ಮಾದೇನಹಳ್ಳಿಯಲ್ಲಿ ಶತಾಯುಷಿ ಗಂಗಮ್ಮ ಮತದಾನ

| Published : Apr 27 2024, 01:02 AM IST

ಮಾದೇನಹಳ್ಳಿಯಲ್ಲಿ ಶತಾಯುಷಿ ಗಂಗಮ್ಮ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯಲ್ಲಿ ಹೋಬಳಿಯಲ್ಲಿ ಸುಮಾರು ೫೦ ಮತದಾನ ಕೇಂದ್ರದಲ್ಲಿ, 16 ಸೂಕ್ಷ ಮತದಾನ ಕೇಂದ್ರ ಹಾಗೂ 34 ಸಾಮಾನ್ಯ ಮತದಾನ ಕೇಂದ್ರದಲ್ಲಿ ಚುನಾವಣೆ ನಡೆಯಿತು.

ದಾಬಸ್‌ಪೇಟೆ: ಸೋಂಪುರ ಹೋಬಳಿಯಲ್ಲಿ ಹೋಬಳಿಯಲ್ಲಿ ಸುಮಾರು ೫೦ ಮತದಾನ ಕೇಂದ್ರದಲ್ಲಿ, 16 ಸೂಕ್ಷ ಮತದಾನ ಕೇಂದ್ರ ಹಾಗೂ 34 ಸಾಮಾನ್ಯ ಮತದಾನ ಕೇಂದ್ರದಲ್ಲಿ ಚುನಾವಣೆ ನಡೆಯಿತು.

ಕೈ ಕೊಟ್ಟ ಮತಯಂತ್ರ: ಸುಮಾರು 20 ನಿಮಿಷಗಳ ಕಾಲ ಮತಯಂತ್ರ ಕೈ ಕೊಟ್ಟ ಘಟನೆ ಶಿವಗಂಗೆ ಗ್ರಾ.ಪಂ.ವ್ಯಾಪ್ತಿಯ ಕೂತಗಟ್ಟ ಮತಗಟ್ಟೆ ಸಂಖ್ಯೆ 87 ರಲ್ಲಿ ನಡೆಯಿತು. ನಂತರ ಚುನಾವಣಾಧಿಕಾರಿಗಳು ಮತಯಂತ್ರ ಬದಲಾಯಿಸಿ ಚುನಾವಣೆ ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟರು.

ತಡವಾಗಿ ಆರಂಭವಾದ ಮತದಾನ:

ತ್ಯಾಮಗೊಂಡ್ಲು ಹೋಬಳಿಯ ಮುದ್ದಲಿಂಗನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 41ರಲ್ಲಿ ಮತಯಂತ್ರದಲ್ಲಿ ದೋಷ ಕಂಡಬಂದ ಹಿನ್ನೆಲೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಪ್ರಕ್ರಿಯೆ ಒಂದು ಗಂಟೆ ತಡವಾಗಿ ಬೆಳಿಗ್ಗೆ 8 ಗಂಟೆಗೆ ಆರಂಭವಾಯಿತು.

ಸೋಂಪುರ ಹೋಬಳಿಯ ಮಾದೇನಹಳ್ಳಿ ಗ್ರಾಮದ 105 ವರ್ಷದ ಗಂಗಮ್ಮ ಸರ್ಕಾರಿ ಶಾಲೆಯಲ್ಲಿ ತಮ್ಮ ಸಂಬಂಧಿಯರೊಂದಿಗೆ ವೀಲ್‌ಚೇರ್ ಮುಖಾಂತರ ಹೋಗಿ ಮತ ಚಲಾಯಿಸಿದರು. ಹೊನ್ನೇನಹಳ್ಳಿ ಗ್ರಾಮದ ಸಿದ್ದಗಂಗಮ್ಮ ಎಂಬ ಅಂಧ ವೃದ್ದೆ ತನ್ನ ಮಗನ ಸಹಾಯದಿಂದ ಹೊನ್ನೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು. ಕಂಬಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ 98 ರುದ್ರಮ್ಮ ಮತ ಚಲಾಯಿಸಿದರು.

ಮಂಗಳಮುಖಿಯರ ಮತದಾನ:

ಸುಮಾರು 30ಕ್ಕೂ ಹೆಚ್ಚು ಮಂಗಳಮುಖಿಯರು ದಾಬಸ್‌ಪೇಟೆಯ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು.

ಜಿಲ್ಲಾಧಿಕಾರಿ ಭೇಟಿ: ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ತಹಸೀಲ್ದಾರ್ ಅಮೃತ್ ಆತ್ರೇಶ್ ಹೋಬಳಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪೋಟೋ 3 :

ಮಾದೇನಹಳ್ಳಿ ಗ್ರಾಮದಲ್ಲಿ ಗಂಗಮ್ಮ ಎಂಬ 105 ವರ್ಷದ ವೃದ್ದೆ ಮತದಾನ ಮಾಡಿದರು.