ಬಿಆರ್‌ಟಿ ಅರಣ್ಯದಲ್ಲಿ ಬೆಂಕಿ: 30 ಎಕರೆ ಬೆಂಕಿಗಾಹುತಿ

| Published : Apr 28 2024, 01:23 AM IST

ಸಾರಾಂಶ

ತಾಲೂಕಿನ ಹುಲಿ ವನ್ಯಧಾಮ ಅರಣ್ಯ ಪ್ರದೇಶದವಾದ ಬಿಆರ್‌ಟಿ ಬೈಲೂರು ಅರಣ್ಯ ಪ್ರದೇಶದ 30 ಎಕರೆ ಅರಣ್ಯ ಪ್ರದೇಶ ಕಿಡಿಗೇಡಿಗಳ ಕೃತ್ಯಕ್ಕೆ ಬೆಂಕಿಗಾಹುತಿಯಾಗಿರುವ ಘಟನೆ ಜರುಗಿದೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಹುಲಿ ವನ್ಯಧಾಮ ಅರಣ್ಯ ಪ್ರದೇಶದವಾದ ಬಿಆರ್‌ಟಿ ಬೈಲೂರು ಅರಣ್ಯ ಪ್ರದೇಶದ 30 ಎಕರೆ ಅರಣ್ಯ ಪ್ರದೇಶ ಕಿಡಿಗೇಡಿಗಳ ಕೃತ್ಯಕ್ಕೆ ಬೆಂಕಿಗಾಹುತಿಯಾಗಿರುವ ಘಟನೆ ಜರುಗಿದೆ.

ಹುಲ್ಲುಗಾವಲಿನ ಅರಣ್ಯ ಪ್ರದೇಶವಾಗಿರುವುದರಿಂದ ಎತ್ತರವಾಗಿರುವ ಗುಡ್ಡದಲ್ಲಿ ಕಿಡಿಗೇಡಿಗಳು ಹಾಕಿರುವ ಬೆಂಕಿಯಿಂದ 30 ಎಕರೆ ಅರಣ್ಯ ಪ್ರದೇಶ ಬೆಂಕಿಯಿಂದ ಸುಟ್ಟು ಭಸ್ಮವಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ತಕ್ಷಣ ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಬೆಂಕಿ ನಂದಿಸಿದ್ದಾರೆ.

ಸಾರ್ವಜನಿಕರ ಸಹಕಾರ ಅತ್ಯಗತ್ಯ :

ಗ್ರಾಮಗಳ ಅಂಚಿನಲ್ಲೆ ಬಿಆರ್‌ಟಿ ಅರಣ್ಯ ಪ್ರದೇಶವಿದ್ದು, ಈ ಭಾಗದಲ್ಲಿರುವ ಸಾರ್ವಜನಿಕರು ಹಾಗೂ ರೈತರು ಗ್ರಾಮಸ್ಥರು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಾಗ ಸಹಕಾರ ನೀಡುವ ಮೂಲಕ ವನ್ಯಕುಲ ಅರಣ್ಯ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ಇಲಾಖೆಗೆ ಸಹಕಾರ ನೀಡಬೇಕು. ಈಗಾಗಲೇ ಹುಲ್ಲುಗಾವಲಿನಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಅರಣ್ಯ ಇಲಾಖೆ 80ಕ್ಕೂ ಹೆಚ್ಚು ಸಿಬ್ಬಂದಿ ಸತತವಾಗಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಒಂದು ವಾರದಿಂದಲೂ ಸಹ ಬಿಆರ್‌ಟಿ ವಲಯದ ಕೊಳ್ಳೇಗಾಲ ಹಾಗೂ ಚಾಮರಾಜನಗರ ಯಳಂದೂರು ವಿಭಾಗ ವಲಯಗಳಲ್ಲಿ ಬೆಂಕಿಗೆ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ. ಬಿಆರ್‌ಟಿ ಅರಣ್ಯ ಪ್ರದೇಶದ ಬೈಲೂರು ಭಾಗದ ಎತ್ತರವಾದ ಪ್ರದೇಶದಲ್ಲಿ ಯಾವುದೇ ಮರಗಿಡಗಳು ಇರಲಿಲ್ಲ. ಹುಲ್ಲಿಗೆ ಬೆಂಕಿ ಬಿದ್ದಿರುವುದರಿಂದ 30 ಎಕರೆ ಅರಣ್ಯ ಪ್ರದೇಶ ಸುಟ್ಟು ಹೋಗಿದೆ. ಯಾವುದೇ ಬೆಲೆ ಬಾಳುವ ಗಿಡಮರಗಳು ಹಾನಿಯಾಗಿಲ್ಲ. ಜೊತೆಗೆ ಪ್ರಾಣಿ ಪಕ್ಷಿಗಳಿಗೂ ಸಹ ತೊಂದರೆಯಾಗಿಲ್ಲ. ಸುದ್ದಿ ತಿಳಿದ ತಕ್ಷಣ ನಮ್ಮ ಇಲಾಖೆಯ 80ಕ್ಕೂ ಹೆಚ್ಚು ಸಿಬ್ಬಂದಿಗಳು ಸತತವಾಗಿ ಬೆಂಕಿ ನಂದಿಸುವ ಕಾರ್ಯದಿಂದಾಗಿ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

- ಪ್ರಮೋದ್, ವಲಯ ಅರಣ್ಯಾಧಿಕಾರಿ ಬಿಆರ್‌ಟಿ ವನ್ಯಧಾಮ