ಉಡುಸಲಮ್ಮ ದೇವಿ ಸಿಡಿ ಮಹೋತ್ಸವ

| Published : Apr 28 2024, 01:28 AM IST

ಸಾರಾಂಶ

ಇಲ್ಲಿನ ಗ್ರಾಮ ದೇವತೆ ಶ್ರೀ ಉಡುಸಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸಿಡಿ ಮಹೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು

ಕನ್ನಡಪ್ರಭ ವಾರ್ತೆ ತುರುವೇಕೆರೆ

ಇಲ್ಲಿನ ಗ್ರಾಮ ದೇವತೆ ಶ್ರೀ ಉಡುಸಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸಿಡಿ ಮಹೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು. ಮಡಿವಾಳರ ಬೀದಿಯಲ್ಲಿರುವ ಉಡುಸಲಮ್ಮ ದೇವಿಯವರ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಶ್ರೀ ಬೇಟೇರಾಯಸ್ವಾಮಿ ದೇವಾಲಯದ ಬಳಿಗೆ ಕರಿ ಮತ್ತು ಕೆಂಪು ಸೋಮಗಳ ಸಹಿತ ಕರೆ ತರಲಾಯಿತು.

ಬೇಟೇರಾಯಸ್ವಾಮಿ ದೇವಾಲಯದ ಬಳಿಯಿಂದ ಸಿಡಿಯವರ ಬೀದಿಗೆ ತೆರಳಿದ ಕರಿ ಸೋಮ ಅಲ್ಲಿದ್ದ ನಾಲ್ವರು ಸಿಡಿಗಾರರನ್ನು ಅರೆ ವಾದ್ಯ ಮತ್ತು ಚಿಟ್ಟಿ ಮೇಳ ವಾದ್ಯದೊಂದಿಗೆ ಕರೆತರಲಾಯಿತು. ಸಾವಿರಾರು ಭಕ್ತರೊಂದಿಗೆ ಸಂತೆ ಮೈದಾನದಲ್ಲಿರುವ ಉಡುಸಲಮ್ಮ ದೇವಿಯವರ ದೇವಾಲಯಕ್ಕೆ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ತರಲಾಯಿತು. ದೇವಾಲಯದ ಮುಂಭಾಗ ನಿರ್ಮಿಸಿದ್ದ ಸುಮಾರು ಇಪ್ಪತ್ತು ಅಡಿ ಎತ್ತರದ ಸಿಡಿಗಂಬದಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ನಾಲ್ವರು ಸಿಡಿಗಾರರು ಹತ್ತಾರು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಹರಕೆ ತೀರಿಸಿದರು. ಸಿಡಿ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ಗುಡಿಗೌಡ ಶ್ರೀನಿವಾಸ್, ಮುಖಂಡರಾದ ಆರ್.ಮಲ್ಲಿಕಾರ್ಜುನ್, ಇಂಜಿನಿಯರ್ ರಾಮಚಂದ್ರು, ಶ್ರೀಕಂಠರಾಜೇ ಅರಸ್, ಬಾಗೀರಿ ರಮೇಶ್ ಭಾಗಿಯಾಗಿದ್ದರು.