ಹೆದ್ದಾರಿ ಟೋಲ್‌ ದರ ಹೆಚ್ಚಳಕ್ಕೆ ಆಯೋಗ ಬ್ರೇಕ್

| Published : Apr 02 2024, 01:05 AM IST / Updated: Apr 02 2024, 06:42 AM IST

ಸಾರಾಂಶ

ಹೆದ್ದಾರಿಗಳಲ್ಲಿ ಟೋಲ್‌ ದರ ಹೆಚ್ಚಳ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಸ್ತಾವಕ್ಕೆ ಚುನಾವಣಾ ಆಯೋಗ ಅಸ್ತು ಎಂದಿದೆ.

ನವದೆಹಲಿ: ಹೆದ್ದಾರಿಗಳಲ್ಲಿ ಟೋಲ್‌ ದರ ಹೆಚ್ಚಳ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಸ್ತಾವಕ್ಕೆ ಚುನಾವಣಾ ಆಯೋಗ ಅಸ್ತು ಎಂದಿದೆ. ಆದರೆ, ಏ.1ರ ಬದಲು ಲೋಕಸಭೆ ಚುನಾವಣೆಗಳು ಮುಗಿದ ನಂತರ ದರ ಜಾರಿಗೊಳಿಸಬೇಕು ಎಂದು ಸೂಚಿಸಿದೆ. ಇದರಿಂದಾಗಿ ಏ.1ರಿಂದ ಹೈವೇ ಟೋಲ್‌ ದರ ಹೆಚ್ಚಳ ಬಿಸಿಯಿಂದ ಸದ್ಯಕ್ಕೆ ವಾಹನ ಸವಾರರು ಪಾರಾದಂತಾಗಿದೆ.

ಚುನಾವಣಾ ಪ್ರಕ್ರಿಯೆಗಳು ಜೂ.4ಕ್ಕೆ ಮುಗಿಯುತ್ತವೆ. ಹೀಗಾಗಿ ಜೂ.5ರವರೆಗೆ ಪರಿಷ್ಕೃತ ದರಗಳು ಜಾರಿಗೆ ಬರದೇ ಹಳೆಯದೇ ದರಗಳು ಮುಂದುವರಿಯಲಿವೆ.

ವಾರ್ಷಿಕ ಪದ್ಧತಿಯಂತೆ ಏ.1ರಿಂದ ಶೇ.5ರಷ್ಟು ಟೋಲ್‌ ದರ ಹೆಚ್ಚಳ ನಿರ್ಧರಿಸಿದ್ದ ಹೆದ್ದಾರಿ ಪ್ರಾಧಿಕಾರ, ಈಗ ಚುನಾವಣೆ ನಡೆಯುತ್ತಿರುವ ಕಾರಣ ಆಡಳಿತದ ಹೊಣೆ ಹೊತ್ತಿರುವ ಚುನಾವಣಾ ಅನುಮತಿ ಬೇಡಿತ್ತು. ಇದಕ್ಕೆ ಆಯೋಗ ಪ್ರತಿಕ್ರಿಯಿಸಿದೆ.