ಉಡುಪಿ: ಮತದಾನದ ಮೂಲಕ ಸ್ಫೂರ್ತಿಯಾದ ಮಠಾಧೀಶರು

| Published : Apr 27 2024, 01:19 AM IST

ಸಾರಾಂಶ

ಪೇಜಾವರ ಮಠದ ಶ್ರೀ ವಿಶ‍್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ನಗರದ ನಾರ್ತ್‌ ಶಾಲೆಯಲ್ಲಿ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮತ್ತು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಪಣಿಯಾಡಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮತಗಳನ್ನು ಚಲಾಯಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಈಶ ಸೇವೆಯ ಜೊತೆಗೆ ದೇಶ ಸೇವೆಯ ಕರ್ತವ್ಯವನ್ನು ಪ್ರತಿ ಚುನಾವಣೆಯಲ್ಲಿ ತಪ್ಪದೇ ನಿಭಾಯಿಸುವ ಉಡುಪಿಯ ಅಷ್ಟ ಮಠಗಳ ಸ್ವಾಮೀಜಿಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಮತದಾನ ನಡೆಸಿ ಇತರರಿಗೆ ಸ್ಫೂರ್ತಿಯಾದರು.

ಪೇಜಾವರ ಮಠದ ಶ್ರೀ ವಿಶ‍್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ನಗರದ ನಾರ್ತ್‌ ಶಾಲೆಯಲ್ಲಿ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮತ್ತು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಪಣಿಯಾಡಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮತಗಳನ್ನು ಚಲಾಯಿಸಿದರು.

ಪಲಿಮಾರು ಮಠದ ಹಿರಿಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಮತ್ತು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ನಾರ್ತ್‌ ಶಾಲೆಗೆ ತೆರಳಿ ಮತದಾನ ಮಾಡಿದರು.

ಇನ್ನು ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರಿಪಾದರು ಪ್ರಥಮ ಬಾರಿಗೆ ಮತದಾನದಲ್ಲಿ ಭಾಗವಹಿಸಿದ್ದು, ಅವರು ರಥಬೀದಿ ಪಕ್ಕದ ವಿದ್ಯೋದಯ ಶಾಲೆಗೆ ತೆರಳಿ ಮತ ನೀಡಿದರು.

ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಅಮೂಲ್ಯವಾದ ಮತವನ್ನು ಉಡುಪಿಯ ಪಾಣಿಯಾಡಿ ಶಾಲೆಯಲ್ಲಿ ಚಲಾಯಿಸಿದರು.

ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ನಾರ್ತ್ ಶಾಲೆಯಲ್ಲಿ ಮತದಾನ ಮಾಡಿದರು.

ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ನಗರದ ಟಿ.ಎ.ಪೈ ಮೋರ್ಡನ್ ಶಾಲೆಯಲ್ಲಿ ಮತ ಚಲಾವಣೆ ಮಾಡಿದರು.