ಪಾಕ್‌ಗೆ ಮತ ಹಾಕಿದಂತೆ ಎಂದ ನವನೀತ್‌ ವಿರುದ್ಧ ಎಫ್‌ಐಆರ್‌

| Published : May 11 2024, 12:00 AM IST / Updated: May 11 2024, 05:16 AM IST

ಪಾಕ್‌ಗೆ ಮತ ಹಾಕಿದಂತೆ ಎಂದ ನವನೀತ್‌ ವಿರುದ್ಧ ಎಫ್‌ಐಆರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ಗೆ ಮತ ಹಾಕುವುದು ಎಂದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ನವನೀತ್ ರಾಣಾ ವಿರುದ್ಧ ಶುಕ್ರವಾರ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ.

ಹೈದರಾಬಾದ್‌: ಕಾಂಗ್ರೆಸ್‌ಗೆ ಮತ ಹಾಕುವುದು ಎಂದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ನವನೀತ್ ರಾಣಾ ವಿರುದ್ಧ ಶುಕ್ರವಾರ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ.

ಇಲ್ಲಿ ಗುರುವಾರ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ವಿರುದ್ಧ ವಾಗ್ದಾಳಿ ನಡೆಸಿದ ನವನೀತ್‌ ರಾಣಾ ಅವರು, ‘ಕಾಂಗ್ರೆಸ್‌ಗೆ ಮತ ಹಾಕುವುದೆಂದರೆ ಪಾಕಿಸ್ತಾನಕ್ಕೆ ಮತ ಹಾಕುವುದು, 15 ಸೆಕೆಂಡುಗಳ ಕಾಲ ಪೊಲೀಸರನ್ನು ಕರ್ತವ್ಯದಿಂದ ತೆಗೆದು ಹಾಕಿದರೆ, ಓವೈಸಿ ಸೋದರರು ಎಲ್ಲಿಂದ ಬಂದರು ಮತ್ತೆ ಎಲ್ಲಿಗೆ ಹೋದರು ಎಂದು ತಿಳಿಯುವುದಿಲ್ಲ’ ಎಂದು ಹೇಳಿದ್ದರು.

ಈ ಹೇಳಿಕೆಗೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತೀವ್ರ ಕಿಡಿಕಾರಿದ್ದರು.