ಚಿಕ್ಕಬಳ್ಳಾಪುರ ಕ್ಷೇತ್ರ: ಬೆಂ.ಗ್ರಾ. ಜಿಲ್ಲೆಯಲ್ಲಿ ಶೇ.77.40 ಮತದಾನ

| Published : Apr 27 2024, 01:17 AM IST

ಚಿಕ್ಕಬಳ್ಳಾಪುರ ಕ್ಷೇತ್ರ: ಬೆಂ.ಗ್ರಾ. ಜಿಲ್ಲೆಯಲ್ಲಿ ಶೇ.77.40 ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಒಟ್ಟು 4,44,084 ಪುರುಷರ ಪೈಕಿ 3,45,364 ಮಂದಿ, 4,54,221 ಮಹಿಳೆಯರಲ್ಲಿ 3,48,186, 143 ತೃತೀಯ ಲಿಂಗಿ ಮತದಾರರಲ್ಲಿ 55 ಜನರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 8,98,448 ಮತದಾರರ ಪೈಕಿ 6,93,605 ಮತದಾರರು ಮತದಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ 4 ತಾಲೂಕುಗಳ ವ್ಯಾಪ್ತಿಯಲ್ಲಿ ಶಾಂತಿಯುತ ಕೊನೆಗೊಂಡಿದೆ.

ಸಂಜೆ 5 ಗಂಟೆ ವೇಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.77.20ರಷ್ಟು ಮತದಾನ ನಡೆದಿತ್ತು. ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.74.50 ಮತದಾನ ನಡೆದಿದ್ದು, 1,08,921 ಪುರುಷರ ಪೈಕಿ 81,935, 1,11,346 ಮಹಿಳೆಯರಲ್ಲಿ 82,169, ಓರ್ವ ತೃತೀಯ ಲಿಂಗಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 2,20,268 ಮತದಾರರ ಪೈಕಿ 1,64,105 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ದೇವನಹಳ್ಳಿಯಲ್ಲಿ ಶೇ.78

ದೇವನಹಳ್ಳಿ ಕ್ಷೇತ್ರದಲ್ಲಿ ಶೇ.78.66 ಮತದಾನ ನಡೆದಿದ್ದು, 1,07,245 ಪುರುಷರ ಪೈಕಿ 85,433, 1,09,443 ಮಹಿಳೆಯರಲ್ಲಿ 85,024, 16 ತೃತೀಯ ಲಿಂಗಿಗಳಲ್ಲಿ ಮೂವರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 2,16,704 ಮತದಾರರ ಪೈಕಿ 1,70,460 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಹೊಸಕೋಟೆ ಕ್ಷೇತ್ರದಲ್ಲಿ ಶೇ.81.83ರಷ್ಟು ಮತದಾನ ನಡೆದಿದ್ದು, 1,18,662 ಪುರುಷರ ಪೈಕಿ 97,170, 1,20,474 ಮಹಿಳೆಯರಲ್ಲಿ 98,508, 21 ತೃತೀಯ ಲಿಂಗಿ ಮತದಾರರ ಪೈಕಿ 13 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 2,39,157 ಮತದಾರರ ಪೈಕಿ 1,95,691 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ನೆಲಮಂಗಲ ಶೇ.73.48

ನೆಲಮಂಗಲ ಕ್ಷೇತ್ರದಲ್ಲಿ ಶೇ.73.48ರಷ್ಟು ಮತದಾನ ನಡೆದಿದ್ದು, 1,09,256 ಪುರುಷರ ಪೈಕಿ 80826, 1,12,958 ಮಹಿಳೆಯರಲ್ಲಿ 82,485, 105 ತೃತೀಯ ಲಿಂಗಿ ಮತದಾರರಲ್ಲಿ 38 ಜನರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 2,22,319 ಮತದಾರರ ಪೈಕಿ 1,63,349 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು ಶೇ.77.20ರಷ್ಟು ಮತದಾನ ನಡೆದಿದ್ದು, 4,44,084 ಪುರುಷರ ಪೈಕಿ 3,45,364, 4,54,221 ಮಹಿಳೆಯರಲ್ಲಿ 3,48,186, 143 ತೃತೀಯ ಲಿಂಗಿ ಮತದಾರರಲ್ಲಿ 55 ಜನರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 8,98,448 ಮತದಾರರ ಪೈಕಿ 6,93,605 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.