ಎಸ್ ಯುಸಿಐ ಕಮ್ಯುನಿಷ್ಟ್ ಪಕ್ಷದ ಅಭ್ಯರ್ಥಿಯಿಂದ ಮತಯಾಚನೆ

| Published : Apr 26 2024, 12:46 AM IST / Updated: Apr 26 2024, 12:47 AM IST

ಸಾರಾಂಶ

ರಾಯಚೂರು ನಗರ ಮತ್ತು ಮಾನ್ವಿಯಲ್ಲಿ ಲೋಕಸಭಾ ಕ್ಷೇತ್ರದ ಸೋಷಲಿಸ್ಟ್ ಯುನಿಟ್ ಸೆಂಟರ್ ಆಫ್ ಇಂಡಿಯಾ ( ಕಮ್ಯುನಿಷ್ಟ್) ಪಕ್ಷದ ಅಭ್ಯರ್ಥಿ ರಾಮಲಿಂಗಪ್ಪ ಮತಯಾಚನೆ ಮಾಡಿದರು.

ರಾಯಚೂರು/ಮಾನ್ವಿ:

ರಾಯಚೂರು ನಗರ ಮತ್ತು ಮಾನ್ವಿಯಲ್ಲಿ ಲೋಕಸಭಾ ಕ್ಷೇತ್ರದ ಸೋಷಲಿಸ್ಟ್ ಯುನಿಟ್ ಸೆಂಟರ್ ಆಫ್ ಇಂಡಿಯಾ ( ಕಮ್ಯುನಿಷ್ಟ್) ಪಕ್ಷದ ಅಭ್ಯರ್ಥಿ ರಾಮಲಿಂಗಪ್ಪ ಮತಯಾಚನೆ ಮಾಡಿದರು.

ಕಲ್ಯಾಣ ಕರ್ನಾಟಕದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಇಂದಿಗೂ ಕೂಡ ಅಭಿವೃದ್ಧಿ ಹೊಂದದೆ ಇರುವುದಕ್ಕೆ ಈ ಭಾಗದ ಸಂಸದರು ಸದನದಲ್ಲಿ ಗಟ್ಟಿ ಧ್ವನಿಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸದೆ ಇರುವುದು ಆಗಿದೆ. ನನ್ನ ಚಿನ್ಹೆ ಮಡಿಕೆಗೆ ಮತನೀಡಿ ಗೆಲ್ಲಿಸಿ, ಈ ಭಾಗದ ಜನರು ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿವ ನೀರು, ಕೃಷ್ಣಾ, ತುಂಗಭದ್ರ, ಭೀಮಾ ಯೋಜನೆಗಳ ಕೊನೆ ಭಾಗದ ರೈತರ ಜಮೀನುಗಳಿಗೆ ನೀರಾವರಿ ವ್ಯವಸ್ಥೆ, ರಾಂಪೂರು, ಮಸ್ಕಿ, 9ಎ ಕಾಲುವೆ, ಸನ್ನತಿಯಂತಹ ಏತ ನೀರಾವರಿ ಯೋಜನೆಗಳ ಜಾರಿ, ರಾಯಚೂರಿಗೆ ಏಮ್ಸ್ ಮಂಜೂರು, ಸೈದಾಪುರ ಹತ್ತಿರ ರೈಲ್ವೆ ಕೋಚ್ ಫ್ಯಾಕ್ಟರಿ, ರಾಯಚೂರು-ಯಾದಗಿರಿ ಕಾರ್ಮಿಕರಿಗೆ ಇಎಸ್ಐ ಆಸ್ಪತ್ರೆ, ಸರ್ಕಾರಿ ಡಿಪ್ಲೊಮಾ, ಎಂಜಿನಿಯರಿಂಗ್ ಕಾಲೇಜ್, ರೈಲ್ವೆ ಯೋಜನೆ ಪೂರ್ಣಗೊಳಿಸುವುದು, ಭಾರತ ಮಾಲಾ 748 ಎ, ರಾಷ್ಟ್ರೀಯ ಹೆದ್ದಾರಿಗೆ ಜಮೀನು ಕಳೆದುಕೊಳ್ಳುವ ರೈತರಿಗೆ ಯೋಗ್ಯ ಪರಿಹಾರ, ಈ ಭಾಗದ ಎಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ವೇಳೆ ಪಕ್ಷದ ಮುಖಂಡರು,ಕಾರ್ಯಕರ್ತರು ಇದ್ದರು.