ಪ್ರಜಾಪ್ರಭುತ್ವದ ಮಹತ್ವ ಅರಿತಿರುವರು ಕಡ್ಡಾಯ ಮತ ಚಲಾಯಿಸಿ

| Published : Apr 26 2024, 12:47 AM IST

ಪ್ರಜಾಪ್ರಭುತ್ವದ ಮಹತ್ವ ಅರಿತಿರುವರು ಕಡ್ಡಾಯ ಮತ ಚಲಾಯಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನ ಡಾ.ಅಂಬೇಡ್ಕರ್ ವೃತ್ತದಲ್ಲಿರುವ ಪತ್ರಿಕೆಗಳ ವಿಂಗಡಣೆ ಹಾಗೂ ರವಾನೆ ಕೇಂದ್ರದಿಂದ ಬೀದರಿನಲ್ಲಿ ಹಂಚಿಕೆಯಾಗುವ ಸಮಸ್ತ ಪತ್ರಿಕೆಗಳ ಏಜೆಂಟರು, ವಿತರಕರು ಹಾಗೂ ಮಾರಾಟಗಾರರಿಗೆ ಮತದಾನ ಜಾಗೃತಿ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್ಪತ್ರಿಕಾ ರಂಗದಲ್ಲಿ ಕೆಲಸ ಮಾಡುವ ಏಜೆಂಟರು, ವಿತರಕರು ಹಾಗೂ ಮಾರಾಟಗಾರರು ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಹೊಂದಿದವರಾಗಿರುವುದರಿಂದ ಮತದಾನದ ಬಗ್ಗೆ ಜಾಗೃತರಾಗಿದ್ದು, ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಬೇಕೆಂದು ಅಖಿಲ ಭಾರತ ವಿಶ್ವ ವಿದ್ಯಾಲಯ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ವೀರಭದ್ರಪ್ಪ ಉಪ್ಪಿನ ನುಡಿದರು.

ಅವರು ಗುರುವಾರ ಬೆಳಗ್ಗೆ ಬೀದರ್‌ನ ಡಾ.ಅಂಬೇಡ್ಕರ್ ವೃತ್ತದಲ್ಲಿರುವ ಪತ್ರಿಕೆಗಳ ವಿಂಗಡಣೆ ಹಾಗೂ ರವಾನೆ ಕೇಂದ್ರದಿಂದ ಬೀದರಿನಲ್ಲಿ ಹಂಚಿಕೆಯಾಗುವ ಸಮಸ್ತ ಪತ್ರಿಕೆಗಳ ಏಜೆಂಟರು, ವಿತರಕರು ಹಾಗೂ ಮಾರಾಟಗಾರರಿಗೆ ಮತದಾನ ಜಾಗೃತಿ ಬೋಧಿಸಿ ಮಾತನಾಡಿ, ನಮ್ಮ ಇಚ್ಛೆ ಯಾವುದೇ ರಾಜಕೀಯ ಪಕ್ಷ ಯಾವುದೇ ವ್ಯಕ್ತಿಗಳಿಗೆ ಮತವನ್ನು ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕೆಂದು ಅಭಿಪ್ರಾಯಪಟ್ಟರು.

ಹಿರಿಯ ನ್ಯಾಯವಾದಿ ಗಂಗಪ್ಪ ಸಾವಳೆ ಮಾತನಾಡಿ, ನಾವು ಕೇವಲ ಘೋಷಣೆ ಕೂಗಿದರೆ ಸಾಲದು. ಯಾವುದೇ ಮಹಿಳೆಯರಾಗಲಿ ಪುರುಷರಾಗಲಿ ಕಡ್ಡಾಯ ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಈ ವೇಳೆ ಹಾಜರಿದ್ದ ಎಲ್ಲರೂ ತಪ್ಪದೇ ಮತದಾನ ಮಾಡುವ ಸಂಕಲ್ಪ ಕೈಗೊಂಡರು. ಈ ಸಂದರ್ಭದಲ್ಲಿ ಚಂದ್ರಕಾಂತ್, ರಾಮಚಂದ್ರ, ಬಾಗೇಶ್, ಸೋಮನಾಥ್, ಸಂತೋಷ್ ಬಿರಾದಾರ್, ಮನೋಜ್ ಕುಮಾರ್, ರಿಯಾಜ್ ಪಾಶಾ ಕೊಳ್ಳೂರ, ಸಚಿನ್, ಜಾವಿದ, ಶಿವರಾಜ ಜಮಾದಾರ, ದೇವದಾಸ, ಬಸಣ್ಣ, ರಾಮಚಂದ್ರ, ಸೋಮನಾಥ, ಸಂತೋಷ, ಬಿರಾದಾರ, ಹಾಗೂ ಇತರರು ಹಾಜರಿದ್ದರು.