ಲೋಕಸಭಾ ಚುನಾವಣೆ: ಸರಗೂರಿನಲ್ಲಿ ಶೇ.72.62 ಮತದಾನ

| Published : Apr 28 2024, 01:22 AM IST

ಸಾರಾಂಶ

ಸರಗೂರು ಪಟ್ಟಣದಲ್ಲಿ 10,011 ಮತದಾರರಿದ್ದು, ಇದರಲ್ಲಿ 7,270 ಮತದಾನ ನಡೆದಿರುತ್ತದೆ. ಸರಗೂರು ತಾಲೂಕಿನ ಗ್ರಾಮಂತಾರ ಭಾಗಗಳಲ್ಲಿ 92 ಮತಗಟ್ಟೆಗಳು ಇದ್ದು. ಯಾವ ಕಡೆ ಅಹಿತಕರ ಘಟನೆ ನಡೆಯದೆ ಶಾಂತಿಯುವಾಗಿ ಮತದಾನ ಆಗಿರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಮತದಾರರಿಗೆ ಮತದಾನ ಮಾಡಲು ತೊಂದರೆ ಆಗಿದೆ. ಉರಿ ಬಿಸಿಲಿನಲ್ಲಿ ಒಂದು ಎರಡು ಕಿ.ಮೀ ನಡೆದುಕೊಂಡು ಮತದಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಸರಗೂರು

ಪಟ್ಟಣದಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.72. 62 ಮತದಾನ ನಡೆದಿದೆ.

ಪಟ್ಟಣದಲ್ಲಿ 10,011 ಮತದಾರರಿದ್ದು, ಇದರಲ್ಲಿ 7,270 ಮತದಾನ ನಡೆದಿರುತ್ತದೆ. ಸರಗೂರು ತಾಲೂಕಿನ ಗ್ರಾಮಂತಾರ ಭಾಗಗಳಲ್ಲಿ 92 ಮತಗಟ್ಟೆಗಳು ಇದ್ದು. ಯಾವ ಕಡೆ ಅಹಿತಕರ ಘಟನೆ ನಡೆಯದೆ ಶಾಂತಿಯುವಾಗಿ ಮತದಾನ ಆಗಿರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಮತದಾರರಿಗೆ ಮತದಾನ ಮಾಡಲು ತೊಂದರೆ ಆಗಿದೆ. ಉರಿ ಬಿಸಿಲಿನಲ್ಲಿ ಒಂದು ಎರಡು ಕಿ.ಮೀ ನಡೆದುಕೊಂಡು ಮತದಾನ ಮಾಡಿದ್ದಾರೆ.

ತಾಲೂಕಿನ ಯಾವುದೆ ಹಾಡಿಗಳಲ್ಲಿ ಬೂತ್ ಇಲ್ಲದೆ ಹಾಡಿಯಿಂದ ನಡೆದು ಕೊಂಡು ಬಂದು ಮತದಾನ ಮಾಡಿದರು. ಕೆಲವು ಗ್ರಾಮಗಳಲ್ಲಿ ಗ್ರಾಮ ದಿಂದ ಗ್ರಾಮಕ್ಕೆ ಬಂದು ಮತದಾನ ಮಾಡಿದ್ದಾರೆ. ಮುಂದಿನ ಬಾರಿ ನಮ್ಮ ಗ್ರಾಮಗಳಲ್ಲಿ ಬೂತ್ ಇಡದಿದ್ದರೆ ಮತದಾನ ಮುಂದಿನ ತಾಪಂ ಮತ್ತು ಜಿಪಂಗೆ ಮತದಾನ ಮಡುವುದಿಲ್ಲ ಎಂದು ಮತದಾರರು ಎಚ್ಚರಿಸಿದ್ದಾರೆ. ತಾಲೂಕಿನ ಅಧಿಕಾರಿಗಳು ಸಮಸ್ಯೆ ಬಗೆ ಹರಿಸದಿದ್ದರೆ ಮತದಾನ ಮಾಡುವುದಿಲ್ಲ ಮತದಾರರು ತಿಳಿಸಿದರು.

ಸರಗೂರು ಪಟ್ಟಣದ ಮತದಾನದ ವಿವರ:

ಪಟ್ಟಣದಲ್ಲಿ 12 ವಾರ್ಡ್‌ಗಳಿದ್ದು ಇದರಲ್ಲಿ 10 ಮತಗಟ್ಟೆಗಳಲ್ಲಿ ಮತದಾನ ನಡೆದಿರುತ್ತದೆ. ಮತಗಟ್ಟೆ 177 ರಲ್ಲಿ 1,102 ಮತದಾರಿದ್ದು ಇದರಲ್ಲಿ 877 ಮತದಾನ ನಡೆದಿರುತ್ತದೆ. ಮತಗಟ್ಟೆ 187ರಲ್ಲಿ 786 ಮತದಾರಿದ್ದು 562 ಮತದಾನ ಆಗಿದೆ. ಮತಗಟ್ಟೆ 193ರಲ್ಲಿ 1013 ಮತದಾರಿದ್ದು 799 ಮತದಾನ ನಡೆಯಿತು. ಮತಗಟ್ಟೆ 194 ಸಖೀ ಮತಗಟ್ಟೆ ಕೇಂದ್ರವಾಗಿದ್ದು, 1,053 ಮತದಾರರಿದ್ದು 749 ಮಂದಿ ಮತದಾನ ನಡೆದಿರುತ್ತದೆ. ಮತಗಟ್ಟೆ 195 ರಲ್ಲಿ 997 ಮತದಾರರಿದ್ದು 704 ಮತದಾನ ನಡೆದಿದೆ. 196 ಮತಗಟ್ಟೆಯಲ್ಲಿ 880 ಮತದಾರರಿದ್ದು 530 ಮತದಾನ ಮಾಡಿರುತ್ತಾರೆ. ಮತಗಟ್ಟೆ 198 ಮತಗಟ್ಟೆಯಲ್ಲಿ 690 ಮತದಾರರಿದ್ದು 541 ಮತದಾನ ನಡೆದಿರುತ್ತದೆ. ಮತಗಟ್ಟೆ 199 ರಲ್ಲಿ 1448 ಮತದಾರರಲ್ಲಿ 1066 ಮತದಾನ ಆಗಿರುತ್ತದೆ.

