ಬಂಟ್ವಾಳ ಕ್ಷೇತ್ರದಲ್ಲಿ ಶೇ. ೮೧.೨೮ ಮತದಾನ

| Published : Apr 28 2024, 01:26 AM IST

ಸಾರಾಂಶ

ಅನಂತಾಡಿ ಗ್ರಾಮದ ಬಾಬನಕಟ್ಟೆ ಶಾಲೆಯ ಕೊಠಡಿ ಸಂಖ್ಯೆ ೨ರಲ್ಲಿದ್ದ ಮತಗಟ್ಟೆ ಸಂಖ್ಯೆ ೨೦೯ ರಲ್ಲಿ ೯೧.೪೬ ಶೇಕಡಾ ಮತದಾನವಾಗಿದ್ದು ತಾಲೂಕಿನಲ್ಲಿ ಮುಂಚೂಣಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಒಟ್ಟು ೮೧.೨೮ಶೇ ಮತದಾನವಾಗಿದೆ. ಬಂಟ್ವಾಳ ಕ್ಷೇತ್ರದ ೨೪೯ ಮತಗಟ್ಟೆಗಳಲ್ಲಿ ೯೦೯೫೪ ಪುರುಷ ಹಾಗೂ ೯೬೪೦೭ ಮಹಿಳೆಯರೂ ಸೇರಿದಂತೆ ಒಟ್ಟು ೧,೮೭,೩೬೧ ಮತದಾರರು ಮತಚಲಾಯಿಸಿದ್ದಾರೆ.

ಅನಂತಾಡಿ ಗ್ರಾಮದ ಬಾಬನಕಟ್ಟೆ ಶಾಲೆಯ ಕೊಠಡಿ ಸಂಖ್ಯೆ ೨ರಲ್ಲಿದ್ದ ಮತಗಟ್ಟೆ ಸಂಖ್ಯೆ ೨೦೯ ರಲ್ಲಿ ೯೧.೪೬ ಶೇಕಡಾ ಮತದಾನವಾಗಿದ್ದು ತಾಲೂಕಿನಲ್ಲಿ ಮುಂಚೂಣಿಯಲ್ಲಿದೆ. ಉಳಿದಂತೆ ಚೆನೈತ್ತೋಡಿಯ ದಕ್ಷಿಣ ಭಾಗದ ಮತಗಟ್ಟೆ೨೫ ರಲ್ಲಿ ೯೦.೨೭ ಹಾಗೂ ಬಡಗಕಜೆಕಾರು ಮಾಡಪಲ್ಕೆ ಶಾಲೆಯ ೮೫ ನೇ ಮತಗಟ್ಟೆಯಲ್ಲಿ ೯೦.೧೫ ಶೇಕಡಾ ಮತದಾನವಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಉಳಿದಂತೆ ಬಿಮೂಡ ಗ್ರಾಮದ ಕೊಡಂಗೆ ಮತಗಟ್ಟೆ ಸಂಖ್ಯೆ ೧೨೪ರಲ್ಲಿ ಅತೀಕನಿಷ್ಠ ೬೯.೩೩ ಶೇಕಡ ಮತದಾನವಾಗಿದ್ದು, ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ಮತಗಟ್ಟೆ ೧೪ ೭ ರಲ್ಲಿ ಶೇ.೬೯.೩೩ ಮತದಾನವಾಗಿದೆ.