26, 27ರಂದು ಮನೆಯಿಂದಲೇ ಮತದಾನ

| Published : Apr 23 2024, 12:57 AM IST

ಸಾರಾಂಶ

ಅರ್ಜಿ ಸಲ್ಲಿಸಿದ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲಿಕ್ಕೆ ನಿಯೋಜಿಸಲಾದ ತಂಡವು ಏ.26 ರಂದು ತಮ್ಮ ಮನೆಗೆ ತೆರಳಿದಾಗ ಅರ್ಹ ಮತದಾರರು ಮನೆಯಲ್ಲಿಯೇ ಇರಬೇಕು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲಿಕ್ಕೆ ಅವಕಾಶ ನೀಡಿದೆ. ಅದರಂತೆ ಏ.26 ಮತ್ತು 27 ರಂದು 85 ವರ್ಷ ಮೇಲ್ಪಟ್ಟ ವೃದ್ಧರು, ವಿಶೇಷ ಚೇತನರು ಹಾಗೂ ಕೋವಿಡ್-19 ಶಂಕಿತ ಅಥವಾ ಬಾಧಿತ ವ್ಯಕ್ತಿಗಳು ಮನೆಯಿಂದಲೇ ಮತದಾನ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

ಬಾಗಲಕೋಟೆ ಮತಕ್ಷೇತ್ರದಲ್ಲಿ ನರಗುಂದ ಮತಕ್ಷೇತ್ರ ಸೇರಿದಂತೆ ಒಟ್ಟು 2139 ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ಅದರಲ್ಲಿ 85 ವರ್ಷ ಮೇಲ್ಪಟ್ಟವರು 1420 ಹಾಗೂ ವಿಶೇಷ ಚೇತನರು 719 ಜನ ಇದ್ದಾರೆ. ಮತದಾನಕ್ಕೆ 97 ಮಾರ್ಗಗಳನ್ನು ಮಾಡಲಾಗಿದೆ. ಇಬ್ಬರು ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಆಬ್ಜರವರ್‌, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್‌ ತಲಾ ಒಬ್ಬರು ಸೇರಿದ ತಂಡವು ನೋಂದಾಯಿತ ಮತದಾರ ಮನೆಗೆ ತೆರಳಿ ಮತದಾನ ಮಾಡಿಸಲಿದ್ದಾರೆ. ಈ ಕಾರ್ಯಕ್ಕೆ 485 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅರ್ಜಿ ಸಲ್ಲಿಸಿದ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲಿಕ್ಕೆ ನಿಯೋಜಿಸಲಾದ ತಂಡವು ಏ.26 ರಂದು ತಮ್ಮ ಮನೆಗೆ ತೆರಳಿದಾಗ ಅರ್ಹ ಮತದಾರರು ಮನೆಯಲ್ಲಿಯೇ ಇರಬೇಕು. ಆ ಸಮಯದಲ್ಲಿ ಮತದಾರ ಲಭ್ಯವಿಲ್ಲದಿದ್ದರೆ,ಏ.27 ರಂದು ಮತ್ತೊಂದು ಬಾರಿ ಭೇಟಿ ನೀಡಲಾಗುತ್ತದೆ. ಆಗಲೂ ಮತದಾರ ಲಭ್ಯವಾಗದಿದ್ದರೆ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಅಲ್ಲದೇ ಗೈರು ಹಾಜರಿ ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಲು ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮುಧೋಳ ಕ್ಷೇತ್ರದಲ್ಲಿ 188 ಹಿರಿಯ ನಾಗರಿಕರು, 101 ವಿಶೇಷ ಚೇತನರು ಸೇರಿ ಒಟ್ಟು 289 ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ತೇರದಾಳ ಕ್ಷೇತ್ರದಲ್ಲಿ 206 ಹಿರಿಯ ನಾಗರಿಕರು, 117 ವಿಶೇಷ ಚೇತನರು ಸೇರಿ ಒಟ್ಟು 323. ಜಮಖಂಡಿ ಮತಕ್ಷೇತ್ರದಲ್ಲಿ 97 ಹಿರಿಯ ನಾಗರಿಕರು, 50 ವಿಶೇಷ ಚೇತನರು ಸೇರಿ ಒಟ್ಟು 147. ಬೀಳಗಿ ಮತಕ್ಷೇತ್ರದಲ್ಲಿ 292 ಹಿರಿಯ ನಾಗರಿಕರು, 125 ವಿಶೇಷ ಚೇತನರು ಸೇರಿ ಒಟ್ಟು 417. ಬಾದಾಮಿ ಮತಕ್ಷೇತ್ರದಲ್ಲಿ 210 ಹಿರಿಯ ನಾಗರಿಕರು, 116 ವಿಶೇಷ ಚೇತನರು ಸೇರಿ ಒಟ್ಟು 326. ಬಾಗಲಕೋಟೆ ಮತಕ್ಷೇತ್ರದಲ್ಲಿ 198 ಹಿರಿಯ ನಾಗರಿಕರು, 82 ವಿಶೇಷ ಚೇತನರು ಸೇರಿ ಒಟ್ಟು 280 ಹಾಗೂ ಹುನಗುಂದ ಮತಕ್ಷೇತ್ರದಲ್ಲಿ 146 ಹಿರಿಯ ನಾಗರಿಕರು, 73 ವಿಶೇಷ ಚೇತನರು ಸೇರಿ ಒಟ್ಟು 219 ಇದ್ದಾರೆ. ನರಗುಂದ ಮತಕ್ಷೇತ್ರದಲ್ಲಿ 83 ಹಿರಿಯ ನಾಗರಿಕರು, 55 ವಿಶೇಷ ಚೇತನರು ಸೇರಿ ಒಟ್ಟು 138 ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೋಟ್..

ನಿಯೋಜಿಸಲಾದ ತಂಡವು ಏ.26 ರಂದು ತಮ್ಮ ಮನೆಗೆ ತೆರಳಿದಾಗ ಅರ್ಹ ಮತದಾರರು ಮನೆಯಲ್ಲಿಯೇ ಇರಬೇಕು. ಆ ಸಮಯದಲ್ಲಿ ಮತದಾರ ಲಭ್ಯವಿಲ್ಲದಿದ್ದರೆ,ಏ.27 ರಂದು ಮತ್ತೊಂದು ಬಾರಿ ಭೇಟಿ ನೀಡಲಾಗುತ್ತದೆ. ಆಗಲೂ ಮತದಾರ ಲಭ್ಯವಾಗದಿದ್ದರೆ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಅಲ್ಲದೇ ಗೈರು ಹಾಜರಿ ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಲು ಅವಕಾಶ ಇರುವುದಿಲ್ಲ.

ಜಾನಕಿ ಕೆ.ಎಂ. ಜಿಲ್ಲಾ ಚುನಾವಣಾಧಿಕಾರಿ