ಬೀರೂರು: ಉತ್ಸಾಹದಿಂದ ನಡೆದ ಮತದಾನೋತ್ಸವ

| Published : Apr 28 2024, 01:20 AM IST

ಸಾರಾಂಶ

ಕಡೂರು ಕ್ಷೇತ್ರದ ಬೀರೂರು ಹೋಬಳಿಯ ಮತದಾನ ಪ್ರಕ್ರಿಯೆಯಲ್ಲಿ ಆರಂಭದಿಂದಲೂ ಉತ್ಸಾಹದಿಂದಲೇ ಮತದಾರರು ಪಾಲ್ಗೊಂಡಿದ್ದು, ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಸರಸ್ವತಿಪುರಂನ ಮತಗಟ್ಟೆ 44ರಲ್ಲಿ ಶೇ. 85 ಅತಿ ಹೆಚ್ಚು ಮತದಾನ । 53ರಲ್ಲಿ ಕಡಿಮೆ ಮತದಾನ ಕನ್ನಡಪ್ರಭ ವಾರ್ತೆ, ಬೀರೂರುಕಡೂರು ಕ್ಷೇತ್ರದ ಬೀರೂರು ಹೋಬಳಿಯ ಮತದಾನ ಪ್ರಕ್ರಿಯೆಯಲ್ಲಿ ಆರಂಭದಿಂದಲೂ ಉತ್ಸಾಹದಿಂದಲೇ ಮತದಾರರು ಪಾಲ್ಗೊಂಡಿದ್ದು, ಶಾಂತಿಯುತವಾಗಿ ಮುಕ್ತಾಯಗೊಂಡಿತು. ಪಟ್ಟಣ- ಗ್ರಾಮಾಂತರ ಭಾಗದಲ್ಲಿ ಬೆಳಗ್ಗೆ 7 ರಿಂದಲೇ ಆರಂಭವಾದ ಮತದಾನ ಬಹುತೇಕ ಮತಗಟ್ಟೆಗಳಲ್ಲಿ ಮಂದಗತಿ ಯಲ್ಲಿ ಸಾಗಿದರೂ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸುಡು ಬಿಸಿಲಿನ ತಾಪ ವಿದ್ದರೂ ಜನ ಮಧ್ಯಾಹ್ನದ ನಂತರವೂ ಮತದಾನ ಮಾಡಿದ್ದರಿಂದ ಪ್ರಮಾಣ ಏರಿಕೆ ಕಂಡಿತು. ಮೊದಲ ಬಾರಿಗೆ ಮತದಾನ ಅವಕಾಶ ಪಡೆದ ಯುವ ಮತದಾರರು ತಮ್ಮಹಕ್ಕು ಚಲಾಯಿಸಿದ ಸಂಭ್ರಮದಲ್ಲಿ ಸೆಲ್ಫಿ ತೆಗೆದುಕೊಂಡು, ಸಂತಸ ಹಂಚಿಕೊಂಡರು.ವಿಕಲಚೇತನರ ಅನುಕೂಲಕ್ಕೆ ಗಾಲಿಕುರ್ಚಿ ವ್ಯವಸ್ಥೆ, ಮಹಿಳೆಯರಿಗೆ ಪ್ರತ್ಯೇಕ ಪಿಂಕ್ ಮತಗಟ್ಟೆ ಮತದಾರರ ಆಸಕ್ತಿ ಹೆಚ್ಚಿಸು ವಂತೆ ಮಾಡಿತ್ತು. ಮತಗಟ್ಟೆಗಳ ಮುಂದೆ ವಿವಿಧ ಪಕ್ಷದ ಕಾರ್ಯಕರ್ತರ ಉತ್ಸಾಹದ ಜೊತೆಗೆ ಮತದಾರರ ಓಲೈಕೆ ಕಂಡುಬಂದಿತು. ಬೀರೂರು ಪಟ್ಟಣ ಹಾಗೂ ಸುತ್ತಮುತ್ತಲ ಹೋಬಳಿ ಪ್ರದೇಶಗಳಲ್ಲಿ ಮತದಾನ ಬಿರುಸಿನಿಂದ ಕೂಡಿತ್ತು. ಮತದಾರರು ಮತದಾನೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ತಳಿರು ತೋರಣಗಳಿಂದ ಮತಗಟ್ಟೆ ಸಿಂಗರಿಸಲಾಗಿತ್ತು. ಕೆಲ ಮತಗಟ್ಟೆಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಶಾಮಿಯಾನದ ವ್ಯವಸ್ಥೆ ಕಲ್ಪಿಸಿದ್ದರು.

