ಬೆಳ್ತಂಗಡಿ ಕ್ಷೇತ್ರದಲ್ಲಿ ಶೇ.81.30 ಮತದಾನ

| Published : Apr 28 2024, 01:21 AM IST

ಸಾರಾಂಶ

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ 86ನೇ ಬೂತು ನೆರಿಯ ಗ್ರಾಮದ ಬಾಂಜಾರು ಸಮುದಾಯ ಭವನದ ಮತ ಗಟ್ಟೆಯಲ್ಲಿ ಎಲ್ಲ 51 ಪುರುಷರು ಮತ್ತು 60 ಮಹಿಳೆಯರು ಮತದಾನ ಮಾಡಿ ಶೇ.100 ಗರಿಷ್ಠ ಮತದಾನ ಮಾಡಿ ದಾಖಲೆ ನಿರ್ಮಿಸಿದೆ.

ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಒಟ್ಟು 241 ಬೂತುಗಳಲ್ಲಿ ಶೇ 81.30 ಮತದಾನ ನಡೆದಿದೆ.

ಕ್ಷೇತ್ರದ ಒಟ್ಟು 1,15,331 ಪುರುಷರು,1,17,485 ಮಹಿಳೆಯರು, ಒಬ್ಬರು ಇತರರು ಸೇರಿದಂತೆ ಒಟ್ಟು 2.32,817 ಮತದಾರರಲ್ಲಿ 93,733 ಪುರುಷರು ಹಾಗೂ 95,552 ಮಹಿಳೆಯರು ಮತದಾನ ಮಾಡುವ ಮೂಲಕ ಶೇ 81.30 ಮತದಾನ ದಾಖಲಿಸಿದ್ದಾರೆ.

ಗರಿಷ್ಠ ಮತದಾನ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ 86ನೇ ಬೂತು ನೆರಿಯ ಗ್ರಾಮದ ಬಾಂಜಾರು ಸಮುದಾಯ ಭವನದ ಮತ ಗಟ್ಟೆಯಲ್ಲಿ ಎಲ್ಲ 51 ಪುರುಷರು ಮತ್ತು 60 ಮಹಿಳೆಯರು ಮತದಾನ ಮಾಡಿ ಶೇ.100 ಗರಿಷ್ಠ ಮತದಾನ ಮಾಡಿ ದಾಖಲೆ ನಿರ್ಮಿಸಿದೆ.

ಉಜಿರೆಯ ಎಸ್‌ಡಿಎಂ ಅನುದಾನಿತ ಶಾಲೆಯ ಬೂತ್ 94 ರಲ್ಲಿ ಶೇ. 65.91 ಕನಿಷ್ಠ ಮತದಾನ ದಾಖಲೆಯಾಗಿದೆ. ನಾರಾವಿ ಗ್ರಾಮ ಪಂಚಾಯಿತಿ 1ರಲ್ಲಿ ಶೇ 67.99 , ಬೂತ್ 92 ಉಜಿರೆ ಶ್ರೀ ಧ ಮಂ ಶಿಕ್ಷಕ ತರಬೇತಿ ಕೇಂದ್ರದಲ್ಲಿ ಶೇ.69, ನೆರಿಯ ಗಂಡಿಬಾಗಿಲು ದ.ಕ.ಜಿ.ಪಂ.ಹಿ ಪ್ರ. ಶಾಲೆ ಬೂತ್ 85ರಲ್ಲಿ ಶೇ 65.98 ಮತದಾನವಾಗಿದ್ದು ಉಳಿದಂತೆ ಎಲ್ಲ ಬೂತುಗಳಲ್ಲಿ ಶೇ.70ಕ್ಕಿಂತ ಹೆಚ್ಚು ಮತದಾನವಾಗಿದೆ.