ಕೊಣ್ಣೂರ ಗ್ರಾಮದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

| Published : Apr 26 2024, 12:47 AM IST

ಕೊಣ್ಣೂರ ಗ್ರಾಮದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಗೋಕಾಕ: ಸುಮಾರು 100ಕ್ಕೂ ಹೆಚ್ಚು ಕೊಣ್ಣೂರ ಗ್ರಾಮದ ಕಾರ್ಯಕರ್ತರು ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬುಧವಾರ ಸೇರ್ಪಡೆಯಾದರು. ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಬಿಜೆಪಿ ತತ್ವ ಸಿದ್ಧಾಂತವನ್ನು ನಂಬಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಇನ್ನೂ ಸಾವಿರಾರು ಜನ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಗೋಕಾಕ

ಸುಮಾರು 100ಕ್ಕೂ ಹೆಚ್ಚು ಕೊಣ್ಣೂರ ಗ್ರಾಮದ ಕಾರ್ಯಕರ್ತರು ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬುಧವಾರ ಸೇರ್ಪಡೆಯಾದರು. ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಬಿಜೆಪಿ ತತ್ವ ಸಿದ್ಧಾಂತವನ್ನು ನಂಬಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಇನ್ನೂ ಸಾವಿರಾರು ಜನ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದರು.

ಗೋಕಾಕ ಮತಕ್ಷೇತ್ರದ ಕೊಣ್ಣೂರ ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡರಾದ ಜಿನಪ್ಪ ಬೋರಗಲ್ಲಿ, ಪರುಶುರಾಮ ರಾಮಗಾನಟ್ಟಿ, ಕುಮಾರ ಬೆಳವಿ, ಜಿನಪ್ಪ ಬೆಡಕಿಹಾಳ ನೇತೃತ್ವದಲ್ಲಿ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಸೇರ್ಪಡೆಯಾದ ಕಾರ್ಯರ್ತರು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಆತ್ಮೀಯವಾಗಿ ಸತ್ಕರಿಸಿದರು.

ಈ ಸಂಧರ್ಭದಲ್ಲಿ ಭೀಮನಗೌಡ ಪೊಲೀಸಗೌಡರ, ಮಣಿಕಂಠ ರಾಮಗಾನಟ್ಟಿ, ಜಗದೀಶ ವಣ್ಣೂರ, ಬಸವರಾಜ ಮಾದರ, ಪಾರೀಶ್ ಬಿಲ್ಲನವರ, ಕಲ್ಲಪ್ಪ ವಿಜಯನಗರ, ಭರಮಪ್ಪ ನವನಿ, ರಾಜು ಚೌಗಲಾ, ಬಾಳಪ್ಪ ಚೌಗಲಾ, ಮಲಿಕ್ ಯರಗಟ್ಟಿ, ಕಾರ್ತಿಕ್ ಹರಿಜನ, ಮಹಾನಿಂಗ್ ಮಾದರ, ಮಾರುತಿ ಮಾದರ, ಈಶ್ವರ ರಾಮಗಾನಟ್ಟಿ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.