ಮೋದಿಯಂತೇ ಕಾಣುವ ಪಾನಿಪುರಿ ಮಾರಾಟಗಾರ

| Published : Apr 28 2024, 01:19 AM IST / Updated: Apr 28 2024, 05:13 AM IST

ಸಾರಾಂಶ

ಠಕ್ಕರ್‌ ಜೊತೆ ಸೆಲ್ಫಿ ಪಡೆದು ಪ್ರವಾಸಿಗರ ಸಂಭ್ರಮ ತಾರಕಕ್ಕೇರಿದ್ದು, ಅಹಮದಾಬಾದಿನಲ್ಲಿ ಪಾನಿಪುರಿ ಅಂಗಡಿಗೆ ಭಾರೀ ಖ್ಯಾತಿ ಬಂದಿದೆ.

ಅಹಮದಾಬಾದ್: ಜಗತ್ತಿನಲ್ಲಿ ಮನುಷ್ಯರನ್ನು ಹೋಲುವ ರೀತಿಯಲ್ಲಿ 7 ಮಂದಿ ಇರುತ್ತಾರೆ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುವ ಒಬ್ಬ ಪಾನಿಪುರಿ ಮಾರಾಟಗಾರೊಬ್ಬರು ಗುಜರಾತಿನಲ್ಲಿದ್ದಾರೆ.

ಗುಜರಾತಿನ ಆನಂದ್‌ನಲ್ಲಿ ತುಳಸಿ ಪಾನಿಪುರಿ ಅಂಗಡಿ ಮಾಲೀಕ 71 ವರ್ಷದ ಅನಿಲ್‌ ಭಟ್‌ ಠಕ್ಕರ್‌ ಅವರು ಥೇಟ್‌ ನೋಡಲು ಪ್ರಧಾನಿ ಮೋದಿ ಅವರಂತೆ ಕಾಣುತ್ತಿದ್ದಾರೆ. ಇಲ್ಲಿಯ ಸ್ಥಳೀಯರು ಅವರಿಗೆ ಪ್ರಧಾನಿ ಮೋದಿ ಎಂದೇ ಭಾವಿಸಿ ತುಂಬಾ ಗೌರವ ಕೊಡುತ್ತಾರೆ.

ಈ ಬಗ್ಗೆ ಠಕ್ಕರ್‌ ಮಾತನಾಡಿ, ‘ನಾನು ನೋಡಲು ಮೋದಿ ಅವರಂತೆ ಕಾಣುತ್ತಿರುವುದರಿಂದ ನಮ್ಮ ಅಂಗಡಿಗೆ ಬರುವ ಗ್ರಾಹಕರಿಂದ ಸಾಕಷ್ಟು ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದಾರೆ. ನನ್ನೊಂದಿಗೆ ಪ್ರವಾಸಿಗರು ಸೆಲ್ಫೀ ಕೂಡ ತೆಗೆಸಿಕೊಳ್ಳುತ್ತಾರೆ’ ಎಂದು ಹೇಳಿದರು.

ಠಕ್ಕರ್‌ ಜೊತೆ ಮುಂಬೈನ ಮಲಾಡ್‌ನವರಾದ ವಿಕಾಸ್‌ ಮಹಾಂತೇ ಕೂಡ ಪ್ರಧಾನಿ ಮೋದಿ ಅವರನ್ನು ಹೋಲುತ್ತಾರೆ. ಇವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಗರ್ಬಾ ನುಡಿಸಿದ್ದರು. ಈ ವಿಡಿಯೋ ವೈರಲ್‌ ಆಗಿದ್ದು, ಮೋದಿ ಅವರ ಡೀಪ್‌ಫೇಕ್‌ ವಿಡಿಯೋ ಎಂದು ತಪ್ಪಾಗಿ ಗ್ರಹಿಸಲಾಗಿತ್ತು.

ಮಹಾಂತೇ ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಒಟ್ಟಾರೆಯಾಗಿ ಠಕ್ಕರ್‌ ಹಾಗೂ ಮಹಾಂತೇ ಅವರು ಪ್ರಧಾನಿ ಮೋದಿ ಅವರಂತೆ ಕಾಣುವ ಸತ್ಯಾಂಶ ಒಪ್ಪಲೇಬೇಕು.