ಮತಯಂತ್ರ ಧ್ವಂಸ: 40 ಮಂದಿ ಬಂಧನ

| Published : Apr 28 2024, 01:16 AM IST

ಸಾರಾಂಶ

ಮತದಾನ ಬಹಿಷ್ಕಾರ ಘೋಷಿಸಿದ ಬಳಿಕ ಮತಯಂತ್ರವನ್ನೇ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗನತ್ತ ಗ್ರಾಮದಲ್ಲಿ 40 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಮತದಾನ ಬಹಿಷ್ಕಾರ ಘೋಷಿಸಿದ ಬಳಿಕ ಮತಯಂತ್ರವನ್ನೇ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗನತ್ತ ಗ್ರಾಮದಲ್ಲಿ 40 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಶುಕ್ರವಾರ ನಡೆದ ಘಟನೆ ಸ್ಥಳಕ್ಕೆ ಎಎಸ್ಸಿಪಿ. ಉದೇಶ್ ಹಾಗೂ ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದರ್ ಮತ್ತು ಇನ್ಸ್‌ಪೆಕ್ಟರ್‌ ಜಗದೀಶ್, ಮನೋಜ್ ಕುಮಾರ್, ಶಶಿಕುಮಾರ್ ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಹಾಗೂ ಇಒ ಉಮೇಶ್ ಅಧಿಕಾರಿಗಳ ತಂಡ ಮತ್ತು ಗ್ರಾಮ ಲೆಕ್ಕಿಗ ವಿನೋದ್ ಹಾಗೂ ಗ್ರಾಪಂ ಪಿಡಿಒ ಕಿರಣ್ ಕುಮಾರ್, ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿ ಗ್ರಾಮದಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಗ್ರಾಮದಲ್ಲಿ ಬಂಧನ ಭೀತಿಯಿಂದ ಕೆಲವರು ಮನೆಗಳನ್ನು ತೊರೆದಿರುವ ನಿವಾಸಿಗಳು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿದೆ.

ಮೆಂದಾರೆ ಗ್ರಾಮಕ್ಕೆ ಭೇಟಿ:

ಅಧಿಕಾರಿಗಳ ತಂಡ ಸಮೀಪದ ಮೆಂದಾರೆ ಗ್ರಾಮಕ್ಕೆ ಭೇಟಿ ನೀಡಿ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಮಾಡಲು ಬಂದಿದ್ದವರಿಗೆ ಹಲ್ಲೆ ನಡೆಸಿರುವ ಬಗ್ಗೆ ಹೇಳಿಕೆ ಪಡೆದು ಗ್ರಾಮಸ್ಥರಿಂದ ಅಧಿಕಾರಿಗಳು ಧೈರ್ಯ ತುಂಬುವ ಮೂಲಕ ಘಟನೆ ನಡೆದಿರುವ ಬಗ್ಗೆ ಪ್ರತಿಯೊಬ್ಬರು ಹೇಳಿಕೆ ಪಡೆದು ಗ್ರಾಮದಲ್ಲಿ ಶಾಂತಿಸುವ ವ್ಯವಸ್ಥೆ ಕಾಪಾಡುವಲ್ಲಿ ನಿರತರಾಗಿದ್ದಾರೆ. ಪ್ರತ್ಯೇಕ ಪ್ರಕರಣಗಳ ದಾಖಲು:

ಶುಕ್ರವಾರ ಇಂಡಿಗನತ್ತ ಗ್ರಾಮದಲ್ಲಿ ಕಲ್ಲುತೂರಾಟ ಗಲಭೆ ಮತಗಟ್ಟೆ ಧ್ವಂಸ ಮತ್ತು ಇವಿಎಂ ಪರಿಕರಗಳನ್ನು ಹಾಳು ಮಾಡಿ ಪೊಲೀಸ್ ವಯರ್‌ಲೆಸ್‌ ಪರಿಕರಗಳನ್ನು ಸಹ ನಾಶಪಡಿಸಿ ಅರಣ್ಯ ಇಲಾಖೆ ವಾಹನ ಮತ್ತು ಮೂರು ಖಾಸಗಿ ವಾಹನಗಳ ಜಖಂಗೊಂಡಿರುವ ಬಗ್ಗೆ ಹಾಗೂ ಅಧಿಕಾರಿ ಸಿಬ್ಬಂದಿಗಳ ಮೇಲೆ ನಡೆಸಿರುವ ಹಲ್ಲೆ ಬಗ್ಗೆ, ಪಿಆರ್‌ಒ ಬಸವಣ್ಣ ಮತ್ತು ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ನೀಡಿದ ಪ್ರತ್ಯೇಕ ಮಾಹಿತಿ ಆಧಾರದ ಮೇಲೆ ಪೊಲೀಸರು 250ಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು 40ಕ್ಕೂ ಹೆಚ್ಚು ಮಹಿಳೆಯರು ಹಾಗೂ ಪುರುಷರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಂದಾರೆ ಗ್ರಾಮದ ನೀರಿನ ಪೈಪ್ ಲೈನ್ ನಾಶ : ಇಂಡಿಗನತ್ತ ಗ್ರಾಮದಲ್ಲಿ ಶುಕ್ರವಾರ ನಡೆದ ಕಲ್ಲುತೂರಾಟ ಗಲಭೆ ನಂತರ ಮೆಂದರೆ ಗ್ರಾಮದ ಸೋಲಿಗರ ಹಾಡಿಗೆ ಅಳವಡಿಸಿರುವ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಘಟನೆ ಸಹ ನಡೆದಿದೆ. ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರದಿಂದ ಗ್ರಾಮಸ್ಥರ ಮನವೂಲಿಸಲುಮತ್ತು ಮತದಾನ ಮಾಡಲು ಅವಕಾಶ ಕಲ್ಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಹೀಗಾಗಿ ಗ್ರಾಮದಲ್ಲಿ ನಡೆದಿರುವ ಘಟನೆಯಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಮೇಲೆ ಕಲ್ಲುತೂರಾಟ ಹಲ್ಲೆ ನಡೆಸಲಾಗಿದೆ ಮತ್ತು ಜೊತೆಗೆ ಮತಯಂತ್ರ, ಇವಿಎಂ ಮಿಷನ್ ಮತ್ತು ಸರ್ಕಾರಿ ವಾಹನ ಖಾಸಗಿ ವಾಹನ ಮತ್ತು ಕಟ್ಟಡವನ್ನು ಧ್ವಂಸಗೊಳಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಹೀಗಾಗಿ ಮತದಾನ ಕೇಂದ್ರ ಹಾಳು ಮಾಡಿರುವ ಬಗ್ಗೆ ಗಂಭೀರವಾಗಿ ಸರ್ಕಾರ ಕ್ರಮ ಕೈಗೊಂಡಿದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. -ಗುರುಪ್ರಸಾದ್, ತಾಲೂಕು ದಂಡಾಧಿಕಾರಿ