ಚುನಾವಣೆ ಮುಗಿದ ಮೇಲೆ ಗ್ಯಾರಂಟಿಗಳು ಬಂದ್ : ರಮೇಶ ಜಾರಕಿಹೊಳಿ

| Published : Apr 28 2024, 01:27 AM IST / Updated: Apr 28 2024, 11:56 AM IST

ಚುನಾವಣೆ ಮುಗಿದ ಮೇಲೆ ಗ್ಯಾರಂಟಿಗಳು ಬಂದ್ : ರಮೇಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಘಟಪ್ರಭ: ಚುನಾವಣೆ ನಂತರ ಯಾವುದೇ ಗ್ಯಾರಂಟಿಗಳು ಜನರಿಗೆ ಸಿಗುವುದಿಲ್ಲ. ಲೋಕಸಭೆ ಚುನಾವಣೆ ಮುಗಿದ ಮೇಲೆ ಗ್ಯಾರಂಟಿಗಳು ಬಂದ್ ಆಗುತ್ತವೆ ಎಂದು ಶಾಸಕ ರಮೇಶ ಜಾರಕಿಹೋಳಿ ಲೇವಡಿ ಮಾಡಿದರು.  

 ಚುನಾವಣೆ  : ನಂತರ ಯಾವುದೇ ಗ್ಯಾರಂಟಿಗಳು ಜನರಿಗೆ ಸಿಗುವುದಿಲ್ಲ. ಲೋಕಸಭೆ ಚುನಾವಣೆ ಮುಗಿದ ಮೇಲೆ ಗ್ಯಾರಂಟಿಗಳು ಬಂದ್ ಆಗುತ್ತವೆ ಎಂದು ಶಾಸಕ ರಮೇಶ ಜಾರಕಿಹೋಳಿ ಲೇವಡಿ ಮಾಡಿದರು.

ಮಲ್ಲಾಪುರ ಪಿ.ಜಿ ಅಕ್ಕುತಾಯಿ ಶಾಲೆಯ ಆವರಣದಲ್ಲಿ ಶನಿವಾರ ಕರೆದ ಪಾಮಲದಿನ್ನಿ, ಶಿಂದಿಕುರಬೇಟ, ಮಲ್ಲಾಪುರ ಪುರಸಭೆಯ ವ್ಯಾಪ್ತಿಗೆ ಬರುವ ಬಿಜೆಪಿ ಹಿರಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಸುಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆ. ಅವರ ಭರವಸೆಗಳಿಗೆ ಮೋಸ ಹೋಗಬೇಡಿ. ಮೋದಿಯವರ ಶಾಶ್ವತ ಕಾಮಗಾರಿಗಳಿಗೆ ಗಮನಕೊಟ್ಟು ಮುಂಬರುವ ಲೋಕಸಭಾ ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅವರನ್ನು ಪ್ರಚಂಡ ಬಹುಮತದಿಂದ ಚುನಾವಣೆಯಲ್ಲಿ ಆರಿಸಿ ತರಬೇಕು ಎಂದು ಕೋರಿದರು.

ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೋದಿಯವರು ಜಾತಿ ಬೇಧ ಮಾಡದೇ ಎಲ್ಲ ಜನರಿಗೆ ಅನುಕೂಲ ಆಗುವಂತ ಹೆಣ್ಣು ಮಕ್ಕಳ ಕಲ್ಯಾಣ ಯೋಜನೆ, ಅರೋಗ್ಯ ವಿಮಾ ಯೋಜನೆ, ಬೇಟಿ ಬಚಾವ ಬೇಟಿ ಪಡಾವ, ಪ್ರತಿ ವರ್ಷ ರೈತರ ಖಾತೆಗೆ ₹ 6 ಸಾವಿರ ಜಮಾ ಮಾಡಿದ್ದು, ರೈತರಿಗಾಗಿ ಬೆಳೆ ವಿಮಾ ಯೋಜನೆಗಳನ್ನು ತಂದಿದ್ದಾರೆ. 

ಮೋದಿಯವರ ಕೈ ಬಲ ಪಡಿಸಲು ಜಗದೀಶ ಶೆಟ್ಟರ ಅವರನ್ನು ಆರಿಸಿ ತರುವಂತೆ ಮನವಿ ಮಾಡಿದರು.ಕೆಆರ್‌ಎಚ್ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ರಾಮಣ್ಣ ಹುಕ್ಕೆರಿ ಮಾತನಾಡಿ, ಮೋದಿಯವರು ಜನ ಸಾಮಾನ್ಯರ ಅನುಕೂಲಕ್ಕಾಗಿ ರೈಲ್ವೆ, ಮಾರಕಟ್ಟೆ, ಹೆದ್ಧಾರಿಗಳನ್ನು ಮಾಡಿದ್ದಾರೆ. ನಮ್ಮ ಭಾಗದ ಶಾಸಕ ರಮೇಶ ಜಾರಕಿಹೋಳಿಯವರು ಅನೇಕ ಆಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಬೆಳಗಾವಿ ಲೋಕಸಭಾ ಅಭ್ಯರ್ಥಿ ಶೆಟ್ಟರ ಅವರನ್ನು ಆರಿಸಿತರುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಗುರು ಕಡೇಲಿ, ರಾಮಣ್ಣ ಹುಕ್ಕೇರಿ, ಈಶ್ವರ ಮಟಗಾರ, ಸುರೇಶ ಪಾಟೀಲ, ಪರಶುರಾಮ ಕಲಕುಟಗಿ, ಪ್ರೇಮಾ ಭಂಡಾರಿ ಇದ್ದರು. ನೀಡ್ಸ್ ಸಂಸ್ಥೆಯ ಅಧ್ಯಕ್ಷ ಅರವಿಂದ ಬಡಕುಂದ್ರಿ ನಿರೂಪಿಸಿ, ವಂದಿಸಿದರು.