ಮರುಮೌಲ್ಯಮಾಪನ: ಐಶ್ವರ್ಯ ಜಿಲ್ಲೆಗೆ ಪ್ರಥಮ

| Published : Apr 28 2024, 01:16 AM IST

ಸಾರಾಂಶ

ಮರುಮೌಲ್ಯಮಾಪನದಿಂದ ಹೆಚ್ಚುವರಿಯಾಗಿ 4 ಅಂಕ ಬಂದ ಕಾರಣ ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 7ನೇ ರ್‍ಯಾಂಕ್ ಪಡೆದುಕೊಂಡ ಐಶ್ವರ್ಯ ಕೌಜಲಗಿ ಅವರನ್ನು ಜಿಪಂ, ಸಿಇಒ ಶಶಿಧರ ಕುರೇರ್‌ ತಮ್ಮ ಚೇರ್ ಮೇಲೆ ಕೂಡ್ರಿಸಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮರು ಮೌಲ್ಯಮಾಪನದಿಂದ ಹೆಚ್ಚುವರಿಯಾಗಿ 4 ಅಂಕ ಬಂದ ಕಾರಣ ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 7ನೇ ರ್‍ಯಾಂಕ್ ಪಡೆದುಕೊಂಡ ಐಶ್ವರ್ಯ ಕೌಜಲಗಿ ಅವರನ್ನು ಜಿಪಂ, ಸಿಇಒ ಶಶಿಧರ ಕುರೇರ್‌ ತಮ್ಮ ಚೇರ್ ಮೇಲೆ ಕೂಡ್ರಿಸಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.

ತೇರದಾಳ ಜೆ.ವಿ. ಮಂಡಳ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ಕೌಜಲಗಿ ಪಿಯುಸಿ ಕಲಾ ವಿಭಾಗದಲ್ಲಿ 600 ಅಂಕಗಳಿಗೆ 586 ಅಂಕ ಪಡೆದುಕೊಂಡಿದ್ದರು. ಆದರೆ, ಅಂಕಗಳು ಕಡಿಮೆ ಬಂದಿರುವುದನ್ನು ತಿಳಿದು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಪರಿಣಾಮ ಹೆಚ್ಚುವರಿ 4 ಅಂಕ ಸಿಕ್ಕಿದೆ. ವಿದ್ಯಾರ್ಥಿಯ ಸಾಧನೆ ಕಂಡು ಜಿಪಂ ಸಿಇಒ ತಮ್ಮ ಕಚೇರಿಯ ಚೇರ್‌ ಮೇಲೆ ಕೂಡ್ರಿಸಿ ಸನ್ಮಾನಿಸಿರುವುದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದಂತಾಗಿದೆ.

ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಟ್ಟಣಶೆಟ್ಟಿ ಸೇರಿದಂತೆ ಜೆ.ವಿ. ಮಂಡಳ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.