2 ಹೆಂಡಿರು ಇದ್ರೆ ಡಬಲ್ ಹಣ: ಕೈ ನಾಯಕ ವಿವಾದ

| Published : May 10 2024, 11:50 PM IST

2 ಹೆಂಡಿರು ಇದ್ರೆ ಡಬಲ್ ಹಣ: ಕೈ ನಾಯಕ ವಿವಾದ
Share this Article
  • FB
  • TW
  • Linkdin
  • Email

ಸಾರಾಂಶ

ಇಬ್ಬರು ಪತ್ನಿಯರನ್ನು ಹೊಂದಿರುವ ಪುರುಷರಿಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಮಹಾಲಕ್ಷ್ಮಿ ಯೋಜನೆಯಡಿ ಡಬಲ್ ನೆರವು ಸಿಗಲಿದೆ’ ಎಂದು ಮಧ್ಯಪ್ರದೇಶದ ರತ್ಲಾಮ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಂತಿಲಾಲ್ ಭೂರಿಯಾ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ರತ್ಲಾಮ್ (ಮಧ್ಯಪ್ರದೇಶ): ‘ಇಬ್ಬರು ಪತ್ನಿಯರನ್ನು ಹೊಂದಿರುವ ಪುರುಷರಿಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಮಹಾಲಕ್ಷ್ಮಿ ಯೋಜನೆಯಡಿ ಡಬಲ್ ನೆರವು ಸಿಗಲಿದೆ’ ಎಂದು ಮಧ್ಯಪ್ರದೇಶದ ರತ್ಲಾಮ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಂತಿಲಾಲ್ ಭೂರಿಯಾ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.ಸೈಲಾನದಲ್ಲಿ ಚುನಾವಣಾ ರ್‍ಯಾಲಿ ವೇಳೆ ಭೂರಿಯಾ ‘ನಮ್ಮ ಪಕ್ಷ ಗೆದ್ದರೆ ಪ್ರತಿ ಬಡ ಮಹಿಳೆಗೆ 1 ಲಕ್ಷ ರು. ನೀಡುವ ಭರವಸೆ ನೀಡಿದೆ. ಆ ಹಣ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಯಾರು ಇಬ್ಬರು ಹೆಂಡತಿಯರನ್ನು ಹೊಂದಿರುತ್ತಾರೆಯೋ ಅವರಿಬ್ಬರೂ ಈ ಯೋಜನೆಗೆ ಒಳ ಪಡುವುದರಿಂದ ಪತಿಗೆ 2 ಲಕ್ಷ ರು. ಸಿಗಲಿದೆ’ಎಂದರು.

ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಜೀತು ಪಟವಾರಿ ಅವರು ಇದು ಅದ್ಭುತ ಘೋಷಣೆ ಎಂದಿದ್ದಾರೆ.

ಆದರೆ ಭುರಿಯಾ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ‘ಅವರ ವಿರುದ್ಧ ಚುನಾವಣಾ ಚುನಾವಣಾ ಆಯೋಗ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದೆ.