ಮತದಾನ ಮಾಡಿ ಚುನಾವಣೆಗಳ ಮೌಲ್ಯ ಹೆಚ್ಚಿಸಿ-ರವಿಬಾಬು ಪೂಜಾರ

| Published : Apr 28 2024, 01:21 AM IST

ಸಾರಾಂಶ

ಮತದಾನ ನಮ್ಮ ಹಕ್ಕು ಹೌದು, ಅದನ್ನು ಚಲಾಯಿಸುವುದು ನಮ್ಮ ಕರ್ತವ್ಯ ಎಂಬ ಅರಿವು ಪ್ರತಿ ಪ್ರಜೆಯಲ್ಲಿದ್ದರೆ ಮಾತ್ರ ಚುನಾವಣೆಗಳ ಮೌಲ್ಯ ಹೆಚ್ಚುತ್ತದೆ ಎಂದು ನ್ಯಾಯವಾದಿ ಶರಣ ಸಾಹಿತ್ಯ ಪರಿಷತ್ ಹಾನಗಲ್ಲ ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ ತಿಳಿಸಿದರು.

ಹಾನಗಲ್ಲ: ಮತದಾನ ನಮ್ಮ ಹಕ್ಕು ಹೌದು, ಅದನ್ನು ಚಲಾಯಿಸುವುದು ನಮ್ಮ ಕರ್ತವ್ಯ ಎಂಬ ಅರಿವು ಪ್ರತಿ ಪ್ರಜೆಯಲ್ಲಿದ್ದರೆ ಮಾತ್ರ ಚುನಾವಣೆಗಳ ಮೌಲ್ಯ ಹೆಚ್ಚುತ್ತದೆ ಎಂದು ನ್ಯಾಯವಾದಿ ಶರಣ ಸಾಹಿತ್ಯ ಪರಿಷತ್ ಹಾನಗಲ್ಲ ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ ತಿಳಿಸಿದರು.ಹಾನಗಲ್ಲ ತಾಲೂಕಿನ ಸರಕಾರಿ ದ್ಯಾಮನಕೊಪ್ಪ ಗ್ರಾಮದಲ್ಲಿ ಸಾರಂಗ ಮಂಟಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಆಯೋಜಿಸಿದ ಮತದಾನ ಜಾಗೃತಿಗಾಗಿ ಕಾವ್ಯ ವಾಚನ, ಬೀದಿ ನಾಟಕ ಸೇರಿದಂತೆ ನಡೆಸಿದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಚುನಾವಣೆಗಳನ್ನು ನಮ್ಮ ಹಬ್ಬಗಳಂತೆ ಆಚರಿಸಬೇಕು. ನಮ್ಮ ನಾಯಕನ ಆಯ್ಕೆಯ ಸಂಭ್ರಮ ನಮ್ಮಲ್ಲಿರಬೇಕು. ಮತ ಚಲಾವಣೆ ಸಂದರ್ಭದಲ್ಲಿ ಯಾವುದೇ ಒತ್ತಡ ಭಯಕ್ಕೆ ತುತ್ತಾಗದೇ ನಮ್ಮ ಇಷ್ಟದ ನಾಯಕನನ್ನು ಆಯ್ಕೆ ಮಾಡುವ ಅಚಲ ವಿಶ್ವಾಸ ನಮ್ಮಲ್ಲಿರಬೇಕು. ಅನ್ಯ ಕಾರಣಕ್ಕೆ ಮತ ಚಲಾಯಿಸದವರನ್ನು ಮನವೊಲಿಸಿ ಮತ ಚಲಾವಣೆಗೆ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ತಂತ್ರಜ್ಞಾನದ ನಾಗಾಲೋಟದ ಯುಗದಲ್ಲಿರುವ ನಮಗೆ ಚುನಾವಣೆಗಳು ಬಂದಾಗ ಮತದಾನ ನಿರಾಕರಣೆ ಮಾಡುವ ಚಿಂತನೆ ಬೇಡ. ಎಲ್ಲವೂ ವೇಗವಾಗಿ ಓಡುತ್ತಿವೆ. ಹೀಗಾಗಿ ಮತದಾರರು ನಮ್ಮ ಇಚ್ಛಿತ ನಾಯಕನನ್ನು ಆಯ್ಕೆ ಮಾಡಲು ಮತದಾನ ಮಾಡಲೇಬೇಕು. ಈಗ ಅಂಧರು, ಶಾರೀರಿಕ ದುರ್ಬಲರು, ವಯೋವೃದ್ಧರಿಗೆ ಅವರ ಮನೆಯಲ್ಲೇ ಮತದಾನಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಇಂತಹ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಕಡ್ಡಾಯ ಮತದಾನ ನಮ್ಮ ಆದ್ಯತೆಯಾಗಲಿ ಎಂದರು.ಶಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಸಿ. ಕಲ್ಲನಗೌಡರ, ಹಾನಗಲ್ಲ ನಗರ ಘಟಕದ ಕಾರ್ಯದರ್ಶಿ ಸುಭಾಸ ಹೊಸಮನಿ, ಶೋಭಾ ಪಾಟೀಲ, ಎಂ.ಎಸ್.ಅಮ್ರದ, ಸಾಹಿತಿ ಕಾಂತೇಶ ಅಸುಂಡಿ, ಎಸ್.ಎಫ್.ಕಠಾರಿ, ಗಣಪತ್ತೆಪ್ಪ ಲಾಂಡಗೇರ, ಭರಮಗೌಡ್ರ ಚನ್ನಗೌಡರ, ಕೋಟೆಪ್ಪ ನೆಗಳೂರ, ಶಿವಪ್ಪ ಕೊಳ್ಳಿ, ಬಸನಗೌಡ ಪಾಟೀಲ, ವೀರಭದ್ರಪ್ಪ ಕೊಪ್ಪದ, ರವಿಂದ್ರ ಕುರಿಯವರ, ಹಾಲಮ್ಮ ಕುರವಿ, ಗಿರಿಜಮ್ಮ ನೆಗಳೂರ, ಬಸಪ್ಪ ಕುರಡಿ, ನೀಲಪ್ಪ ಕುರಡಿ, ದೇವೀಂದ್ರಪ್ಪ ಕುರಡಿ, ಫಕ್ಕೀರಪ್ಪ ಜಾಡರ ಮೊದಲಾದವರು ಇದ್ದರು.ಬೀದಿ ನಾಟಕ: ಇದೇ ಸಂದರ್ಭದಲ್ಲಿ ಸಾಹಿತಿ ಕಾಂತೇಶ ಅಸುಂಡಿ ಮತದಾನ ಜಾಗೃತಿಯ ಚುಟುಕುಗಳನ್ನು ಹೇಳಿ ರಂಜಿಸಿ ಮತದಾನಕ್ಕೆ ಜಾಗೃತಿ ಮುಡಿಸಿದರು. ಸಾಹಿತಿ ಎಸ್.ಸಿ. ಕಲ್ಲನಗೌಡರ ಕಾವ್ಯ ವಾಚನ ಮಾಡಿದರು. ಶಿಕ್ಷಕ ಸಾಹಿತಿ ಸುಭಾಸ ಹೊಸಮನಿ ಅವರ ನಿರ್ದೇಶದಲ್ಲಿ ಸಾರ್ವಜನಿಕರನ್ನೂ ಪಾತ್ರಧಾರಿಗಳನ್ನಾಗಿ ಮಾಡಿ ವೋಟ್ ಮಾಡ್ರಿ ವೋಟ್‌ ನಾಟಕ ಪ್ರದರ್ಶಿಸಲಾಯಿತು.