ಹಳೇ ಪೇಟೆ ಗುತ್ಯಮ್ಮದೇವಿ ದೇಗುಲದಲ್ಲಿ ಮಹಾರಥೋತ್ಸವ

| Published : Apr 28 2024, 01:27 AM IST

ಹಳೇ ಪೇಟೆ ಗುತ್ಯಮ್ಮದೇವಿ ದೇಗುಲದಲ್ಲಿ ಮಹಾರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ: ಹಳೇ ಪೇಟೆ ಗುತ್ಯಮ್ಮ ದೇವಿ ದೇವಸ್ಥಾನದಲ್ಲಿ ಮಹಾ ರಥೋತ್ಸವ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ದುರ್ಗಾಹೋಮ, ಮಧ್ಯಾಹ್ನ ಅಭಿಜನ್‌ ಲಗ್ನದಲ್ಲಿ ಅಮ್ಮನ ರಥೋತ್ಸವ ನಡೆಯಿತು.

ನರಸಿಂಹರಾಜಪುರ: ಹಳೇ ಪೇಟೆ ಗುತ್ಯಮ್ಮ ದೇವಿ ದೇವಸ್ಥಾನದಲ್ಲಿ ಮಹಾ ರಥೋತ್ಸವ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ದುರ್ಗಾಹೋಮ, ಮಧ್ಯಾಹ್ನ ಅಭಿಜನ್‌ ಲಗ್ನದಲ್ಲಿ ಅಮ್ಮನ ರಥೋತ್ಸವ ನಡೆಯಿತು.

ರಾತ್ರಿ ಶ್ರೀ ದುರ್ಗಾಂಬ ಮತ್ತು ಶ್ರೀ ಅಂತರಘಟ್ಟಮ್ಮ ದೇವಿಯೊಂದಿಗೆ ಗುತ್ಯಮ್ಮ ದೇವಸ್ಥಾನದಿಂದ ಹೊರಟು ಪಟ್ಟಣದ ಅಂಬೇಡ್ಕರ್ ವೃತ್ತದವರೆಗೆ ಮಂಗಳವಾದ್ಯದೊಂದಿಗೆ ರಾಜಬೀದಿಯಲ್ಲಿ ಮಹಾ ರಥೋತ್ಸವ ನಡೆಯಿತು. ಗುತ್ಯಮ್ಮ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ಪಿ.ಆರ್‌.ಸದಾಶಿವ, ಪ್ರಧಾನ ಕಾರ್ಯದರ್ಶಿ ಎಚ್‌.ಎನ್‌.ರವಿಶಂಕರ್‌, ಖಜಾಂಚಿ ನಾಗರಾಜ್, ಹಿರಿಯರಾದ ತಿಮ್ಮೇಗೌಡ, ಮೂರ್ತಿ, ಟ್ರಸ್ಟ್ ನ ಸದಸ್ಯರು ಹಾಗೂ ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಶನಿವಾರ ಬೆಳಿಗ್ಗೆ 10.30 ರಿಂದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ವ್ರತ ಹಾಗೂ ಅಮ್ಮನವರಿಗೆ ವಿಶೇಷ ಪೂಜೆ ನಡೆಯಿತು. ರಾತ್ರಿ ಅಮ್ಮನವರ ಉತ್ಸವದೊಂದಿಗೆ ಹೀಲ್‌ ಬೈಲಿಗೆ ತೆರಳಿ ವಿಶೇಷ ಪೂಜೆ ಹಾಗೂ ಬೆಳಗಿನ ಜಾವ 4 ಗಂಟೆ ಕೆಂಡಾರ್ಚನೆ ನಡೆಯಲಿದೆ. ಏಪ್ರಿಲ್ 28 ರ ಭಾನುವಾರ ವಿಶೇಷ ಪೂಜೆ ಹಾಗೂ ರಾತ್ರಿ ಪಂಜುರ್ಲಿ ಕೋಲ ನಡೆಯಲಿದೆ. ಸೋಮವಾರ ಅಮ್ಮನವರಿಗೆ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಅಷ್ಟ ಕುಲ ನಾಗೇಂದ್ರ ಸ್ವಾಮಿಗೆ ಪಂಚಾಮೃತ ಸಹಿತ ಪವಮಾನ ಪೂಜೆ ನಡೆಯಲಿದೆ.