ನೇಹ ಹತ್ಯೆ ಪ್ರಕರಣದ ಆರೋಪಿಗಳ ಬಂಧಿಸಿ

| Published : Apr 23 2024, 12:57 AM IST

ಸಾರಾಂಶ

ನೇಹ ಹಿರೇಮಠ್ ಲವ್ ಜಿಹಾದಿ ಹತ್ಯೆಯ ಹಿಂದೆ ಯಾರ ಕೈವಾಡ ಇದೆಯೆಂಬುವುದನ್ನು ತನಿಖೆ ನಡೆಸಬೇಕು, ಆರೋಪಿಗಳನ್ನು ಬಂಧಿಸಬೇಕು, ಇಂತಹ ನೂರಾರು ಹತ್ಯೆಗಳು ನಡೆಯುತ್ತಿದ್ದು ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿಹಾಕಲಾಗುತ್ತಿದೆ ಎಂಬ ಆರೋಪ

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಕೊಲೆಗಳು ಹೆಚ್ಚಾಗಿದೆ. ಬಡವರಿಗೆ, ಮಹಿಳೆಯರಿಗೆ, ಭಕ್ತರಿಗೆ ರಕ್ಷಣೆ ಸಿಗದಂತಾಗಿದೆ. ಕಾಂಗ್ರೆಸ್‌ ಪಾಕಿಸ್ತಾನದ ಏಜೆಂಟ್‌ನಂತೆ ಆಡಳಿತ ನಡೆಸುತ್ತಿದೆ. ಹುಬ್ಬಳ್ಳಿಯ ನೇಹ ಹಿರೇಮಠ್ ಅವರ ಲವ್ ಜಿಹಾದಿ ಕೊಲೆಯನ್ನು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ವೈಯುಕ್ತಿಕ ವಿಚಾರ ಎಂದು ಹಗುರವಾಗಿ ಮಾತನಾಡಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ದೂರಿದರು. ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಜಿಲ್ಲಾ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದ್ ಬಾದ್ ಎಂಬ ಘೋಷಣೆ ಕೂಗಿ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದ್ದಾರೆಂದು ಟೀಕಿಸಿದರು.

ಜನತೆಗೆ ಕಾಂಗ್ರೆಸ್‌ ಚೊಂಬು

ರಾಜ್ಯದಲ್ಲಿ ಬಿಜೆಪಿ ನೀಡಿದಂತ ಅಕ್ಷಯ ಪಾತ್ರೆಯನ್ನು ಚೆಂಬು ಎಂದು ಟೀಕಿಸಿದ್ದಾರೆ. ದಲಿತರ ಮೀಸಲಾತಿ ಹಣವನ್ನು ಅಭಿವೃದ್ದಿಗೆ ಬಳಿಸದೆ ಗ್ಯಾರಂಟಿಗಳಿಗೆ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಜನತೆಗೆ ಚೆಂಬು ನೀಡಿದೆ ಎಂದರು .

ನೇಹ ಕೊಲೆ ತನಿಖೆ ನಡೆಸಿ

ನೇಹ ಹಿರೇಮಠ್ ಲವ್ ಜಿಹಾದಿ ಹತ್ಯೆಯ ಹಿಂದೆ ಯಾರ ಕೈವಾಡ ಇದೆಯೆಂಬುವುದನ್ನು ತನಿಖೆ ನಡೆಸಬೇಕು, ಆರೋಪಿಗಳನ್ನು ಬಂಧಿಸಬೇಕು, ಇಂತಹ ನೂರಾರು ಹತ್ಯೆಗಳು ನಡೆಯುತ್ತಿದ್ದು ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿಹಾಕಲಾಗುತ್ತಿದೆ, ಎಲ್ಲರೂ ಹಿಂದು ವಿರೋಧಿಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು. ಅನ್ಯಾಯದ ವಿರುದ್ದ ಹೋರಾಟ ಮಾಡುವುದು ಪ್ರಜಾಪ್ರಭುತ್ವದ ಹಕ್ಕು ಅಗಿದ್ದರೂ ಪೊಲೀಸರು ಕಾಂಗ್ರೆಸ್ ಸರ್ಕಾರದ ಗುಲಾಮರಂತೆ ವರ್ತಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರಜಾಪ್ರಭುತ್ವದ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ, ದೇಶ ದ್ರೋಹಿಗಳ ಚಟುವಟಿಗಳು ವ್ಯಾಪಕವಾಗಿದೆ, ಹಿಂದುಸ್ತಾನದಲ್ಲಿ ಪಾಕಿಸ್ತಾನ ಏಜೆಂಟ್‌ಗಳ ವಿರುದ್ದ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ಬೆಂಬಲ ಸಿಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹಿಂದು ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ರಾಜೀನಾಮೆ ನೀಡಲಿ

