ಮೃತ ಬಾಲಕ ಕುಟುಂಬಕ್ಕೆ ಧನ ಸಹಾಯ

| Published : Apr 27 2024, 01:00 AM IST

ಸಾರಾಂಶ

ಕೆಂಭಾವಿ ಪಟ್ಟಣದ ಸಮೀಪದ ನಗನೂರ-ಖಾನಾಪೂರ ಗ್ರಾಮದ ಕೆರೆಯಲ್ಲಿ ಮೂವರು ಬಾಲಕರು ಮುಳುಗಿ ದುರಂತ

ಕನ್ನಡಪ್ರಭ ವಾರ್ತೆ ಸುರಪುರತಾಲೂಕಿನ ಕೆಂಭಾವಿ ಪಟ್ಟಣದ ಸಮೀಪದ ನಗನೂರ-ಖಾನಾಪೂರ ಗ್ರಾಮದ ಕೆರೆಯಲ್ಲಿ ಮೂವರು ಬಾಲಕರು ಮುಳುಗಿ ದುರಂತ ಸಾವಿಗೀಡಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಶಹಾಪುರದ ಆಸ್ಪತ್ರೆಯಲ್ಲಿ ಕುಟುಂಬದ ಪಾಲಕರಿಗೆ ಇಲಾಖೆಯ ಪರವಾಗಿ ಧನ ಸಹಾಯ ಮಾಡಿ ಮಾತನಾಡಿದ ಸಿಪಿಐ ಸಚಿನ್ ಚಲುವಾದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರ ಸೂಚನೆ ಮೇರೆಗೆ, ಮಾನವೀಯತೆ ದೃಷ್ಟಿಯಿಂದ ನಮ್ಮ ಇಲಾಖೆ ಪರವಾಗಿ ಮೃತ ಕುಟುಂಬದ ಸದಸ್ಯರಿಗೆ ಅಲ್ಪ ಮೊತ್ತದ ಧನ ಸಹಾಯ ಮಾಡಲಾಗಿದೆ. ಇದು ಮೃತರ ಅಂತ್ಯಕ್ರಿಯೆ ವಿಧಿ-ವಿಧಾನಗಳನ್ನು ನೆರವೇರಿಸಲು ಸಹಕಾರಿಯಾಗಲಿದೆ ಎಂಬ ಆಶಾಭಾವನೆ ನಮ್ಮದಾಗಿದೆ ಎಂದರು. ಮೂವರು ಬಾಲಕರ ಸಾವಿನ ದುರಂತ ಘಟನೆ ಇಡೀ ಗ್ರಾಮವನ್ನೆ ಬೆಚ್ಚಿ ಬೀಳಿಸಿದೆ. ಪಾಲಕರು ತಮ್ಮ ಮಕ್ಕಳು ಮನೆಯಿಂದ ಹೊರಗೆ ಹೋಗದಂತೆ ನಿಗಾ ವಹಿಸಿಬೇಕು ಎಂದು ಮನವಿ ಮಾಡಿದರು. ಈ ವೇಳೆ ಕೆಂಭಾವಿ ಪಿಎಸ್‌ಐ ರಾಜಶೇಖರ ರಾಠೋಡ, ಗೋಗಿ ಪಿಎಸ್‌ಐ ದೇವೇಂದ್ರ ರೆಡ್ಡಿ ಹಾಗೂ ಸಿಬ್ಬಂದಿ ಇದ್ದರು.