ಮಸ್ಕಿಯಲ್ಲಿ ಜಂಗಮ ಸಮಾಜದಿಂದ ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ

| Published : Apr 26 2024, 12:47 AM IST

ಸಾರಾಂಶ

ಮಸ್ಕಿ ಪಟ್ಟಣದ ತಹಸೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಜಂಗಮ ಸಮಾಜ ಸೇವಾ ಸಂಸ್ಥೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆಯಂತಹ ಪ್ರಕರಣಗಳು ಹೆಚ್ಚಾಗತೊಡಗಿವೆ. ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ರಾಜ್ಯದಲ್ಲಿ ತಲ್ಲಣಗೊಳಿಸಿದ್ದು ಕೂಡಲೇ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಮಸ್ಕಿ ತಾಲೂಕು ಜಂಗಮ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ಘನಮಠದಯ್ಯ ಸಾಲಿಮಠ ಒತ್ತಾಯಿಸಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ ಅರಮನೆ ಸುಧಾ ಅವರಿಗೆ ಸಲ್ಲಿಸಿದರು. ಮಸ್ಕಿ ತಾಲೂಕು ಜಂಗಮ ಸಮಾಜದವರು ಗಚ್ಚಿನ ಹಿರೇಮಠದಲ್ಲಿ ಸಮಾವೇಶಗೊಂಡು ನೇಹಾ ಹತ್ಯೆ ಖಂಡಿಸಿದರು. ಸಿದ್ದಲಿಂಗಯ್ಯ ಗಚ್ಚಿನಮಠ, ಕರಿಬಸಯ್ಯ ಸಿಂಧನೂರು ಮಠ, ವೀರೇಶ ಕ್ಯಾತ್ನಟ್ಟಿ, ಚಂದ್ರಶೇಖರಯ್ಯ ಕ್ಯಾತ್ನಟ್ಟಿ, ಶರಬಯ್ಯ ಸ್ವಾಮಿ ಬಳಗಾನೂರು, ಹಳ್ಳಿ ವಿರುಪಾಕ್ಷಯ್ಯ, ಸಿದ್ದಲಿಂಗಯ್ಯ ಸೊಪ್ಪಿಮಠ, ಶಾರಾದ ಗಣಚಾರಿ ಮಾತನಾಡಿದರು. ನಾಗೇಶ ಕಂಡಾಮುಡಿಮಠ, ಪಂಚಾಕ್ಷರಯ್ಯ ಕಂಬಾಳಿಮಠ, ಬಸವರಾಜಸ್ವಾಮಿ ಹಸಮಕಲ್, ವಿಶ್ವನಾಥಸ್ವಾಮಿ ಶಂಕರ ದೇವರ ಮಠ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಶಿವಕುಮಾರ ಶಾಸ್ತ್ರಿ ಮಠ, ಮಹೇಶ ಕೊಟ್ಟೂರು ಮಠ, ಗಂಗಾಧರಯ್ಯ ಕಂಬಾಳಿಮಠ, ಶಶಿಧರ ಹಂಚಿನಾಳ, ಸೋಮಶೇಖರಯ್ಯ ಶಿರವಾರಮಠ, ಶಿವಶಂಕ್ರಯ್ಯ ಸ್ಥಾವರಮಠ, ಶಾರದ ಗಣಾಚಾರಿ, ಅನ್ನಪೂರ್ಣಮ್ಮ, ನಿರ್ಮಾಲ ಗಚ್ಚಿನಮಠ, ಶಿವಲೀಲ ಗಚ್ಚಿನಮಠ ಹಾಗೂ ಇತರರು ಭಾಗವಹಿಸಿದ್ದರು.