ನೇಹ ಹಿರೇಮಠ್ ಹತ್ಯೆಯು ವೈಯುಕ್ತಿಕ ವಿಚಾರವಾದರೆ ಇದೇ ರೀತಿ ಇಂದಿರಗಾಂಧಿ, ರಾಜೀವ್ ಗಾಂಧಿ ಹತ್ಯೆಗಳು ಅಗಿದ್ದಾಗ ತನಿಖೆ ಏಕೆ ಮಾಡಿದರು. ಕಾನೂನು ಕ್ರಮ ಏಕೆ ಕೈಗೊಂಡರು. ಅದನ್ನು ವೈಯುಕ್ತಿಕ ವಿಚಾರವೆಂದು ಕೈ ಬಿಡಬಹುದಾಗಿತ್ತಲ್ಲವೇ ಎಂದು ಪ್ರಶ್ನಿಸಿದರು. ಒಂದೇ ದಿನ ೧೦ ಕೊಲೆಗಳು ನಡೆದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದ ಜನತೆಯನ್ನು ರಕ್ಷಿಸಲು ಯೋಗ್ಯತೆ ಇಲ್ಲದ ಸರ್ಕಾರ ಕೂಡಲೇ ರಾಜೀನಾಮೆ ನೀಡಿ ಅಧಿಕಾರ ಬಿಟ್ಟು ತೊಲಗಲಿ ಎಂದು ಒತ್ತಾಯಿಸಿದರು.ಆರೋಪಿಗಳನ್ನು ಗಲ್ಲಿಗೇರಿಸಲಿ

ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡುವವರೆಗೂ, ನೇಹ ಹಿರೇಮಠ್ ಕೊಲೆ ಆರೋಪಿಗಳನ್ನು ಗಲ್ಲಿಗೆ ಏರಿಸುವವರೆಗೂ ಹೋರಾಟವನ್ನು ಬಿಡುವುದಿಲ್ಲ ಬಿಜೆಪಿ ಪಕ್ಷವು ರಾಜ್ಯದಾದ್ಯಂತ ಹೋರಾಟಗಳನ್ನು ಮುಂದುವರೆಸುತ್ತದೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ವೈ.ಸಂಪಂಗಿ, ಎಂ.ನಾರಾಯಣಸ್ವಾಮಿ, ವೆಂಕಟಮುನಿಯಪ್ಪ, ಕೆ.ಮಂಜುನಾಥ್ ಗೌಡ, ವರ್ತೂರು ಪ್ರಕಾಶ್, ಮುಖಂಡರಾದ ಸಿ.ಎಂ.ಆರ್. ಶ್ರೀನಾಥ್, ಬೆಗ್ಲಿಸೂರ್ಯಪ್ರಕಾಶ್, ಡಾ.ವೇಣುಗೋಪಾಲ್, ವೆಂಕಟೇಶ್‌ಮೌರ್ಯ, ಅರುಣಮ್ಮ, ಓಂಶಕ್ತಿ ಚಲಪತಿ, ವಿಜಯಕುಮಾರ್, ಕೆಂಬೋಡಿ ನಾರಾಯಣಸ್ವಾಮಿ, ಬಣಕನಹಳ್ಳಿ ನಟರಾಜ್, ಬಾಬು ಮೌನಿ, ಅಶೋಕ್, ಸಾ.ಮಾ.ಅನಿಲ್ ಬಾಬು, ಮಾಗೇರಿ ನಾರಾಯಣಸ್ವಾಮಿ, ಮಹೇಶ್, ಮುಳಬಾಗಿಲು ಸುಂದರ್, ದಲಿತ ಮುಖಂಡರಾದ ವೆಂಕಟಚಲಪತಿ, ರಾಜಕುಮಾರ್, ಹನುಮಂತಪ್ಪ ಇದ್ದರು.