ಬೀರೂರು ಪಟ್ಟಣ ವ್ಯಾಪ್ತಿಯ 23 ವಾರ್ಡಗಳ 21 ಮತಗಟ್ಟೆಗಳಿದ್ದು, ಅದರಲ್ಲಿ ಮಾರ್ಗದ ಕ್ಯಾಂಪ್ ಸ.ಹಿ.ಪ್ರಾ ಶಾಲೆ ಮತಗಟ್ಟೆ ಸಂಖ್ಯೆ 34ರಲ್ಲಿ 652 ಮತಚಲಾವಣೆಯಾಗಿ ಶೇ.77 ಮತದಾನವಾದರೆ ಮತಗಟ್ಟೆ 35ರಲ್ಲಿ 626 ಮತಚಲಾವಣೆಯಾಗಿ ಶೇ.74.94 ಮತದಾನವಾಗಿದೆ. ಮತಗಟ್ಟೆ 36ರ ರೈಲ್ವೇ ಕಾಲೋನಿ ಎಡಭಾಗದ ಕೇಂದ್ರದಲ್ಲಿ ಶೇ. 64.64, 37ರ ಬಲಭಾಗದಲ್ಲಿ ಶೇ. 74.64, ಉಪ್ಪಾರ ಕ್ಯಾಂಪ್ ನ ಮತಗಟ್ಟೆ 38ರಲ್ಲಿ ಶೇ. 68.97, ಉಪ್ಪಾರ ಕ್ಯಾಂಪ್ ನ 39ರಲ್ಲಿ ಶೇ. 63.45, ಕೆ.ಎಲ್.ಕೆ.ಪ್ರೌಢಶಾಲೆ 1ನೇ ಭಾಗದಲ್ಲಿ ಶೇ.62.15, ಅದರಲ್ಲಿನ 2ನೇ ಭಾಗದ ಮತಗಟ್ಟೆ 41ರಲ್ಲಿ ಶೇ. 62.15, ಹೊಸ ಅಜ್ಜಂಪುರ ರಸ್ತೆ ಸರಸ್ವತಿಪುರಂ ಹಿ.ಪ್ರಾಶಾಲೆ ಪೂರ್ವ ಭಾಗದ ಮತಗಟ್ಟೆ 42ರಲ್ಲಿ ಶೇ. 72.69, ಇದೇ ಶಾಲೆ ಮಧ್ಯಭಾಗದ 43ರಲ್ಲಿ ಶೇ. 77.89, ಇದೇ ಶಾಲೆ ಬಲಭಾಗದ 44ರಲ್ಲಿ ಶೇ.85.90, ಕುರುಬರ ಶಾಲೆ ಭೂ.ಸಂ.45ರಲ್ಲಿ ಶೇ. 71.96, ಖರೀದಿ ಪಾಲಮ್ಮ ಶಾಲೆ ಭೂ.ಸಂ.46ರಲ್ಲಿ ಶೇ. 67.27, ಇದೇ ಶಾಲೆ ದಕ್ಷಿಣ ಭಾಗ ಭೂ.ಸಂ.47ರಲ್ಲಿ ಶೇ.75.82 , ಶಾಸಕರ ಮಾದರಿ ಬಾಲಕರ ಶಾಲೆ ಭೂ.ಸಂ.48ರಲ್ಲಿ ಶೇ. 72.25 , ಪತ್ರೆ ಸುವರ್ಣಮ್ಮ ಬಾಲಕಿಯರ ಶಾಲೆ ಭೂ.ಸಂ.49ರಲ್ಲಿ ಶೇ. 67.89, ಅದೇ ಶಾಲೆ ಭೂ.ಸಂ.50ರಲ್ಲಿ ಶೇ. 78.86, ಉರ್ದು ಕಿ.ಪ್ರಾ.ಶಾಲೆ ಭೂ.ಸಂ.51ರಲ್ಲಿ ಶೇ. 80.74, ಗಣಪತಿ ಪೆಂಡಾಲ್‌ನ ಎ.ಎಂ.ಆರ್ ಬಾಲಕಿರ ಪ್ರೌಢಶಾಲೆ ಭೂ.ಸಂ.52ರಲ್ಲಿ ಶೇ. 67.01, ಇದೇ ಶಾಲೆ ಭೂ.ಸಂ.53ರಲ್ಲಿ ಶೇ. 58.63, ಪುರಸಭೆ ಭೂ.ಸಂ.54ರಲ್ಲಿ ಶೇ. 59.7 ರಲ್ಲಿ ಶಾಂತಿಯುತವಾಗಿ ಮತದಾನವಾಗಿದೆ.

-- ಬಾಕ್ಸ್--

ತಾಲೂಕಿನ 10 ಕಡೆ ಮತಯಂತ್ರದೋಷ

ಆರಂಭದಲ್ಲಿ ಬೀರೂರು ಪಟ್ಟಣದ ಹಳೇಪೇಟೆ, ಲಕ್ಷ್ಮೀಪುರ, ನರಸೀಪುರ, ಮಲ್ಲಿ ದೇವಿಹಳ್ಳಿ, ಮರವಂಜಿ, ತಂಗಲಿ, ವಡ್ಡರಹಟ್ಟಿ, ಉಪ್ಪಿನಹಳ್ಳಿ, ಹಾಗೂ ಬಳ್ಳಿಗನೂರು, ಚೋಮಹಳ್ಳಿ, ಬಿಳುವಾಲ, ಚೀಲನ ಹಳ್ಳಿ ಗ್ರಾಮದ ಮತಗಟ್ಟೆ ಕೇಂದ್ರ ಗಳಲ್ಲಿ ವಿವಿ ಪ್ಯಾಟ್‌ನಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಬದಲಿ ಮತಯಂತ್ರಗಳನ್ನು ಅಳವಡಿಸಿಕೊಳ್ಳಲಾಯಿತು.26 ಬೀರೂರು 1ಬೀರೂರು ಪಟ್ಟಣದ ಸರಸ್ವತಿಪುರಂ ಶಾಲೆಯ ಮತಗಟ್ಟೆ 42ರಲ್ಲಿ ಶುಕ್ರವಾರ ಮತದಾನ ಮಾಡಲು ಮತದಾರರು ಸರತಿಸಾಲಿನಲ್ಲಿ ನಿಂತಿರುವುದು.26 ಬೀರೂರು 2ಬೀರೂರು ಪಟ್ಟಣದ ರೈಲ್ವೇ ಕಾಲೋನಿ ಶಾಲೆ ಮತಗಟ್ಟೆ 36ಮತ ಕೇಂದ್ರದಲ್ಲಿ ಶುಕ್ರವಾರ ಮತದಾನ ಮಾಡಲು ಮತದಾರರು ಸರತಿಸಾಲಿನಲ್ಲಿ ನಿಂತಿರುವುದು.