200ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

| Published : Apr 28 2024, 01:17 AM IST

ಸಾರಾಂಶ

ಬಾಗಲಕೋಟೆ: ಪ್ರಧಾನಮಂತ್ರಿ ಮೋದಿಯ ಅಭಿವೃದ್ಧಿ ಕಾರ್ಯ ಮೆಚ್ಚಿಕೊಂಡು 200ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡರು.

ಬಾಗಲಕೋಟೆ: ಪ್ರಧಾನಮಂತ್ರಿ ಮೋದಿಯ ಅಭಿವೃದ್ಧಿ ಕಾರ್ಯ ಮೆಚ್ಚಿಕೊಂಡು 200ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡರು. ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಮುಚಖಂಡಿ ಎಲ್.ಟಿ.1 ಮತ್ತು 2ರ ಹಾಗೂ ನವನಗರದ ಗಂಗಾರಾಮ ಚವ್ಹಾಣ, ದೀಲಿಪ ರಾಥೋಡ, ರವಿ ಚವ್ಹಾಣ, ವಿನೋಧ ಚವ್ಹಾಣ, ಸತೀಶ ರಾಥೋಡ, ರಣಧೀರ ರಾಥೋಡ, ಮಿಥುನ ಕಾರಬಾರಿ, ಸೂರಜ್ ರಾಥೋಡ, ಸುನೀಲ ರಾಥೋಡ, ಪ್ರೀತಮ್ ರಾಥೋಡ, ಚೇತನ ಚವ್ಹಾಣ, ಅವಿನಾಶ ಚವ್ಹಾಣ, ಅಭಿಷೇಕ ಚವ್ಹಾಣ, ಹಾಗೂ ಮುಚಖಂಡಿಯ ಗೆಳೆಯರ ಬಳಗ ಮತ್ತು ನವನಗರದ ಪಂಡಿತ ಬಾತ್ಕರ, ಆಕಾಶ ಹೂಗಾರ, ಬಸವರಾಜ ಪಾಟೀಲ, ಚೇತನ ಚೇದೂಕರ, ಅಬ್ದುಲ್ ಸದು, ಚಂದ್ರು ಹಗಲಿ ಸೇರಿದಂತೆ 200ಕ್ಕೂ ಹೆಚ್ಚು ಜನ ಬಿಜೆಪಿಗೆ ಸೇರ್ಪಡೆಗೊಂಡರು.

ಎಲ್ಲ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ದೇಶದ ಯವಜನಾಂಗಕ್ಕೆ ಮೋದಿ ನಾಯಕತ್ವದ ಮೇಲೆ ಅಪಾರ ನಂಬಿಕೆ ಇದೆ. ಇಂದಿನ ಯುವ ಸಮೂಹ ಮೋದಿ ಬೆನ್ನಿಗಿದೆ, ಎಲ್ಲರೂ ಬಿಜೆಪಿ ಮತ ಹಾಕಿ ಮೋದಿಯವರ ಕೈ ಬಲಪಡಿಸೋಣ ಎಂದರು.

ಜಿ.ಎನ್.ಪಾಟೀಲ, ಪ್ರಭುಸ್ವಾಮಿ ಸರಗಣಾಚಾರಿ, ಪರಶುರಾಮ ಛೆಬ್ಬಿ, ರಂಗನಗೌಡ ಗೌಡರ, ಸುರೇಶ ಕೋಣ್ಣುರ, ರಾಜು ಮುದೆನೂರ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸೋಮಸಿಂಗ ಲಮಾಣಿ, ಆನಂದ ಕೊಟಗಿ, ರವಿ ಲಮಾಣಿ, ಸುನೀಲ ಲಮಾಣಿ, ಗಿರೀಶ ರಾಥೋಡ, ಕಿರಣ ಚವ್ಹಾಣ, ಬಾಸು ಲಮಾಣಿ ಸೇರಿದಂತೆ ಅನೇಕರು ಇದ್ದರು,