ಲೋಕಸಭಾ ಚುನಾವಣೆ: ಈ ಬಾರಿ ಮತದಾನದಲ್ಲಿ ಶೇ. 1.85 ರಷ್ಟು ಹೆಚ್ಚಳ

| Published : Apr 28 2024, 01:24 AM IST

ಲೋಕಸಭಾ ಚುನಾವಣೆ: ಈ ಬಾರಿ ಮತದಾನದಲ್ಲಿ ಶೇ. 1.85 ರಷ್ಟು ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ. 75.02 ರಷ್ಟು ಮತದಾನ ನಡೆದಿದೆ.ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮತದಾನದಲ್ಲಿ ಏರಿಕೆಯಾಗಿದೆ. ಅಂದರೆ, 2019ರಲ್ಲಿ ಶೇ. 73.17 ರಷ್ಟು ಮತದಾನವಾಗಿದ್ದರೆ, 2024ರಲ್ಲಿ ಶೇ. 75.02 ರಷ್ಟು ಮತದಾನವಾಗಿದೆ. ಈ ಬಾರಿ ಶೇ. 1.85 ರಷ್ಟು ಹೆಚ್ಚಾಗಿ ಮತದಾನವಾಗಿದೆ.

- ಮತದಾನ ಮಾಡುವಲ್ಲಿ ಮಹಿಳೆಯರ ನಿರಾಸಕ್ತಿ । ಚಿಕ್ಕಮಗಳೂರು ಹೊರತುಪಡಿಸಿ ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಹಿನ್ನಡೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ. 75.02 ರಷ್ಟು ಮತದಾನ ನಡೆದಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮತದಾನದಲ್ಲಿ ಏರಿಕೆಯಾಗಿದೆ. ಅಂದರೆ, 2019ರಲ್ಲಿ ಶೇ. 73.17 ರಷ್ಟು ಮತದಾನವಾಗಿದ್ದರೆ, 2024ರಲ್ಲಿ ಶೇ. 75.02 ರಷ್ಟು ಮತದಾನವಾಗಿದೆ. ಈ ಬಾರಿ ಶೇ. 1.85 ರಷ್ಟು ಹೆಚ್ಚಾಗಿ ಮತದಾನವಾಗಿದೆ.

ಕ್ಷೇತ್ರವಾರು ಅಂಕಿ ಅಂಶ ನೋಡಿದರೆ, ಮತದಾನದಲ್ಲಿ ಶೃಂಗೇರಿ ಕ್ಷೇತ್ರ ಮೊದಲ ಸ್ಥಾನದಲ್ಲಿದ್ದರೆ, ಚಿಕ್ಕಮಗಳೂರು ಕ್ಷೇತ್ರ ಕೊನೆ ಸ್ಥಾನದಲ್ಲಿದೆ. ಇನ್ನುಳಿದ 3 ಕ್ಷೇತ್ರಗಳಲ್ಲಿ ಸರಾಸರಿ ಶೇ. 75 ರಷ್ಟು ಮತದಾನ ಆಗಿದೆ.

ಇನ್ನೊಂದು ಆಘಾತಕಾರಿ ವಿಷಯವೆಂದರೆ, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ಹೊರತುಪಡಿಸಿ ಇನ್ನುಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಜನರಲ್ಲಿ ಮತದಾನದ ಬಗ್ಗೆ ಉತ್ಸಾಹ ಇರಲಿಲ್ಲ. ಕೇರಳ ದಿಂದ ಎನ್‌.ಆರ್‌.ಪುರ ತಾಲೂಕಿನಲ್ಲಿ ರಬ್ಬರ್‌ ತೋಟಗಳಲ್ಲಿ ಕೆಲಸಕ್ಕಾಗಿ ಬಂದಿರುವ ಹಲವು ಮಂದಿ ಕಾರ್ಮಿಕರು ವೋಟ್‌ ಮಾಡಲು ತಮ್ಮ ಸ್ವಗ್ರಾಮಕ್ಕೆ ತೆರಳಲೇ ಇಲ್ಲ. ಇನ್ನು ಚಿಕ್ಕಮಗಳೂರು ಗ್ರಾಮೀಣ ಭಾಗದ ಜನರು ಗ್ರಾಮಗಳಲ್ಲಿ ಇದ್ದರೂ ಸಹ ಮತಗಟ್ಟೆಗೆ ಹೋಗಿ ಮತದಾನ ಮಾಡಲಿಲ್ಲ. ಒಟ್ಟಾರೆ ಮತದಾನದಲ್ಲಿ ಶೇಕಡವಾರು ಏರಿಕೆಯಾದರೂ ಜನರು ಊರುಗಳಲ್ಲಿ ಇದ್ದರೂ ಕೂಡ ಮತದಾನ ಮಾಡದೆ ಇರುವುದು ಯಕ್ಷ ಪ್ರಶ್ನೆಯಾಗಿದೆ.----- ಬಾಕ್ಸ್‌---

ಕ್ಷೇತ್ರ ಮತದಾರರುವೋಟ್‌ ಮಾಡಿದ ಮತದಾರರು ಶೇ.

---------------------------------------------------------------------------

ಶೃಂಗೇರಿ168951 13567880.31

----------------------------------------------------------------------------

ಮೂಡಿಗೆರೆ 171642 132975 77.47

----------------------------------------------------------------------------

ಚಿಕ್ಕಮಗಳೂರು23221016425370.73

----------------------------------------------------------------------------

ತರೀಕೆರೆ19312514348274.29

---------------------------------------------------------------------------

ಕಡೂರು 208253155626 74.73

-------------------------------------------------------------------------- 27 ಕೆಸಿಕೆಎಂ 1ಉಡುಪಿಯ ಸ್ಟೈಂಟ್‌ ಸಿಸಿಲಿ ಸ್ಕೂಲ್‌ನಲ್ಲಿ ಇಡಲಾಗಿರುವ ಮತಯಂತ್ರಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.