ಚಾಯ್ ಪೇ ಚರ್ಚಾ ಮೂಲಕ ಶೆಟ್ಟರ್ ಮತಯಾಚನೆ

| Published : Apr 28 2024, 01:28 AM IST / Updated: Apr 28 2024, 10:40 AM IST

ಸಾರಾಂಶ

ಚುನಾವಣೆಗೆ ಕೆಲವು ದಿನಗಳು ಬಾಕಿ ಉಳಿದಿದ್ದು, ಶನಿವಾರ ಬೆಳ್ಳಂಬೆಳಗ್ಗೆ ಪ್ರಚಾರ ಆರಂಭಿಸಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಅವರಿಗೆ ಹೊದಲೆಲ್ಲ ಜನ ಆತ್ಮಿಯವಾಗಿ ಸ್ವಾಗತಿಸಿ, ಬೆಂಬಲ ನೀಡಿದರು.

 ಬೆಳಗಾವಿ :  ಚುನಾವಣೆಗೆ ಕೆಲವು ದಿನಗಳು ಬಾಕಿ ಉಳಿದಿದ್ದು, ಶನಿವಾರ ಬೆಳ್ಳಂಬೆಳಗ್ಗೆ ಪ್ರಚಾರ ಆರಂಭಿಸಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಅವರಿಗೆ ಹೊದಲೆಲ್ಲ ಜನ ಆತ್ಮಿಯವಾಗಿ ಸ್ವಾಗತಿಸಿ, ಬೆಂಬಲ ನೀಡಿದರು.

ಪ್ರತಿ ನಿತ್ಯ ಜಗದೀಶ್ ಶೆಟ್ಟರ್ ಅವರು ಚಾಯ್ ಪೇ ಚರ್ಚಾ ಕಾರ್ಯಕ್ರಮದ ಮೂಲಕ ಮತಯಾಚನೆ ನಡೆಸುತ್ತಿದ್ದಾರೆ. ಶನಿವಾರ ಬೆಳಗ್ಗೆ ಗಾಂಧಿ ನಗರದ ತರಕಾರಿ ಮಾರುಕಟ್ಟೆಯಲ್ಲಿ ಚಾಯ್ ಪೇ ಚರ್ಚಾ ಕಾರ್ಯಕ್ರಮದ ಮೂಲಕ ವ್ಯಾಪಾರಸ್ಥರು, ರೈತರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ, ಮತಯಾಚನೆ ಮಾಡಿದ್ದಾರೆ.

ಮತಯಾಚನೆ ಮಾಡುವ ಮೂಲಕ ಜಗದೀಶ್ ಶೆಟ್ಟರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಬೀದಿ ಬದಿಯ ವ್ಯಾಪಾರಿಗಳಿಗೆ ಜಾರಿಗೆ ತಂದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ. ಹಾಗಾಗಿ ದೇಶವನ್ನು ಹೆಚ್ಚೆಚ್ಚು ಅಭಿವೃದ್ಧಿ ಪಡಿಸಲು ಬಿಜೆಪಿಗೆ ಮತ ನೀಡಿ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಜೈ ಕಿಸಾನ್ ವೆಜಿಟೆಬಲ್ ಮಾರ್ಕೆಟ್ ಅಧ್ಯಕ್ಷ ದೀವಾಕರ ಪಾಟೀಲ, ಉಪಾಧ್ಯಕ್ಷ ಮೋಹನ ಮನ್ನೋಳಕರ, ಕಾರ್ಯದರ್ಶಿ ಎ‌.ಕೆ.ಬಗವಾನ್, ಪ್ರಮುಖರಾದ ಡಾ.ರವಿ ಪಾಟೀಲ, ವಿಶ್ವನಾಥ ಪಾಟೀಲ, ಎಂ.ಎಂ. ದೋಣಿ, ಉಮೇಶ ಪಾಟೀಲ, ಕುಲದೀಪ್ ತಹಸೀಲ್ದಾರ, ಪಿ.ಬಿ.ಬಾಬಣ್ಣವರ, ಲಕ್ಷ್ಮಣ ಅಂಬೋಜಿ ಸೇರಿದಂತೆ ವ್ಯಾಪಾರಸ್ಥರು, ರೈತರು, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.