ಮತ ಹಾಕುವುದರ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ: ತೆಗ್ಗಿನಮಠದ ಶ್ರೀ

| Published : Apr 27 2024, 01:16 AM IST

ಮತ ಹಾಕುವುದರ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ: ತೆಗ್ಗಿನಮಠದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಸಂವಿಧಾನದಲ್ಲಿ ಅವಕಾಶ ಕೊಟ್ಟಿರುವ ಮತದಾನದ ಹಕ್ಕನ್ನು ಎಲ್ಲರೂ ಬಳಸಿಕೊಂಡು ಉತ್ತಮ ವ್ಯಕ್ತಿಗೆ ಮತ ಹಾಕಿ ದೇಶದ ಅಭಿವೃದ್ಧಿಗೆ ಸಹಕರಿಸೋಣ ಎಂದು ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಉತ್ತಮ ವ್ಯಕ್ತಿಯನ್ನು ನಿರ್ಣಯಿಸಲು ನಮ್ಮ ಅಮೂಲ್ಯವಾದ ಮತವನ್ನು ಹಾಕುವ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಿದೆ ಎಂದು ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಹೇಳಿದರು.

ಪಟ್ಟಣದ ತೆಗ್ಗಿನಮಠದ ಚಂದ್ರಮೌಳೇಶ್ವರ ಶಿವಚಾರ ಸಭಾಂಗಣದಲ್ಲಿ ತೆಗ್ಗಿನಮಠ ಹಾಗೂ ದಾವಣಗೆರೆ ಬ್ಲಡ್ ಕೇಂದ್ರದಿಂದ ಆಯೋಜಿಸಿದ್ದ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ರಕ್ತದಾನ ಶಿಬಿರ ಮತ್ತು ಮತದಾನದ ಜಾಗೃತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದ ಸಂವಿಧಾನದಲ್ಲಿ ಅವಕಾಶ ಕೊಟ್ಟಿರುವ ಮತದಾನದ ಹಕ್ಕನ್ನು ಎಲ್ಲರೂ ಬಳಸಿಕೊಂಡು ಉತ್ತಮ ವ್ಯಕ್ತಿಗೆ ಮತ ಹಾಕಿ ದೇಶದ ಅಭಿವೃದ್ಧಿಗೆ ಸಹಕರಿಸೋಣ ಎಂದ ಅವರು ತೆಗ್ಗಿನಮಠ ತನ್ನದೆಯಾದ ಶೈಕ್ಷಣಿಕ ಕೊಡಿಗೆಯನ್ನು ನಾಡಿಗೆ ಕೊಟ್ಟಿದೆ. ಈ ಮಠದಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮ ಹಾಗೂ ಸೇವೆಗಳು ನಡೆಯಲಿವೆ ಎಂದರು.

ಪಟ್ಟಣದ ಐ.ಬಿ. ವೃತ್ತದಿಂದ ತೆಗ್ಗಿನಮಠದ ವರೆಗೂ ಮತದಾನ ಪವಿತ್ರವಾದದ್ದು, ಎಲ್ಲರೂ ತಪ್ಪದೆ ನಮ್ಮ ಹಕ್ಕಾದ ಮತದಾನ ಮಾಡಬೇಕು ಎಂದು ವಿವಿಧ ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.

ರಕ್ತದಾನ ಶಿಬಿರ ನಡೆಯಿತು. ತಾಲೂಕಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ತೆಗ್ಗಿನಮಠದ ಆಡಳಿತಾಧಿಕಾರಿ ಟಿ.ಎಂ. ಚಂದ್ರಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಸ್ಮಾಯಿಲ್ ಎಲಿಗಾರ ವಹಿಸಿದ್ದರು.ಈ ಸಂದರ್ಭದಲ್ಲಿ ಸಮಾಜ ಸೇವಕಿ ಲಲಿತಮ್ಮ, ಸಂಸ್ಕಾರ ಭಾರತಿಯ ಮಹಾವೀರ ಭಂಡಾರಿ, ವೈದ್ಯ ಮಹೇಶ, ಟಿ.ಎಂ. ಶಿವಶಂಕರ, ಟಿ.ಎಂ. ಪ್ರತೀಕ, ಟಿ.ಎಂ. ವಿಶ್ವನಾಥ, ಧರ್ಮಕರ್ತರಾದ ಪಿ.ಬಿ. ಗೌಡ್ರು, ಟಿ.ಎಂ. ರಾಜಶೇಖರ, ರೇವಣಸಿದ್ದಪ್ಪ, ಶಕುಂತಲಮ್ಮ, ಗುರುಸಿದ್ದಪ್ಪ, ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಸೇರಿದಂತೆ ಇತರರು ಇದ್ದರು.