ಇಂದಿನ ಚುನಾವಣೆ ಪ್ರಜಾಪ್ರಭುತ್ವದ ಉಳುವಿಗಾಗಿ: ಆಂಜನೇಯ

| Published : Apr 28 2024, 01:19 AM IST

ಇಂದಿನ ಚುನಾವಣೆ ಪ್ರಜಾಪ್ರಭುತ್ವದ ಉಳುವಿಗಾಗಿ: ಆಂಜನೇಯ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಬೇಕು. ಶೋಷಿತ ಸಮುದಾಯಗಳಿಗೆ ಸಮಾನತೆ ಕೊಟ್ಟಿದ್ದು ಇಂದಿರಾಗಾಂಧಿ.

ಹರಪನಹಳ್ಳಿ: ದೇಶದಲ್ಲಿ ಈಗ ನಡೆಯುತ್ತಿರುವ ಚುನಾವಣೆ ಪ್ರಜಾಪ್ರಭುತ್ವ ಉಳಿವಿಗಾಗಿ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಅವರು ಪಟ್ಟಣದ ಹೊರವಲಯದಲ್ಲಿರುವ ಸಮತಾ ರೆಸಾರ್ಟ್‌ನಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.

ದೇಶದಲ್ಲಿ ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಬೇಕು. ಶೋಷಿತ ಸಮುದಾಯಗಳಿಗೆ ಸಮಾನತೆ ಕೊಟ್ಟಿದ್ದು ಇಂದಿರಾಗಾಂಧಿ ಎಂದರು.

ಬಿಜೆಪಿ ತಮ್ಮ ಮಾತುಗಳನ್ನು ಕೇಳದವರ ವಿರುದ್ಧ ಆಗಾಗ ಐಟಿ, ಸಿಬಿಐ, ಇಡಿಗಳನ್ನು ಬಳಸಿಕೊಂಡು ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ವಾಮಮಾರ್ಗದಲ್ಲಿ ಅಧಿಕಾರ ಮಾಡುತ್ತಾರೆ, ಅಧಿಕಾರ ಹಿಡಿಯುತ್ತಾರೆ ಎಂದು ತಿಳಿಸಿದರು.

ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಇಂದು ಶೋಷಿತ ಸಮುದಾಯದವರು ಜಾಗೃತರಾಗಬೇಕು. ನಾವು ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಸಂವಿಧಾನ ಬದಲಾವಣೆ ಮಾಡುತ್ತಿದ್ದೇವೆ ಎಂದು ಹೇಳುತ್ತಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡ ಕೋಡಿಹಳ್ಳಿ ಭೀಮಪ್ಪ, ತಾಪಂ ಮಾಜಿ ಸದಸ್ಯ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಎಂ.ಪಿ. ವೀಣಾ ಮಹಾಂತೇಶ, ಹಲಗೇರಿ ಮಂಜಪ್ಪ, ಕಂಚಿಕೇರಿ ಅಂಜಿನಪ್ಪ, ಕೊಟ್ರೇಶ, ಕೆ.ಅಶೋಕ, ಸಿ.ಪ್ರತಾಪ, ಮೋತಿನಾಯ್ಕ, ಇಸ್ಮಾಯಿಲ್‌ ಎಲಿಗಾರ, ಶಿವಣ್ಣ, ಯರಬಾಳು ಹನುಮಂತಪ್ಪ, ಹುಚ್ಚಪ್ಪ, ಸಿ.ಪರಶುರಾಮ, ಬೇತೂರು ಮಂಜುನಾಥ, ನರಸಿಂಹರಾಜು, ಚಿಕ್ಕೇರಿ ಬಸಪ್ಪ ಇದ್ದರು.