ರಸ್ತೆ ದಾಟಿದ ಕಾಡಾನೆಗಳು!

| Published : Apr 28 2024, 01:16 AM IST

ಸಾರಾಂಶ

ಈ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದೆ. ಕೆಲಸ ಮಾಡುವ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಮಡಿಕೇರಿ: ಸುಂಟಿಕೊಪ್ಪ - ಚೆಟ್ಟಳ್ಳಿ ರಸ್ತೆ ಮಾರ್ಗದ ಮತ್ತಿಕಾಡು ಬಳಿ ಶನಿವಾರ ಮಧ್ಯಾಹ್ನ ಎರಡು ಕಾಡಾನೆಗಳು ರಸ್ತೆ ದಾಟಿದವು. ಈ ಭಾಗದ ಕಾಫಿ ತೋಟದಲ್ಲಿ ಕಾಡಾನೆಗಳು ಬೀಡು ಬಿಟ್ಟಿದೆ.

ಇದರಿಂದ ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಯನ್ನು ಸಮೀಪದ ಮೀನುಕೊಲ್ಲಿ ಅರಣ್ಯಕ್ಕೆ ಸೇರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.ಮೈಸೂರು- ಕೊಡಗು

-----------------------------------------------

ಲೋಕಸಭಾ ಕ್ಷೇತ್ರದಲ್ಲಿ ಶೇ.70.62 ಮತದಾನ

ಕನ್ನಡಪ್ರಭ ವಾರ್ತೆ ಮೈಸೂರುಈ ಬಾರಿಯ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಶೇ.70.62 ಮತದಾನ ಆಗಿದೆ. 2019ರಲ್ಲಿ ಶೇ.69.25 ರಷ್ಟು ಮತದಾನ ಆಗಿತ್ತು. ಇದನ್ನು ಗಮನಿಸಿದರೇ 2019ಕ್ಕಿಂತ ಈ ಬಾರಿ ಮತದಾನ ಪ್ರಮಾಣದಲ್ಲಿ ತುಸು ಹೆಚ್ಚಳವಾಗಿದೆ.

ಎಂದಿನಂತೆ ಗ್ರಾಮಾಂತರ ಪ್ರದೇಶದಲ್ಲೇ ಹೆಚ್ಚು ಮತದಾನ ಆಗಿದ್ದು, ನಗರ ಪ್ರದೇಶದಲ್ಲಿ ಕಡಿಮೆ ಮತದಾನ ಪ್ರಮಾಣ ಕಡಿಮೆ ಆಗಿದೆ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.80.19 ಮತದಾನ ಆಗಿದೆ. ಕೃಷ್ಣರಾಜ ಕ್ಷೇತ್ರದಲ್ಲಿ ಶೇ.60.87 ಮತದಾನದೊಂದಿಗೆ ಕೊನೆಯ ಸ್ಥಾನದಲ್ಲಿದೆ.ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಒಟ್ಟು 2092222 ಮತದಾರರ ಪೈಕಿ 1477571 ಮತದಾನ ಮಾಡಿದ್ದಾರೆ. ಇದರಲ್ಲಿ 1026324 ಪುರುಷ ಮತದಾರರ ಪೈಕಿ 732605 (ಶೇ.71.38), 1065714 ಮಹಿಳಾ ಮತದಾರರ ಪೈಕಿ 744927 (ಶೇ.69.90) ಹಾಗೂ 184 ಇತರೆ ಮತಾರರ ಪೈಕಿ 39 (ಶೇ.21.20) ಮತದಾನ ಮಾಡಿದ್ದಾರೆ.ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಸೇರಿವೆ. ಇದರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ 238733 ಮತದಾರರ ಪೈಕಿ 180037 (ಶೇ.75.41) ಮತದಾನ ಮಾಡಿದ್ದಾರೆ. ವಿರಾಜಪೇಟೆ ಕ್ಷೇತ್ರದ 232033 ಮತದಾರರ ಪೈಕಿ 171426 (ಶೇ.73.88), ಪಿರಿಯಾಪಟ್ಟಣ ಕ್ಷೇತ್ರದ 198625 ಮತದಾರರ ಪೈಕಿ 159286 (ಶೇ.80.19), ಹುಣಸೂರು ಕ್ಷೇತ್ರದ 247607 ಮತದಾರರ ಪೈಕಿ 192921 (ಶೇ.77.91), ಚಾಮುಂಡೇಶ್ವರಿ ಕ್ಷೇತ್ರದ 348764 ಮತದಾರರ ಪೈಕಿ 255987 (ಶೇ.73.40), ಕೃಷ್ಣರಾಜ ಕ್ಷೇತ್ರದ 258212 ಮತದಾರರ ಪೈಕಿ 157182 (ಶೇ.60.87), ಚಾಮರಾಜ ಕ್ಷೇತ್ರದ 257269 ಮತದಾರರ ಪೈಕಿ 156893 (ಶೇ.60.98) ಹಾಗೂ ನರಸಿಂಹರಾಜ ಕ್ಷೇತ್ರದ 310979 ಮತದಾರರ ಪೈಕಿ 203839 (ಶೇ.65.55) ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.ವಿಧಾನಸಭಾ ಕ್ಷೇತ್ರವಾರು ಮತದಾನ: ಪಿರಿಯಾಪಟ್ಟಣ- ಶೇ.80.19, ಹುಣಸೂರು- ಶೇ.77.91, ಮಡಿಕೇರಿ- ಶೇ.75.41

ವಿರಾಜಪೇಟೆ- ಶೇ.73.88, ಚಾಮುಂಡೇಶ್ವರಿ- ಶೇ.73.40, ನರಸಿಂಹರಾಜ- ಶೇ.65.55, ಚಾಮರಾಜ- ಶೇ.60.98ಕೃಷ್ಣರಾಜ- ಶೇ.60.87