ಮತಗಟ್ಟೆ 200ರಲ್ಲಿ 1334 ಮತದರರಿದ್ದು 906 ಮತದಾನ ಮಾಡಿರುತ್ತಾರೆ. ಮತಗಟ್ಟೆ 201 ರಲ್ಲಿ 710 ಮತದಾರರಿದ್ದು 536 ಮತದಾನ ಆಗಿದೆ. ಮತದಾನದ ಸಮಯದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಗೋಪಾಲಕೃಷ್ಣ, ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್, ಪಿಎಸ್‌.ಐ ಎಂ.ಸಿ. ಮಧು ಹಾಗೂ ಪೊಲೀಸ್ ತುಕಡಿಗಳು ಹಾಗೂ ಪಪಂ ಮುಖ್ಯಾಧಿಕಾರಿ, ಮಂಜುನಾಥ್ ಹಾಗೂ ಸಿಬ್ಬಂದಿ ವರ್ಗದವರು, ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಟ್ಟದಪುರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ

ಕನ್ನಡಪ್ರಭ ವಾರ್ತೆ ಬೆಟ್ಟದಪುರಬೆಟ್ಟದಪುರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ ನಡೆಯಿತು.ಬೆಟ್ಟದಪುರದಲ್ಲಿ ಬಿಸಿಲಿನ ತಾಪಕ್ಕೆ ಬೆಳಗ್ಗೆಯೇ ಹೆಚ್ಚಿನ ಜನರು ಬಂದು ಮತದಾನ ಮಾಡಿದರು. ಬೆಟ್ಟದಪುರ ವ್ಯಾಪ್ತಿಯ ಭುವನಹಳ್ಳಿ, ಕೊಣಸೂರು, ಅತ್ತಿಗೋಡು, ಹಲಗನಹಳ್ಳಿ, ಹರದೂರು, ಸುರಗಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಸಿನ ಮತದಾನ ಮಾಡಿದರು.

ಬೆಳಗ್ಗೆಯಿಂದಲೇ ಮತದಾನ ಚುರುಕಾಗಿ ನಡೆಯಿತು. ಮಧ್ಯಾಹ್ನದ ನಂತರ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಮತದಾರರು ಮತಗಟ್ಟೆಗೆ ಬಾರದೆ ಸಂಜೆ 4ರ ನಂತರ ಹೆಚ್ಚು ಮಂದಿ ಮತ ಚಲಾಯಿಸಿದರು.ಹಲಗನಹಳ್ಳಿ ಗ್ರಾಮದಲ್ಲಿ ಸಂಜೆ 7.30 ರವರೆಗೆ ಮತದಾನ ನಡೆಯಿತು. ಬೆಟ್ಟದತುಂಗಾ, ಮೇಗಳಾಕೊಪ್ಪಲು ಗ್ರಾಮದಲ್ಲಿ 1,325 ಮತದಾರರದು ಇಲ್ಲಿ ಒಂದೇ ಮತಗಟ್ಟೆ ಮಾಡಿರುವುದರಿಂದ ಮತದಾನ ಮಾಡಲು ಬಹಳ ಸಮಯ ಬೇಕಾಯಿತು. ಆದ್ದರಿಂದ ಮತ್ತೊಂದು ಮತಗಟ್ಟೆ ತೆರೆಯಬೇಕು ಎಂದು ಗ್ರಾಮದ ಮುಖಂಡ ಕೃಷ್ಣೆಗೌಡ ಆಗ್ರಹಿಸಿದರು.

ಬೆಟ್ಟದಪುರದಲ್ಲಿ ಗ್ರಾಪಂನ ಮನವಿ ಮೇರೆಗೆ ಶೇ. 65ರಷ್ಟು ಮತದಾನವಾಯಿತು. ಬೆಟ್ಟದಪುರ ಗ್ರಾಪಂ ಪಿಡಿಒ ಮಂಜುನಾಥ್‌ ಅವರ ನೇತೃತ್ವದಲ್ಲಿ ಮತದಾನ ಮಾಡಲು ವೃದ್ಧರು, ಅಂಗವಿಕಲರಿಗೆ ವಾಹನ ವ್ಯವಸ್ಥೆ ಮಾಡಲಾಗಿತ್ತು.ಅಲ್ಲದೆ ಹಲವು ಮಂದಿ ಸಮಾಜ ಸೇವಕರು ಮತದಾನಕ್ಕೆ ಬರುವ ಸಾರ್ವಜನಿಕರಿಗೆ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಿದ್ದರು. ಈ ವೇಳೆ ಬೆಟ್ಟದಪುರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಪರ ಮತಯಾಚಿಸಿದರು.

ಬೆಟ್ಟದಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಯಾವುದೇ ಹಿತಕರಣೆ ಘಟನೆ ನಡೆಯಯದ ಹಿನ್ನೆಲೆಯಲ್ಲಿ ಪೊಲೀಸರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.