆಯರು, ಪಾಳೆಪಟ್ಟು, ಸೀಮೆಗಳು, ನಾಯಕರು, ಸುಬೇದಾರರು, ಪಾಳೇಗಾರರು, ಐತಿಹಾಸಿಕತೆ, ಶಾಸನಗಳನ್ನು ಉಲ್ಲೇಖಿಸಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರರು, ನಂತರ ಪ್ರಜಾಪ್ರತಿನಿಧಿ ಸಭೆಯಿಂದ ಹಿಡಿದು ವಿಧಾನಸಭೆ, ವಿಧಾನಪರಿಷತ್ತು, ಲೋಕಸಭೆ, ರಾಜ್ಯಸಭೆ ಪ್ರತಿನಿಧಿಸಿದವರ ಮಾಹಿತಿ ಇದೆ. ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳು, ಪ್ರಮುಖ ಜನನಾಯಕರು, ಸ್ಥಳೀಯ ಆಡಳಿತ ವ್ಯವಸ್ಥೆಯ ವಿವರ ನೀಡಲಾಗಿದೆ.

ಜನಸಂಖ್ಯೆ, ಜನಗಣತಿ, ಸಾಕ್ಷರತೆ, ವಿವಿಧ ಜನಾಂಗಗಳು, ಸಾಮಾಜಿಕ ಜೀವನ, ಧಾರ್ಮಿಕ ಆಚರಣೆ, ಆಹಾರ ಪದ್ಧತಿ, ಹಬ್ಬ, ಜಾತ್ರೆ,ಪ್ರಾಚೀನ, ಮಧ್ಯಕಾಲೀನ, ಆಧುನಿಕ ಸಾಹಿತ್ಯ- ಸಂಸ್ಕೃತಿ, ಸಾಹಿತಿಗಳ ಪರಂಪರೆ, ವೈಶಿಷ್ಯ್ಯಗಳು, ಸಾಹಿತ್ಯ ಪರಿಷತ್ತು ಸಂಘಟನೆ, ಸಾಹಿತ್ಯ ಸಮ್ಮೇಳನಗಳು, ಕಲೆ, ಸಂಗೀತ, ನೃತ್ಯ, ಕ್ರೀಡಾ, ಪತ್ರಿಕೋದ್ಯಮದ ಬಗ್ಗೆ ಪ್ರಸ್ತಾಪಿಸಲಾಗಿದೆ.

ಟಿಎಪಿಸಿಎಂಎಸ್, ಪಿಎಲ್ಡಿ ಬ್ಯಾಂಕ್, ಎಪಿಎಂಸಿ, ನ್ಯಾಯಬೆಲೆ ಅಂಗಡಿಗಲು, ವ್ಯವಸಾಯ ಸೇವಾ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಂಘಗಳು, ಮಹಿಳಾ ಸ್ವಸಹಾಯ ಸಂಘಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘಗಳು, ಕೃಷಿ ಪದ್ಧತಿ, ನೀರಾವರಿ, ನದಿ-ಕೆರೆ ಕಟ್ಟೆ- ನಾಲೆಗಳು, ಶಿಕ್ಷಣ, ಕೈಗಾರಿಕೆ, ಆರೋಗ್ಯ, ಸರ್ಕಾರಿ ಇಲಾಖೆಗಳು, ಸಾರಿಗೆ ಮತ್ತು ಸಂಪರ್ಕ, ಪೊಲೀಸ್ ಇಲಾಖೆ, ಯೋಧರು, ನ್ಯಾಯಾಡಳಿತ, ರಾಜಕೀಯ ಗಣ್ಯರು, ಆಡಳಿತಗಾರರು, ಸಮಾಜ ಸೇವಕರು, ಶಿಕ್ಷಣ ತಜ್ಞರು, ಸಾಹಿತಿಗಳು, ಕಲಾವಿದರು, ವಿವಿಧ ಕ್ಷೇತ್ರಗಳ ಗಣ್ಯರು, ಐತಿಹಾಸಿಕ, ಚಾರಿತ್ರಿಕ, ಪ್ರವಾಸಿ ಹಾಗೂ ಪ್ರಸಿದ್ಧ ಗ್ರಾಮಗಳ ಚಿತ್ರಣ ಕೂಡ ಇದೆ.

ಒಟ್ಟಾರೆ ಲೇಖಕರು ಸುಮಾರು ಎರಡು ವರ್ಷಗಳ ಕಾಲ ಕ್ಷೇತ್ರ ಕಾರ್ಯ ನಡೆಸಿ, ವಿವಿಧ ಕ್ಷೇತ್ರಗಳ ಗಣ್ಯರು, ಹಿರಿಯರು, ಸಾಧಕರನ್ನು ಭೇಟಿ ಮಾಡಿ, ಸಂವಾದ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಸಂಶೋಧನಾತ್ಮಕವಾಗಿ ಅಧ್ಯಯನ ನಡೆಸಿ, ಈ ಕೃತಿಯನ್ನು ರಚಿಸಿದ್ದಾರೆ. ತಾಲೂಕಿನ ಬಗ್ಗೆ ಮಾಹಿತಿ ಬೇಕಾದಲ್ಲಿ ಇದೊಂದು ಆಕರ ಗ್ರಂಥವಾಗಲಿದೆ ಎನ್ನಬಹುದು.

ಮೈಸೂರಿನ ಮಣಿ ಪ್ರಕಾಶನ ಪ್ರಕಟಿಸಿದ್ದು, ಅ.ರಾ. ಮಿತ್ರ ಅವರ ಸಂದೇಶ, ಪ್ರೊ.ಎಚ್.ಎಸ್. ಮುದ್ದೇಗೌಡರ ಮುನ್ನುಡಿ, ಶಿ. ಕುಮಾರಸ್ವಾಮಿ ಅವರ ಆಶಯ ನುಡಿ ಇದೆ. ಆಸಕ್ತರು ಪ್ರಕಾಶಕ ಮಂಜೇಗೌಡ, ಮೊ.96865 35465 ಅಥವಾ ಲೇಖಕ ಬಲ್ಲೇನಹಳ್ಳಿ ಮಂಜುನಾಥ್, ಮೊ. 94487 40126 ಸಂಪರ್ಕಿಸಬಹುದು.