ಡೆಲ್ಲಿ ಕ್ಯಾಪಿಟಲ್ಸ್‌ vs ಮುಂಬೈ ಇಂಡಿಯನ್ಸ್‌ ನಿರ್ಣಾಯಕ ಫೈಟ್‌

| Published : Apr 27 2024, 01:23 AM IST / Updated: Apr 27 2024, 04:11 AM IST

ಡೆಲ್ಲಿ ಕ್ಯಾಪಿಟಲ್ಸ್‌ vs ಮುಂಬೈ ಇಂಡಿಯನ್ಸ್‌ ನಿರ್ಣಾಯಕ ಫೈಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ಲೇ-ಆಫ್‌ ದೃಷ್ಟಿಯಿಂದ ಇತ್ತಂಡಕ್ಕೂ ಗೆಲುವು ಅನಿವಾರ್ಯ. ಅದರಲ್ಲೂ ಮುಂಬೈಗೆ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲ್ಲಲೇಬೇಕು.

ನವದೆಹಲಿ: 17ನೇ ಆವೃತ್ತಿ ಐಪಿಎಲ್‌ನಲ್ಲಿ ಸಾಧಾರಣ ಪ್ರದರ್ಶನ ನೀಡುತ್ತಿರುವ 2 ತಂಡಗಳಾದ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಶನಿವಾರ ಪರಸ್ಪರ ಮುಖಾಮುಖಿಯಾಗಲಿವೆ. ಪ್ಲೇ-ಆಫ್‌ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. 

ಅದರಲ್ಲೂ ಮುಂಬೈಗೆ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಲು ಗೆಲುವು ಅನಿವಾರ್ಯ.5 ಬಾರಿ ಚಾಂಪಿಯನ್‌ ಮುಂಬೈ ಈ ಬಾರಿ 8 ಪಂದ್ಯಗಳನ್ನಾಡಿದ್ದು, 3ರಲ್ಲಿ ಗೆದ್ದು 6ರಲ್ಲಿ ಪರಾಭವಗೊಂಡಿದೆ. ಮತ್ತೊಂದು ಸೋಲು ತಂಡವನ್ನು ನಾಕೌಟ್‌ನಿಂದ ಬಹುತೇಕ ಹೊರಗಿಡಲಿದೆ. ಹ್ಯಾಟ್ರಿಕ್‌ ಸೋಲಿನ ಬಳಿಕ ಮುಂಬೈ ಪುಟಿದೆದ್ದರೂ ಅಸ್ಥಿರ ಆಟ ತಂಡವನ್ನು ಸೋಲಿನತ್ತ ನೂಕುತ್ತಿದೆ. 

ಎಲ್ಲಾ ವಿಭಾಗದಲ್ಲೂ ಸುಧಾರಿತ ಪ್ರದರ್ಶನ ನೀಡಿದರೆ ಮಾತ್ರ ಹಾರ್ದಿಕ್‌ ನಾಯಕತ್ವದ ಮುಂಬೈಗೆ ಈ ಪಂದ್ಯದಲ್ಲಿ ಗೆಲುವು ದಕ್ಕಲಿದೆ.ಮತ್ತೊಂದೆಡೆ ಡೆಲ್ಲಿ 9ರಲ್ಲಿ 4 ಪಂದ್ಯ ಗೆದ್ದಿದ್ದು, 5ರಲ್ಲಿ ಸೋಲನುಭವಿಸಿದೆ. ಮೊದಲ ಮುಖಾಮುಖಿಯಲ್ಲಿ ಮುಂಬೈಗೆ ಶರಣಾಗಿದ್ದ ತಂಡ ಈ ಬಾರಿ ಸೇಡಿನ ಕಾತರದಲ್ಲಿದೆ. ರಿಷಭ್‌ ಪಂತ್‌ ತಂಡದ ಆಧಾರಸ್ತಂಭ ಎನಿಸಿಕೊಂಡಿದ್ದು, ಬೌಲರ್‌ಗಳು ಮೊನಚು ದಾಳಿ ಸಂಘಟಿಸಬೇಕಿದೆ. ಜೇಕ್ ಫ್ರೇಸರ್‌, ಸ್ಟಬ್ಸ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಒಟ್ಟು ಮುಖಾಮುಖಿ: 34ಮುಂಬೈ: 19ಡೆಲ್ಲಿ: 15

ಸಂಭವನೀಯ ಆಟಗಾರರು

ಮುಂಬೈ: ಇಶಾನ್‌, ರೋಹಿತ್‌, ಸೂರ್ಯ, ತಿಲಕ್‌, ಹಾರ್ದಿಕ್‌(ನಾಯಕ), ಡೇವಿಡ್, ನೇಹಲ್‌, ನಬಿ, ಕೋಟ್ಜೀ, ಚಾವ್ಲಾ, ಬೂಮ್ರಾ.ಡೆಲ್ಲಿ: ಪೃಥ್ವಿ ಶಾ, ಫ್ರೇಸರ್‌, ಅಭಿಷೇಕ್‌, ಹೋಪ್‌, ರಿಷಭ್‌(ನಾಯಕ), ಸ್ಟಬ್ಸ್‌, ಅಕ್ಷರ್‌, ಕುಲ್ದೀಪ್‌, ನೋಕಿಯಾ, ಖಲೀಲ್‌, ಮುಕೇಶ್‌.

ಪಂದ್ಯ: ಮಧ್ಯಾಹ್ನ 3.30ಕ್ಕೆ