ರಾಯಲ್ಸ್‌ ಸವಾಲಿಗೆ ಲಖನೌ ಸೂಪರ್‌ ಜೈಂಟ್ಸ್‌ ಸಜ್ಜು

| Published : Apr 27 2024, 01:16 AM IST / Updated: Apr 27 2024, 04:12 AM IST

ಸಾರಾಂಶ

ರಾಯಲ್ಸ್‌ ಜಯಿಸಿದರೆ ಪ್ಲೇ-ಆಫ್ ಸ್ಥಾನ ಬಹುತೇಕ ಖಚಿತ. ಮಾಜಿ ಚಾಂಪಿಯನ್‌ ರಾಜಸ್ಥಾನ ಆಡಿರುವ 8 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಅಗ್ರಸ್ಥಾನದಲ್ಲಿದೆ.

ಲಖನೌ: ಈ ಆವೃತ್ತಿ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್‌ ಪ್ಲೇ-ಆಫ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದು, ಶನಿವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಸೆಣಸಾಡಲಿದೆ. ಲಖನೌ ಕೂಡಾ ತವರಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರಲು ಕಾಯುತ್ತಿದೆ.

ಮಾಜಿ ಚಾಂಪಿಯನ್‌ ರಾಜಸ್ಥಾನ ಆಡಿರುವ 8 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಅಗ್ರಸ್ಥಾನದಲ್ಲಿದೆ. ಒಂದಿಬ್ಬರನ್ನು ನೆಚ್ಚಿಕೊಳ್ಳದೆ ಸಂಘಟಿತ ಪ್ರದರ್ಶನ ತೋರುತ್ತಿರುವುದು ತಂಡದ ಪ್ಲಸ್‌ ಪಾಯಿಂಟ್‌. ಬಟ್ಲರ್‌, ಜೈಸ್ವಾಲ್‌, ರಿಯಾನ್‌ ಪರಾಗ್‌, ನಾಯಕ ಸ್ಯಾಮ್ಸನ್‌ ಅಬ್ಬರಿಸುತ್ತಿದ್ದು, ವೇಗಿಗಳಾದ ಸಂದೀಪ್‌, ಬೌಲ್ಟ್‌, ಆವೇಶ್‌, ಸ್ಪಿನ್ನರ್‌ಗಳಾದ ಅಶ್ವಿನ್‌, ಚಹಲ್‌ ಎದುರಾಳಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ.

ಅತ್ತ ಲಖನೌ ಕೂಡಾ ಆಲ್ರೌಂಡ್‌ ಆಟದಿಂದ ಗಮನ ಸೆಳೆಯುತ್ತಿದ್ದು, ಆಡಿರುವ 8ರಲ್ಲಿ 5 ಗೆದ್ದಿದೆ. ರಾಜಸ್ಥಾನ ವಿರುದ್ಧ ಸೋಲುವ ಮೂಲಕ ಟೂರ್ನಿಗೆ ಕಾಲಿರಿಸಿದ್ದ ತಂಡ ಈಗ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಸ್ಟೋಯ್ನಿಸ್ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದ್ದು, ಗಾಯಾಳು ವೇಗಿ ಮಯಾಂಕ್‌ ಯಾದವ್‌ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

ಒಟ್ಟು ಮುಖಾಮುಖಿ: 04ರಾಜಸ್ಥಾನ: 03ಲಖನೌ: 01

ಸಂಭವನೀಯರ ಪಟ್ಟಿ

ರಾಜಸ್ಥಾನ: ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌(ನಾಯಕ), ರಿಯಾನ್‌, ಜುರೆಲ್‌, ಹೆಟ್ಮೇಯರ್‌, ಅಶ್ವಿನ್‌, ಬೌಲ್ಟ್‌, ಆವೇಶ್, ಸಂದೀಪ್‌, ಚಹಲ್‌ಲಖನೌ: ಡಿ ಕಾಕ್‌, ರಾಹುಲ್‌(ನಾಯಕ), ಸ್ಟೋಯ್ನಿಸ್‌, ಹೂಡಾ, ಪೂರನ್‌, ಬದೋನಿ, ಕೃನಾಲ್‌, ಮ್ಯಾಟ್‌ ಹೆನ್ರಿ, ರವಿ, ಮೊಹ್ಸಿನ್‌, ಯಶ್‌.

ಪಂದ್ಯ: ಸಂಜೆ 7.30ಕ್ಕೆ