ಮಧ್ಯವರ್ತಿ ದೂರವಿಟ್ಟ ಜನ್‌ಧನ್‌

| Published : Apr 28 2024, 01:16 AM IST

ಮಧ್ಯವರ್ತಿ ದೂರವಿಟ್ಟ ಜನ್‌ಧನ್‌
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಕೋಟ್ಯಂತರ ಬಡವರು ವಿವಿಧ ಸೇವೆ ಪಡೆಯಲು ಮಧ್ಯವರ್ತಿಗಳನ್ನು ಅವಲಂಬಿಸುವುದು ತಪ್ಪಿದೆ. ನೇರವಾಗಿ ಜನರ ಖಾತೆಗೆ ಸೌಲಭ್ಯ ವರ್ಗಾವಣೆ ಆಗುತ್ತಿದೆ.

ಹುಬ್ಬಳ್ಳಿ:

ಪ್ರಧಾನಿ ನರೇಂದ್ರ ಮೋದಿ ಜಾರಿ ತಂದ ಜನ್‌ಧನ್ ಖಾತೆ ಯೋಜನೆ ಮಧ್ಯವರ್ತಿಗಳನ್ನು ದೂರವಿಡುವಲ್ಲಿ ಸಫಲವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿಗ್ಗಾಂವಿ-ಸವಣೂರ ವಿಧಾನಸಭಾ ಕ್ಷೇತ್ರದ ಬನ್ನೂರು, ಕ್ಯಾಲ್ಕೊಂಡ, ಬಸವನಾಳ ಮತ್ತು ಅತ್ತಿಗೇರಿ ಗ್ರಾಮಗಳಲ್ಲಿ ಶನಿವಾರ ಮತಯಾಚಿಸಿ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಜನ್‌ಧನ್ ಖಾತೆಯಿಂದ ಬಡವರಿಗೆ ನೇರವಾಗಿ ಪಿಂಚಣಿ, ವಿಮೆ, ಠೇವಣಿ, ಉಳಿತಾಯ ಸೇವೆ, ಸೌಲಭ್ಯ ಪಡೆಯಲು ಅನುಕೂಲವಾಗಿದೆ ಎಂದು ಹೇಳಿದರು.

ದೇಶದ ಕೋಟ್ಯಂತರ ಬಡವರು ವಿವಿಧ ಸೇವೆ ಪಡೆಯಲು ಮಧ್ಯವರ್ತಿಗಳನ್ನು ಅವಲಂಬಿಸುವುದು ತಪ್ಪಿದೆ. ನೇರವಾಗಿ ಜನರ ಖಾತೆಗೆ ಸೌಲಭ್ಯ ವರ್ಗಾವಣೆ ಆಗುತ್ತಿದೆ ಎಂದರು.

ಮೋದಿ ಅವರು ಬಡವರ ಪಾಲಿನ ಬಂಧುವಾಗಿದ್ದಾರೆ. ಇಂಥ ನಾಯಕತ್ವ ಗುಣವುಳ್ಳ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸಬೇಕಿದೆ. ಇದಕ್ಕಾಗಿ ಎಲ್ಲರೂ ಬಿಜೆಪಿಗೆ ಮತದಾನ ಮಾಡುವ ಮೂಲಕ ಬೆಂಬಲಿಸಬೇಕು ಎಂದರು.

ವಾಕಿಂಗ್‌ ಮೂಲಕ ಮತಯಾಚನೆ:

ಶನಿವಾರ ಬೆಳಗ್ಗೆ ಇಲ್ಲಿನ ತೋಳನಕೆರೆ ಪಾರ್ಕನಲ್ಲಿ ವಾಯುವಿಹಾರಿಗಳೊಂದಿಗೆ ವಾಕಿಂಗ್‌ ಮಾಡುತ್ತಲೇ ಮತಯಾಚಿಸಿದರು. ಕಳೆದ ಒಂದು ದಶಕದಲ್ಲಿ ಜಿಲ್ಲೆಯಲ್ಲೆ ಆದ ಅಭಿವೃದ್ಧಿ ಕೆಲಸ ಮತ್ತು ದೇಶದಲ್ಲಾಗುತ್ತಿರುವ ವೇಗದ ಬೆಳವಣಿಗೆ ಬಗ್ಗೆ ಸಾರ್ವಜನಿಕರಿಗೆ ಮನದಟ್ಟು ಮಾಡಿದರು. ಬಿಜೆಪಿಯನ್ನು ಬೆಂಬಲಿಸಿ ನರೇಂದ್ರ ಮೋದಿ ಅವರ ಕೈಬಲಪಡಿಸುವಂತೆ ಕೋರಿದರು.

ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆಯ ಮೇಯರ್‌ ವೀಣಾ ಬರದ್ವಾಡ, ಚನ್ನು ಹೊಸಮನಿ, ವಿಶ್ವನಾಥ ಸೋಮಾಪುರ, ಕಿರಣ ಉಪ್ಪಾರ, ಶಿವಯ್ಯ ಹಿರೇಮಠ, ಪ್ರಕಾಶ್ ಶೃಂಗೇರಿ ಹಾಗೂ ಕಾರ್ಯಕರ್ತರು ಜೊತೆಗಿದ್ದರು.