ಉಡುಪಿ: ಮಹಿಳಾ ಮತದಾರರು ಹೆಚ್ಚಿದ್ದರೂ ಪುರುಷ ಮತದಾರರಿಂದಲೇ ಹೆಚ್ಚು ಮತದಾನ

| Published : Apr 28 2024, 01:16 AM IST

ಉಡುಪಿ: ಮಹಿಳಾ ಮತದಾರರು ಹೆಚ್ಚಿದ್ದರೂ ಪುರುಷ ಮತದಾರರಿಂದಲೇ ಹೆಚ್ಚು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಈ ಕ್ಷೇತ್ರದಲ್ಲಿ ಒಟ್ಟು 1585162 ಮಂದಿ ಅರ್ಹ ಮತದಾರರಿದ್ದು, ಅವರಲ್ಲಿ 768215 ಪುರುಷ ಮತ್ತು 816910 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 594565 ಮಂದಿ ಪುರುಷ (ಶೇ.77.39) ಮತ್ತು 628316 (ಶೇ.76.91) ಮಂದಿ ಮಹಿಳಾ ಮತದಾರರು ಸೇರಿ ಒಟ್ಟು 1222888 (ಶೇ.77.15) ಮಂದಿ ಮತದಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ನಡೆದ ಮತದಾನದಲ್ಲಿ ಅಂತಿಮವಾಗಿ ಒಟ್ಟು 77.15ರಷ್ಟು ಮತದಾನವಾಗಿದೆ. ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.78.94ರಷ್ಟು ಮಂದಿ ಮತದಾನ ಮಾಡಿದ್ದರೆ, ಚಿಕ್ಕಮಗಳೂರಿನ 4 ಕ್ಷೇತ್ರಗಳಲ್ಲಿ ಶೇ.75.69ರಷ್ಟು ಮಂದಿ ಮತದಾನದಲ್ಲಿ ಭಾಗವಹಿಸಿದ್ದಾರೆ.

ಈ ಕ್ಷೇತ್ರದಲ್ಲಿ ಒಟ್ಟು 1585162 ಮಂದಿ ಅರ್ಹ ಮತದಾರರಿದ್ದು, ಅವರಲ್ಲಿ 768215 ಪುರುಷ ಮತ್ತು 816910 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 594565 ಮಂದಿ ಪುರುಷ (ಶೇ.77.39) ಮತ್ತು 628316 (ಶೇ.76.91) ಮಂದಿ ಮಹಿಳಾ ಮತದಾರರು ಸೇರಿ ಒಟ್ಟು 1222888 (ಶೇ.77.15) ಮಂದಿ ಮತದಾನ ಮಾಡಿದ್ದಾರೆ. ಮತದಾರರ ಪಟ್ಟಿಯಲ್ಲಿದ್ದ 37 ತೃತೀಯ ಲಿಂಗಿ ಮತದಾರರಲ್ಲಿ ಕೇವಲ 7 ಮಂದಿ ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೂ, ಮತದಾನದಲ್ಲಿ ಮಾತ್ರ ಪುರುಷ ಮತದಾರರೇ ಮುಂದಿದ್ದಾರೆ. ಶೇ.77.39 ಪುರುಷ ಮತದಾರರು ಮತದಾನ ಮಾಡಿದ್ದರೆ, ಶೇ.76.91 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ವಿಧಾನಸಭಾ ವಾರು ಕುಂದಾಪುರ ಶೇ.79.12, ಉಡುಪಿ ಶೇ.77.84, ಕಾಪು ಶೇ.79.17, ಕಾರ್ಕಳ ಶೇ.79.66, ಶೃಂಗೇರಿ ಶೇ.80.31, ಮೂಡಿಗೆರೆ ಶೇ.77.47, ಚಿಕ್ಕಮಗಳೂರು ಶೇ.70.73 ಮತ್ತು ತರಿಕೆರೆಯಲ್ಲಿ ಶೇ.74.29ರಷ್ಟು ಮತದಾನವಾಗಿದೆ.