ಭೂ ಸಂರಕ್ಷಣೆ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು

| Published : Apr 23 2024, 12:52 AM IST

ಸಾರಾಂಶ

ಮನುಷ್ಯನ ಅಗತ್ಯತೆಗಳನ್ನು ಭೂಮಿ ಪೂರೈಸುತ್ತಾ ಬಂದಿದೆ. ಆಗಾಗಿ ಭೂಮಿಯನ್ನು ಕಾಪಾಡಬೇಕು, ಮಲಿನ ಆಗದಂತೆ ಎಚ್ಚರ ವಹಿಸಬೇಕು, ಭೂಮಿಯೊಳಗಿನ ಪೌಷ್ಟಿಕಾಂಶಗಳನ್ನು ನಾವು ಸಂರಕ್ಷಿಸಬೇಕು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಮಾನವನ ಜೀವನಕ್ಕೆ ಸಕಲವನ್ನು ನೀಡುತ್ತಿರುವ ಭೂಮಿಯನ್ನು ಸಂಕ್ಷಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕೆಂದು ನಗರ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಯಮನಪ್ಪ ಕರೆ ಹನುಮಂತಪ್ಪ ಸಲಹೆ ನೀಡಿದರು.

ನಗರದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ ,ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಭೂಮಿ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರದಷ್ಟೇ ಭೂಮಿ ರಕ್ಷಣೆ ಮಾಡುವುದು ಅಗತ್ಯವೆಂದರು.ಭೂಮಿಯ ಸತ್ವ ರಕ್ಷಿಸಬೇಕು

ಭೂಮಿ ಮೇಲೆ ಮನುಷ್ಯ ಮಾತ್ರವಲ್ಲದೇ ಸಕಲ ಜೀವರಾಶಿಗಳು ಕೂಡ ಜೀವಿಸುತ್ತಿವೆ. ಭೂಮಿ ಇಲ್ಲದೇ ಮನುಷ್ಯನ ಜೀವನವನ್ನು ನಾವು ಊಹಿಸಿಕೊಳ್ಳಲು ಅಸಾಧ್ಯ, ಮನುಷ್ಯನ ಅಗತ್ಯತೆಗಳನ್ನು ಭೂಮಿ ಪೂರೈಸುತ್ತಾ ಬಂದಿದೆ. ಆಗಾಗಿ ಭೂಮಿಯನ್ನು ಕಾಪಾಡಬೇಕು, ಮಲಿನ ಆಗದಂತೆ ಎಚ್ಚರ ವಹಿಸಬೇಕು, ಭೂಮಿಯೊಳಗಿನ ಪೌಷ್ಟಿಕಾಂಶಗಳನ್ನು ನಾವು ಸಂರಕ್ಷಿಸಬೇಕು. ಭೂಮಿಯ ಆರೋಗ್ಯ ರಕ್ಷಿಸಬೇಕೆಂದರು. ಜಾಗತಿಕ ತಾಪಮಾನ ಏರಿಕೆ

ನಂತರ ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣ ಸ್ವಾಮಿ ಮಾತನಾಡಿ ಮಿತಿ ಮೀರಿದ ಜನಸಂಖ್ಯೆ , ಜೀವವೈವಿಧ್ಯತೆಯ ನಷ್ಟ ಓಝೋನ್ ಪದರದ ಸವಕಳಿ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಸೇರಿದಂತೆ ಹಲವು ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು , ಜವಾಬ್ದಾರಿಯಿಂದ ವರ್ತಿಸಲು ಈ ದಿನ ಒತ್ತು ನೀಡುತ್ತದೆ. ಜಾಗತಿಕ ತಾಪಮಾನ ಏರಿಕೆ , ಮಾಲಿನ್ಯ ಹೆಚ್ಚಳ ಇವೇ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಸಮಕಾಲೀನ ಹಾಗೂ ಹೊಸ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಒಳಗೊಂಡಿದೆ ಎಂದರು.ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಪೂಜ.ಜೆ, ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಚಂದ್ರಶೇಖರ್ ಅಲಬೂರು, ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ ಭಾಸ್ಕರ್ , ವಕೀಲರಾದ ಪಿ.ಆರ್ . ಶರತ್ , ಜಿ.ಎನ್. ನಾಗರಾಜು, ಎಚ್.ಎನ್. ಕೃಷ್ಣಮೂರ್ತಿ , ಕೆ.ಎಂ.ನಾಗಮಣಿ , ಆರ್.ವಿ.ವೀಣಾ, ಸಿ. ಲಕ್ಷ್ಮೀ ,ಸಿ.ಕೆ.ವೆಂಕಟೇಶ್ , ಎಂ. ಪಾಪಿರೆಡ್ಡಿ , ಡಿ.ವಿ.ಸತ್ಯನಾರಾಯಣ ಹಾಜರಿದ್ದರು ..